ಚಿತ್ರದುರ್ಗ: ವಿಶ್ವಗುರು ಬಸವಣ್ಣನವರ ಆಶಯಗಳಿಗೆ ಕಾಂಗ್ರೆಸ್ ಅವಮಾನ ಮಾಡುತ್ತಿದೆ ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾ ರ್ಯದರ್ಶಿ ಜಿ.ಎಚ್. ಮೋಹನ್‌ಕುಮಾರ್ ಅಸಮಾಧಾನ ವ್ಯಕ್ತಪಡಿಸಿದರು.
ಪಕ್ಷದ ಜಿಲ್ಲಾ ಕಚೇರಿಯಲ್ಲಿ ಸೋಮವಾರ ಶ್ರೀ ಜಗಜ್ಯೋತಿ ಬಸವೇಶ್ವರರ ೮೯೩ನೇ ಜಯಂತ್ಯುತ್ಸವದಲ್ಲಿ ಮಾತನಾಡಿ, ಮಹಿ ಳಾ ಮೀಸಲಾತಿ ವಿರೋಽಸುತ್ತಿರುವ ಕಾಂಗ್ರೆಸ್ ನಾಯಕರಿಗೆ ಬಸವ ಜಯಂತಿ ಆಚರಿಸುವ ನೈತಿಕತೆಯಿಲ್ಲ ಎಂದರು.
ಅಸಮಾನತೆ ವಿರುದ್ಧ ಹೋರಾಡಿದ್ದ ಬಸವಣ್ಣ ಅನುಭವ ಮಂಟಪದಲ್ಲಿ ಮಹಿಳೆಯರಿಗೆ ಪ್ರವೇಶ ಕಲ್ಪಿಸಿ ಸ್ತಿçà ಸಮಾನತೆ ಎತ್ತಿ ಹಿಡಿದಿದ್ದರು. ಅಂತರ್ಜಾತಿ ವಿವಾಹ ಮಾಡಿಸಿ ಜಾತಿ ತಾರತಮ್ಯದ ವಿರುದ್ಧ ದನಿ ಎತ್ತಿದ್ದರು. ಲಿಂಗ ತಾರತಮ್ಯ ವಿರೋಽಸಿದ್ದರು ಎಂದರು.
ಅAತರ್ಜಾತಿ ವಿವಾಹಕ್ಕೆ ಸಂಬAಽಸಿದ ೩೫೦೦ ಅರ್ಜಿಗಳು ಸಲ್ಲಿಕೆಯಾಗಿದ್ದರೂ ರಾಜ್ಯ ಸರ್ಕಾರ ಇನ್ನೂ ಪ್ರೋತ್ಸಾಹ ದನ ನೀ ಡಿಲ್ಲ. ಬಸವತತ್ವಗಳನ್ನು ಪಾಲನೆ ಮಾಡುತ್ತಿಲ್ಲ. ಸವಣ್ಣನ ನಡೆನುಡಿ, ಆದರ್ಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿ ಕೊಂಡಾಗ ಬಸವ ಜಯಂತಿಗೆ ನಿಜವಾದ ಅರ್ಥ ಬರುತ್ತದೆ ಎಂದರು.
ಪಕ್ಷದ ಜಿಲ್ಲಾಧ್ಯಕ್ಷ ಕೆ.ಟಿ.ಕುಮಾರಸ್ವಾಮಿ ಮಾತನಾಡಿ, ಸಮಾಜ ಸುಧಾರಣೆಗಾಗಿ ೧೨ನೇ ಶತಮಾನದಲ್ಲಿ ಹೋರಾಡಿದ ಬಸವಣ್ಣನವರ ಜಯಂತಿಯನ್ನು ವಿಶ್ವದೆಲ್ಲೆಡೆ ಆಚರಿಸಲಾಗುತ್ತಿದೆ ಎಂದು ಹೇಳಿದರು.
ಮೂಢನಂಬಿಕೆ, ಮೌಢ್ಯ, ಕಂದಾಚಾರಗಳನ್ನು ನಿರ್ಮೂಲನೆಗೊಳಿಸಿ ಸಮ ಸಮಾಜ ನಿರ್ಮಾಣಕ್ಕಾಗಿ ಕ್ರಾಂತಿ ಮಾಡಿದ ಬಸವಣ್ಣನವರು ಅನುಭವ ಮಂಟಪದಲ್ಲಿ ಎಲ್ಲ ಜಾತಿಯವರಿಗೆ ಮುಕ್ತವಾಗಿ ಪ್ರವೇಶ ಕಲ್ಪಿಸಿದ್ದರು ಎಂದರು.
ಪಕ್ಷದ ಜಿಲ್ಲಾ ಉಪಾಧ್ಯಕ್ಷ ಡಾ. ಸಿದ್ದಾರ್ಥ ಗುಂಡಾರ್ಫಿ, ವೆಂಕಟೇಶ್‌ಯಾದವ್, ರೇಖಾ, ಪಾಲಯ್ಯ,ನಾಗರಾಜ್‌ಬೇದ್ರೆ, ನಾಗರಾಜ್, ಕಲ್ಲೇಶಯ್ಯ, ಬಸವೇಶ್, ವಸಂತ ಆಚಾರ್, ಬಸಮ್ಮ, ಶಾಂತಮ್ಮ, ವೀಣಾ, ಮಂಜುಳಮ್ಮ, ಉಮಾ, ಶಂಭು, ವೀರೇಶ್, ಲಕ್ಷಿ÷್ಮÃ್ಮಸಾಗರ ವಸಂತ್, ಸತೀಶ್‌ಆಚಾರ್, ಪಿ. ಮಹಂತೇಶ್ ಇತರರು ಇದ್ದರು.
ನಿರಾಶ್ರಿತರ ಆರೋಗ್ಯ ಸೇವೆಗೆ ಬಸವೇಶ್ವರ ಆಸ್ಪತ್ರೆ ಸಹಕಾರ
ನಿರಾಶ್ರಿತರ ಆರೋಗ್ಯ ಸೇವೆಗೆ ಬಸವೇಶ್ವರ ಆಸ್ಪತ್ರೆ ಸಹಕಾರ ಸದಾ ಇರುತ್ತದೆ ಎಂದು ಮುರುಘಾಮಠದ ಆಡಳಿತ ಮಂಡಳಿ ಸದಸ್ಯ ಡಾ.ಬಸವಕುಮಾರ ಸ್ವಾಮೀಜಿ ಹೇಳಿದರು.
ಶ್ರೀಮಠದಿಂದ ಚಿತ್ರದುರ್ಗ ಹೊರವಲಯದ ಗೋನೂರಿನ ನಿರಾಶ್ರಿತರ ಕೇಂದ್ರದಲ್ಲಿ ಸೋಮವಾರ ಆಯೋಜಿಸಿದ್ದ ಬಸವ ಜಯಂತ್ಯುತ್ಸವದ ಸಾನ್ನಿಧ್ಯವಹಿಸಿ ಮಾತನಾಡಿ, ಪ್ರತಿವರ್ಷ ಈ ಕೇಂದ್ರದಲ್ಲಿ ಬಸವ ಜಯಂತಿ ಆಚರಿಸುತ್ತಿದ್ದೇವೆ. ಬಸವೇಶ್ವರ ಆಸ್ಪತ್ರೆ ಆರೋಗ್ಯ ಸೇವೆ ನಿರಾಶ್ರಿತರಿಗೆ ಸಿಗಲಿ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಶ್ರೀ ಮಠದ ಆಡಳಿತ ಮಂಡಳಿ ಅಧ್ಯಕ್ಷ ಶಿವಯೋಗಿ ಸಿ.ಕಳಸದ ಮಾತನಾಡಿ, ಶ್ರೀಮಠಕ್ಕೆ ಆಗಮಿಸಿ ಆತಿಥ್ಯ ಪಡೆಯುವಂತೆ ನಿರಾಶ್ರಿತರಿಗೆ ಮನವಿ ಮಾಡಿದರು.
ಈ ವೇಳೆ ಅವರಿಗೆ ಹಣ್ಣು, ಹಂಪಲು ಹಾಗೂ ಪ್ರಸಾದ ವಿತರಿಸಲಾಯಿತು. ಎಸ್‌ಜೆಎಂ ಐಟಿ ಕಾಲೇಜಿನ ವಿಶಾಲಾಕ್ಷಿ ಅವರು ನಿರಾಶ್ರಿತರಿಗೆ ಸಮವಸ್ತçಗಳನ್ನು ದೇಣಿಗೆ ನೀಡಿದರು.
ಎಸ್‌ಪಿ ರಂಜಿತ್‌ಕುಮಾರ್ ಬಂಡಾರು, ನಗರಸಭೆ ಮಾಜಿ ಅಧ್ಯಕ್ಷರಾದ ಸಿ.ಟಿ. ಕೃಷ್ಣಮೂರ್ತಿ, ಎಚ್.ಸಿ. ನಿರಂಜನಮೂರ್ತಿ, ಭೋವಿ ಸಮಾಜದ ಜಿಲ್ಲಾಧ್ಯಕ್ಷ ಟಿ. ತಿಪ್ಪೇಸ್ವಾಮಿ, ನಿರಾಶ್ರಿತ ಕೇಂದ್ರದ ಮಹದೇವ ಹಾಗೂ ವಿಜಯಕುಮಾರ್ ಇದ್ದರು.
ಜಮುರಾ ಕಲಾವಿದರು ಪ್ರಾರ್ಥಿಸಿದರು. ಡಾ.ಎಸ್. ಚೇತನ್ ಸ್ವಾಗತಿಸಿ, ಡಾ.ಎಚ್.ಜೆ. ಲೋಕೇಶ್ ವಂದಿಸಿದರು.
ಡಯಟ್‌ನಲ್ಲಿ ಆಚರಣೆ:
ನಗರದ ಡಯಟ್‌ನಲ್ಲಿ ಸೋಮವಾರ ಬಸವ ಜಯಂತಿ ಆಚರಿಸಲಾಯಿತು. ಪ್ರಾಚಾರ್ಯ ಎಂ. ನಾಸಿರುದ್ದೀನ್, ಉಪನ್ಯಾಸಕ ಎಸ್. ಬಸವರಾಜು ಮಾತನಾಡಿದರು. ಉಪ ಪ್ರಾಚಾರ್ಯ ನಾಗಭೂಷಣ್, ಹಿರಿಯ ಉಪನ್ಯಾಸಕಿ ಜ್ಞಾನೇಶ್ವರಿ, ಉಪನ್ಯಾಸಕ ರಾದ ಎಲ್. ರೇವಣ್ಣ, ಶಿವಲೀಲಾ, ರಾಮಚಂದ್ರಪ್ಪ, ಮಂಜುಳಾ, ಅರ್ಜುಮಂದ್‌ಬಾನು, ಶಂಕರನಾಯ್ಕ, ರಂಗಸ್ವಾಮಿ, ತಾಂತ್ರಿಕ ಸಹಾಯಕಿ ಭ್ರಮರಾ ಇತರರು ಇದ್ದರು.