ಚಿತ್ರದುರ್ಗ: ಕೇಂದ್ರದ ವಿಕಸಿತ ಭಾರತ ಉದ್ಯೋಗ ಖಾತ್ರಿ ಮತ್ತು ಜೀವನೋಪಾಯ ಮಿಷನ್(ಗ್ರಾಮೀಣ), ವಿಬಿಜಿ ರಾಮ್‌ಜಿ ಯೋಜನೆಯಿಂದ ಗ್ರಾಮೀಣ ಭಾಗದಲ್ಲಿ ಶಾಶ್ವತ ಆಸ್ತಿ ನಿರ್ಮಾಣಕ್ಕೆ ಒತ್ತು ನೀಡಲಾಗಿದೆ ಎಂದು ಎಂಎಲ್‌ಸಿ ಕೆ.ಎಸ್. ನವೀನ್ ಹೇಳಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಹಾತ್ಮಗಾಂಽ ನರೇಗಾ ಯೋಜನೆಗೆ ತಿದ್ದುಪಡಿ ಮೂಲಕ ವಿಬಿಜಿ ರಾಮ್‌ಜಿ ಯ ಡಿ, ಈ ಮೊದಲಿದ್ದ ೧೦೦ ಕೆಲಸದ ದಿನಗಳನ್ನು ೧೨೫ಕ್ಕೆ ಹೆಚ್ಚಿಸಲಾಗಿದೆ. ಕೂಲಿಕಾರರಿಗೆ ವೇತನವನ್ನು ಒಂದು ವಾರ ಮೊದಲೇ ಬಿಡುಗಡೆಯಾಗುತ್ತದೆ. ವೇತನಕ್ಕೆ ಕಾರ್ಮಿಕರು ಇನ್ನು ಮುಂದೆ ಕಾಯವಂತಿಲ್ಲ ಎಂದರು.
ಅನುದಾನದ ಶೇ.೯೦-೧೦ ಅನುಪಾತವನ್ನು ಶೇ. ೬೦-೪೦ಕ್ಕೆ ನಿಗದಿ ಪಡಿಸಲಾಗಿದೆ. ರಾಜ್ಯಸರ್ಕಾರ ಶೇ.೪೦ ಅನುದಾನ ಕೊಡಬೇಕಾಗಿರುವುದರಿಂದ ಅದರ ಹೊಣೆಗಾರಿಕೆ ಹೆಚ್ಚಾಗಲಿದೆ. ಭ್ರಷ್ಟಾಚಾರಕ್ಕೆ ಹಾಗೂ ಗ್ರಾಪಂಗಳಿಗೆ ಮನಸೋ ಇಚ್ಛೆ ಅನು ದಾನ ಹಂಚಿಕೆಗೂ ಕಡಿವಾಣ ಬೀಳಲಿದೆ ಎಂದು ತಿಳಿಸಿದರು.
ಗ್ರಾಮಸಭೆಗಳಲ್ಲೇ ಕಾಮಗಾರಿಗಳನ್ನು ಗ್ರಾಪಂಗಳು ನಿರ್ಧರಿಸಬೇಕಿದೆ. ಕಾಮಗಾರಿ ವಿವರ ಸಂಪೂರ್ಣ ಡಿಜಿಟಲೀಕರಣವಾಗಿರ ಲಿದೆ. ನಗರಕ್ಕೆ ಹೊಂದಿಕೊAಡಿರುವ ಗ್ರಾಪಂಗಳ ಸಹಿತ ಅನುದಾನ ಹಂಚಿಕೆಗೆ ಗ್ರಾಪಂಗಳನ್ನು ವಿಂಗಡಿಸಲಾಗುತ್ತದೆ. ನರೇಗಾ ಯೋಜನೆ ಹೆಸರು ಬದಲಿಸಿ ಗಾಂಽÃಜಿ ಅವರನ್ನು ಅವಮಾನಿಸಲಾಗಿದೆ ಎಂಬ ಕೇಂದ್ರದ ಪ್ರತಿಪಕ್ಷ ನಾಯಕ ರಾಹುಲ್‌ಗಾಂಽ ಸಹಿತ ಕಾಂಗ್ರೆಸ್ ನಾಯಕರ ಆರೋಪ ಸರಿಯಲ್ಲ. ಮಹಾತ್ಮ ಗಾಂಽÃಜಿ ಅವರ ಆಶಯಗಳ ಈಡೇರಿಕೆಗೆ ಕಾಯ್ದೆಗೆ ತಿದ್ದುಪಡಿ ತರಲಾಗಿದೆ.
೪೦-೫೦ ವರ್ಷಗಳಲ್ಲಿ ನೂರಾರು ಯೋಜನೆಗಳಿಗೆ ಜವಾಹಲಾಲ್‌ನೆಹರು, ಇಂದಿರಾಗಾAಽ, ರಾಜೀವ್‌ಗಾಂಽ ಅವರ ಹೆಸರನ್ನು ಇಟ್ಟಿ ರುವ ಕಾಂಗ್ರೆಸ್ಸಿಗೆ ಕೇಂದ್ರವನ್ನು ಟೀಕಿಸಲು ಯಾವ ನೈತಿಕತೆ ಇದೆ? ೨೦೦೪ರಿಂದ ೨೦೧೪ ರವರೆಗೆ ೨ ಲಕ್ಷ ಕೋಟಿ ರೂ. ಬಿಡುಗಡೆ ಆಗಿದ್ದರೆ,ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಈವರೆಗೆ ೮.೫೦ ಲಕ್ಷ ಕೋಟಿ ರೂ.ಅನುದಾನ ಕೊಟ್ಟಿದೆ.
ಪ್ರತಿಪೈಸೆಯೂ ಸದ್ಬಳಕೆ ಆಗಬೇಕೆಂಬುದು ಪ್ರಧಾನಿ ಉದ್ದೇಶವಾಗಿದೆ. ಬ್ರೋಕರ್ ಭಾಗ್ಯ ತಪ್ಪಿಸಿ ಫಲಾನುಭವಿಗಳಿಗೆ ನೇರವಾಗಿ ವೇತನ ತಲುಪಿಸುವುದು ಹಾಗೂ ಆಸ್ತಿ ಸೃಜನೆ ಹೊಸ ಯೋಜನೆಯಿಂದ ಸಾಧ್ಯವಾಗಲಿದೆ. ಈ ನಿಟ್ಟಿನಲ್ಲಿ ಬಿಜೆಪಿ ಪ್ರತಿಹಳ್ಳಿಯ ಜನರಲ್ಲಿ ಜಾಗೃತಿ ಮೂಡಿಸಲಿದೆ ಎಂದರು.
ಈ ಹಿಂದೆ ನರೇಗಾದಡಿ ಚಿತ್ರದುರ್ಗ ಜಿಲ್ಲೆಗೆ ೧೨೦೦ ಕೋಟಿ ರೂ.ಈವರೆಗೆ ಬಂದಿದೆ. ಇದರಲ್ಲಿ ಸಾಕಷ್ಟು ಭ್ರಷ್ಟಾಚಾರವಾಗಿದೆ. ಬಳ್ಳಾರಿ ಯಲ್ಲಿ ನಡೆದ ಬ್ಯಾನರ್ ಗಲಾಟೆಯಲ್ಲಿ ಅಮಾಯಕ ಕಾಂಗ್ರೆಸ್ ಕಾರ್ಯಕರ್ತ ಅಸುನೀಗಿದ್ದಾನೆ. ಬಳ್ಳಾರಿ ಶಾಸಕ ಭರತ್ ರೆಡ್ಡಿ ಮತ್ತಿತರರನ್ನು ಕೂಡಲೇ ರಾಜ್ಯ ಸರ್ಕಾರ ಬಂಽಸಬೇಕು. ಜ.೧೭ರಂದು ಬಳ್ಳಾರಿಯಲ್ಲಿ ಬಿಜೆಪಿ ಪ್ರತಿಭಟನೆ ಹಮ್ಮಿಕೊಂಡಿದೆ ಎಂದು ತಿಳಿಸಿದರು.
ಹುಬ್ಬಳ್ಳಿಯಲ್ಲಿ ಬಿಜೆಪಿ ಕಾರ್ಯಕರ್ತೆಯನ್ನು ಪೊಲೀಸರು ವಿವಸ್ತçಗೊಳಿಸಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದ ನವೀನ್, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಇಲ್ಲವಾಗಿದೆ ಎಂದು ಟೀಕಿಸಿದರು.
ಪಕ್ಷದ ಜಿಲ್ಲಾಧ್ಯಕ್ಷ ಕೆ.ಟಿ. ಕುಮಾರಸ್ವಾಮಿ, ಸಂಪತ್ ಕುಮಾರ್, ಮಲ್ಲಿಕಾರ್ಜನ್, ವೆಂಕಟೇಶ್‌ಯಾದವ್, ನಾಗರಾಜ್‌ಬೇದ್ರೆ, ಲೋಕೇಶ್ ಹಾಗೂ ಪಾಪಯ್ಯ ಇದ್ದರು.