೨ ರೈಲ್ವೆ ಮೇಲು ಸೇತುವೆಗಳ ನಿರ್ಮಾಣಕ್ಕೆ ಭೂಮಿ ಪೂಜೆ

ಚಿತ್ರದುರ್ಗ ರೈಲ್ವೇ ಗೇಟ್ ೨೨ರ
ಚಿತ್ರದುರ್ಗ ರೈಲ್ವೇ ಗೇಟ್ ೨೨ರ
Published on

ಪ್ರಮುಖ ಮುಖ್ಯಾಂಶಗಳು

  • ರೈಲ್ವೆ ಸಚಿವ ವಿ.ಸೋಮಣ್ಣ ಭಾಗಿ
  • ಸಂಸದ ಗೋವಿಂದ ಕಾರಜೋಳ ಮಾಹಿತಿ
  • ಶಂಕುಸ್ಥಾಪನೆ

ಚಿತ್ರದುರ್ಗ:

ಜಿಲ್ಲೆಯ ೩ ಪ್ರಮುಖ ಸ್ಥಳಗಳಲ್ಲಿ ರೈಲ್ವೆ ಮೇಲು ಸೇತುವೆ ನಿರ್ಮಿಸಬೇಕೆಂಬ ಬಹು ವರ್ಷಗಳ ಬೇಡಿಕೆ ಈಡೇರುವ ಕಾಲ ಕೂಡಿ ಬಂದಿದೆ.

ಚಿತ್ರದುರ್ಗದಿAದ ದಾವಣಗೆರೆಗೆ ಹೋಗುವ ಮಾರ್ಗದ ರೈಲ್ವೆ ಲೆವೆಲ್ ಕ್ರಾಸಿಂಗ್-೨೨ಕ್ಕೆ ಹಾಗೂ ಹೊಳಲ್ಕೆರೆ ತಾಲೂಕು ಚಿಕ್ಕಜಾಜೂರು ಬಳಿಯ ರೈಲ್ವೆ ಗೇಟ್ ೧ಕ್ಕೆ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಆ.೩೦ರಂದು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಅಂದು ಬೆಳಗ್ಗೆ ೧೧.೧೫ಕ್ಕೆ ಚಿತ್ರದುರ್ಗಕ್ಕೆ ಆಗಮಿಸಿ ನಗರದಲ್ಲಿ ರೈಲ್ವೆ ಸ್ಟೇಷನ್ ಸಮೀಪದ ಮೇಲು ಸೇತುವೆ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲಿದ್ದಾರೆ. ಬಳಿಕ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಲಿದ್ದಾರೆ. ಮಧ್ಯಾಹ್ನ ೨ಕ್ಕೆ ಚಿಕ್ಕಜಾಜೂರಿಗೆ ಸಮೀಪದ ರೈಲ್ವೆ ಮೇಲು ಸೇತುವೆ ಕಾಮಗಾರಿ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ತಮ್ಮ ಸತತ ಪ್ರಯತ್ನದ -Àಲವಾಗಿ ರೈಲ್ವೆ ಸಚಿವಾಲಯ ಚಿತ್ರದುರ್ಗ ನಗರದ ರೈಲ್ವೆ ಮೇಲು ಸೇತುವೆ ನಿರ್ಮಾಣಕ್ಕೆ ೩೨.೫೧ ಕೋಟಿ ರೂ.ಹಾಗೂ ಚಿಕ್ಕಜಾಜೂರು ರೈಲ್ವೆ ಮೇಲು ಸೇತುವೆಗೆ ೨೫.೧೫ ಕೋಟಿ ರೂ.ಅನುದಾನ ಮಂಜೂರಾಗಿದ್ದು, ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ ಎಂದು ಸಂಸದ ಗೋವಿಂದ ಎಂ. ಕಾರಜೋಳ ಅವರು ಹೇಳಿಕೆಯಲ್ಲಿ ಹರ್ಷ ವ್ಯಕ್ತಪಡಿಸಿದ್ದಾರೆ.
ಹಳಿಯೂರು ಬಳಿಯ ರೈಲ್ವೆ ಲೆವೆಲ್ ಕ್ರಾಸಿಂಗ್೫ಕ್ಕೆ ಮೇಲು ಸೇತುವೆ ನಿರ್ಮಿಸಲು ಅಗತ್ಯ ಭೂಸ್ವಾಽÃನ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಸಂಸದರು ಮಾಹಿತಿ ನೀಡಿದ್ದಾರೆ.
ಸಂಚಾರ ಸಿಕ್ಕು
ಚಿತ್ರದುರ್ಗ-ದಾವಣಗೆರೆ ಮಾರ್ಗದ ಎಲ್‌ಸಿ-೨೨ರ ಗೇಟ್ ದಿನದ ೨೪ ತಾಸಿನ ಅವಽಯೊಳಗೆ ಕನಿಷ್ಠ ೩೦ ಬಾರಿ ಹಾಕಲಾಗು ತ್ತಿದೆ. ಪ್ಯಾಸೆಂರ‍್ಸ್ ಹಾಗೂ ಗೂಡ್ಸ್ ರೈಲುಗಳ ಸಂಚಾರ ಸಂದರ್ಭದಲ್ಲಿ ೮-೧೫ ನಿಮಿಷಗಳ ಕಾಲ ಗೇಟ್ ಬಂದ್ ಆಗುವುದರಿಂದ ಈ ಮಾರ್ಗದಲ್ಲಿ ಸಂಚರಿಸುವ ಸಾಕಷ್ಟು ಸಂಖ್ಯೆಯ ದಾವಣಗೆರೆ, ಹೊಸಪೇಟೆ ಮಾರ್ಗದ ಬಸ್‌ಗಳು, ಲಾರಿಗಳು, ಕಾರು, ಮೋ ಟಾರು ದ್ವಿಚಕ್ರ ಇತ್ಯಾದಿ ವಾಹನಗಳ ಸಂಚಾರಕ್ಕೆ ಭಾರಿ ಅಡಚಣೆ ಆಗಿ, ನಿತ್ಯವೂ ಈ ಮಾರ್ಗದಲ್ಲಿ ಸಂಚಾರ ಸಿಕ್ಕು ಸಾ ಮಾನ್ಯ ಎಂಬAತಾಗಿತ್ತು.
ಮೇಲು ಸೇತುವೆ ಇಲ್ಲದ ಕಾರಣಕ್ಕೆ ಚಿಕ್ಕಜಾಜೂರು ಎಲ್‌ಸಿ೧ಗೇಟ್‌ನಿಂದಾಗಿ, ಹೊಸದುರ್ಗದಿಂದ ಚಿಕ್ಕಜಾಜೂರು ಮಾರ್ಗವಾಗಿ ದಾವಣಗೆರೆಗೆ ಹೋಗಿ ಬರುವ ಬಸ್ಸುಗಳು, ಇನ್ನಿತರೆ ವಾಹನಗಳಿಗೆ ಸಾಕಷ್ಟು ಅಡಚಣೆ ಆಗುತ್ತಿತ್ತು. ಇದೀಗ ಇಲ್ಲೂ ಮೇಲು ಸೇತುವೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗುತ್ತಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net