೨ಕ್ಕೆ ಕಾನ್‌ಸ್ಟೇಬಲ್ ನೇಮಕಾತಿ ಪರೀಕ್ಷೆ

 ಪೊಲೀಸ್ ಕಾನ್‌ಸ್ಟೇಬಲï ಹುz್ದÉಗಳ ನೇಮಕಾತಿ ಸಂಬAಧ ಚಿತ್ರದುರ್ಗದಲ್ಲಿ ಗುರುವಾರ ಆಯೋಜಿಸಿದ್ದ ಪೂರ್ವಸಿದ್ಧತಾ ಸಭೆಯಲ್ಲಿ ಬಿ.ಟಿ. ಕುಮಾರಸ್ವಾಮಿ ಮಾತನಾಡಿದರು. ರಂಜಿತ್‌ಕುಮಾರ್ ಬಂಡಾರು, ಶಶಿಧರ್, ಅಶೋಕ, ವಿಜಯಕುಮಾರ್, ವೆಂಕಟೇಶ್ ನಾಯಕ್, ನಾಗರಾಜ್ ಸೇರಿ ಅನೇಕ ಅಽಕಾರಿಗಳಿದ್ದರು.
ಪೊಲೀಸ್ ಕಾನ್‌ಸ್ಟೇಬಲï ಹುz್ದÉಗಳ ನೇಮಕಾತಿ ಸಂಬAಧ ಚಿತ್ರದುರ್ಗದಲ್ಲಿ ಗುರುವಾರ ಆಯೋಜಿಸಿದ್ದ ಪೂರ್ವಸಿದ್ಧತಾ ಸಭೆಯಲ್ಲಿ ಬಿ.ಟಿ. ಕುಮಾರಸ್ವಾಮಿ ಮಾತನಾಡಿದರು. ರಂಜಿತ್‌ಕುಮಾರ್ ಬಂಡಾರು, ಶಶಿಧರ್, ಅಶೋಕ, ವಿಜಯಕುಮಾರ್, ವೆಂಕಟೇಶ್ ನಾಯಕ್, ನಾಗರಾಜ್ ಸೇರಿ ಅನೇಕ ಅಽಕಾರಿಗಳಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ೯೫೯೨ ಅಭ್ಯರ್ಥಿಗಳು ನೋಂದಣಿ | ೨೬ ಕೇಂದ್ರ ನಿಗದಿ
  • ಎಡಿಸಿ ಬಿ.ಟಿ. ಕುಮಾರಸ್ವಾಮಿ ಹೇಳಿಕೆ
  • ಸ್ಪರ್ಧಾತ್ಮಕ ಲಿಖಿತ ಪರೀಕ್ಷೆ

ಚಿತ್ರದುರ್ಗ:

ಕರ್ನಾಟಕ ಪರೀಕ್ಷಾ ಪ್ರಾಽಕಾರದಿಂದ ಆ.೨ರಂದು ಬೆಳಗ್ಗೆ ೧೦.೩೦ ರಿಂದ ಮಧ್ಯಾಹ್ನ ೧೨ರವರೆಗೆ ಪೊಲೀಸ್ ಕಾನ್‌ಸ್ಟೇಬಲï ಹುz್ದೆಗಳ ನೇಮಕಾತಿ ಸಂಬAಧ ಸ್ಪರ್ಧಾತ್ಮಕ ಲಿಖಿತ ಪರೀಕ್ಷೆ ನಡೆಯಲಿದೆ ಎಂದು ಎಡಿಸಿ ಬಿ.ಟಿ. ಕುಮಾರಸ್ವಾಮಿ ತಿಳಿಸಿದರು.

ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಪೂರ್ವಸಿದ್ಧತಾ ಸಭೆಯಲ್ಲಿ ಮಾತನಾಡಿ, ಒಟ್ಟು ೯,೫೯೨ ಅಭ್ಯರ್ಥಿಗಳು ನೋಂದಾಯಿಸಿದ್ದು, ಚಿತ್ರದುರ್ಗದ ೨೬ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ ಎಂದರು.
ಕೇAದ್ರಗಳ ಸುತ್ತಮುತ್ತ ಸೂಕ್ತ ಭದ್ರತೆ, ಬ್ಯಾರಿಕೇಡ್ ವ್ಯವಸ್ಥೆ ಮಾಡಬೇಕು. ಯಾವುದೇ ಅಕ್ರಮಗಳಿಗೆ ಅವಕಾಶವಾಗದಂತೆ, ದೂರುಗಳಿಗೆ ಆಸ್ಪದ ನೀಡದಂತೆ, ಅಽಕಾರಿಗಳು ಅತ್ಯಂತ ಪಾರದರ್ಶಕವಾಗಿ ಪರೀಕ್ಷೆ ನಡೆಸಬೇಕು. ಅಗತ್ಯ ಬಿದ್ದರೆ, ಪೊಲೀಸ್ ಸಿಬ್ಬಂದಿ ಕಾವಲಿಗೆ ನೇಮಿಸಬೇಕೆಂದು ಸೂಚಿಸಿದರು.
ಪ್ರಶ್ನೆ ಪತ್ರಿಕೆ ವಿತರಣೆ ಸೇರಿ ಪ್ರತಿ ಪ್ರಕ್ರಿಯೆಯೂ ಸಿಸಿಟಿವಿ ಕಣ್ಗಾವಲಲ್ಲೇ ನಡೆಯಬೇಕು. ಜಿ¯್ಲÁಮಟ್ಟದಲ್ಲಿ ವಿಶೇಷ ತಂಡವು ಈ ದೃಶ್ಯಾವಳಿಗಳನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಬೇಕು. ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಪ್ರಾಽಕಾರ ಹೊರಡಿಸಿರುವ ನಿಷೇಽತ ವಸ್ತುಗಳು, ವಸö ಸಂಹಿತೆ ನಿಯಮ ಕಡ್ಡಾಯವಾಗಿ ಪಾಲಿಸಬೇಕೆಂದು ತಿಳಿಸಿದರು.
ಪರೀಕ್ಷಾ ಸಮಯಕ್ಕಿಂತ ಎರಡೂವರೆ ತಾಸು ಮುಂಚಿತವಾಗಿ ಅಭ್ಯರ್ಥಿಗಳು ಕೇಂದ್ರಗಳಿಗೆ ಆಗಮಿಸಬೇಕು. ಸಿಸಿಟಿವಿ ಕಣ್ಗಾವಲು ಮತ್ತು ಎಐ ಆಧಾರಿತ ಮುಖ ಚಹರೆ ಗುರುತಿಸುವಿಕೆ ಸೇರಿ ಬಹು ಗುರುತಿನ ಪರಿಶೀಲನೆ ಪ್ರಕ್ರಿಯೆ ನಡೆಸಲಾಗುವುದು ಎಂದರು.
ಪರೀಕ್ಷಾರ್ಥಿಗಳು ಸುಲಭವಾಗಿ ಕೇಂದ್ರ ತಲುಪಲು ಅನುಕೂಲವಾಗುವಂತೆ ಬಸ್ ಹಾಗೂ ರೈಲ್ವೆ ನಿಲ್ದಾಣಗಳಲ್ಲಿ ವಿವರವುಳ್ಳ ಚಾರ್ಟ್ಗಳನ್ನು ಪ್ರದರ್ಶಿಸಬೇಕು. ಅಗತ್ಯ ಮೂಲ ಸೌಕರ್ಯ ಕಲ್ಪಿಸಬೇಕೆಂದು ಸೂಚಿಸಿದರು.
ಎಸ್ಪಿ ರಂಜಿತ್‌ಕುಮಾರ್ ಬಂಡಾರು ಮಾತನಾಡಿ, ಪ್ರತಿ ಕೇಂದ್ರಕ್ಕೂ ಅಗತ್ಯ ಉಸ್ತುವಾರಿ, ಭದ್ರತಾ ಸಿಬ್ಬಂದಿ ನೇಮಿಸಲಾಗಿದೆ. ಪರೀಕ್ಷಾ ಕೊಠಡಿಗಳ ಮೇಲ್ವಿಚಾರಕರು ಮಾತ್ರ ಕಾರ್ಯನಿರ್ವಹಿಸಲಿದ್ದು, ಡಿವೈಎಸ್‌ಪಿ ಹಂತದ ಅಽಕಾರಿಗಳನ್ನು ಹೊರತು ಪಡಿಸಿ, ಇತರ ಯಾವ ಅಽಕಾರಿಗೂ ಕೊಠಡಿ ಪ್ರವೇಶಕ್ಕೆ ಅವಕಾಶವಿಲ್ಲ ಎಂದು ತಿಳಿಸಿದರು.
ವಿವಿಧ ಇಲಾಖೆಗಳ ಉಪನಿರ್ದೇಶಕರಾದ ಎಸ್.ವಿ. ಶಶಿಧರ್, ಎಚ್.ಟಿ. ಅಶೋಕ, ವಿಜಯಕುಮಾರ್, ವಿಶೇಷ ಭೂಸ್ವಾಽÃ ನಾಽಕಾರಿ ವೆಂಕಟೇಶ್ ನಾಯಕ್, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಇಂಜಿನಿಯರ್ ನಾಗರಾಜ್ ಸೇರಿ ಅನೇಕ ಅಽಕಾರಿಗಳಿದ್ದರು.

ಮೂಗುತಿ, ತಾಳಿಗೆ ಅವಕಾಶ

ಯಾವುದೇ ರೀತಿಯ ಲೋಹದ ವಸ್ತುಗಳು ಅಥವಾ ಆಭರಣಗಳನ್ನು ಧರಿಸುವಂತಿಲ್ಲ. ಮಹಿಳಾ ಅಭ್ಯರ್ಥಿಗಳಿಗೆ ಮೂಗುತಿ, ಮಂಗಳಸೂತ್ರಕ್ಕೆ ಮಾತ್ರ ವಿನಾಯಿತಿ ನೀಡಲಾಗಿದೆ. ಶೂ ಧರಿಸುವುದಕ್ಕೆ ಅವಕಾಶವಿಲ್ಲ. ತೆಳುವಾದ ಅಡಿಭಾಗವಿರುವ ಸ್ಯಾಂಡಲ್ಸï ಅಥವಾ ಚಪ್ಪಲಿ ಮಾತ್ರ ಧರಿಸಬಹುದು.

ಯುಡಿಐಡಿ ಕಾರ್ಡ್ ಕಡ್ಡಾಯ

ಶ್ರವಣ ಸಾಧನ ಬಳಸುವ ಅಂಗವಿಕಲ ಅಭ್ಯರ್ಥಿಗಳು ಪರೀಕ್ಷೆ ಆರಂಭಕ್ಕೆ ೨ ತಾಸು ಮೊದಲು ಕೇಂದ್ರದಲ್ಲಿ ಯುಡಿಐಡಿ ಕಾರ್ಡ್, ವೈದ್ಯಕೀಯ ಪ್ರಮಾಣ ಪತ್ರದೊಂದಿಗೆ ವರದಿ ಮಾಡಿಕೊಳ್ಳಬೇಕು. ಧಾರ್ಮಿಕ ಉಡುಪು ಧರಿಸಿಕೊಂಡು ಬರೆಯಲು ಇಚ್ಛಿಸುವವರಿಗೂ ಈ ಸಮಯ ಅನ್ವಯವಾಗಲಿದೆ. ಅಂತವರನ್ನು ಪ್ರತ್ಯೇಕವಾಗಿ ಪರಿಶೀಲನೆಗೆ ಒಳಪಡಿಲಾಗುವುದು. ಜನಿವಾರ, ಶಿವದಾರ ಧರಿಸಿ ಪರೀಕ್ಷೆ ಬರೆಯಲು ಅವಕಾಶವಿದೆ ಎಂದು ಕುಮಾರಸ್ವಾಮಿ ತಿಳಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net