ಹಿರಿಯೂರಿಗೆ ಕುಡಿವ ನೀರಿನ ಚಿಂತೆ

ಜೆ.ಜಿ. ಹಳ್ಳಿ, ಕಲ್ವಳ್ಳಿ ಸಚಿವರಿಗೆ ಸಮಸ್ಯೆ ಪ್ರತ್ಯಕ್ಷ ದರ್ಶನ, ಟ್ಯಾಂಕರ್‌ನಿಂದ ನೀರು ಪೂರೈಕೆ
Water Problem
ಕಲ್ವಳ್ಳಿ ಭಾಗದ ಕುಡಿವ ನೀರಿನ ಸಮಸ್ಯೆ ಕುರಿತು ಮಹಿಳೆಯರು ಜಿಲ್ಲಾ ಸಚಿವ ಟಿ.ರುಮೂರ್ತಿ ಅವರಿಗೆ ಮನವರಿಕೆ ಮಾಡಿದರು.Water Problem
Published on: 

ಖಂಡೇನಹಳ್ಳಿ ಬಸವರಾಜ್ ಹಿರಿಯೂರು

ಬೇಸಿಗೆ ಕಾಲಕ್ಕೂ ಮುನ್ನವೇ ತಾಲೂಕಿನ ಜೆ.ಜಿ. ಹಳ್ಳಿ, ಧರ್ಮಪುರ ಹೋಬಳಿಯ ಗಡಿ ಗ್ರಾಮಗಳಲ್ಲಿ ಕುಡಿವ ನೀರಿನ ಸಮಸ್ಯೆ ಉಲ್ಬಣಿಸಿದೆ.

ಧರ್ಮಪುರ, ಐಮಂಗಲ, ಜೆ.ಜಿ. ಹಳ್ಳಿ, ಕಲ್ವಳ್ಳಿ ಭಾಗದಲ್ಲಿ ಮಳೆ ಕೊರತೆಯಿಂದ ಅಂತರ್ಜಲ ಮಟ್ಟ ಕುಸಿದಿದ್ದು, ಕೊಳವೆ ಬಾವಿಗಳು ದಿನದಿನಕ್ಕೂ ಬರಿದಾಗಲಾರಂಭಿಸಿವೆ. ಇದು ಅಂತರ್ಜಲ ಮಟ್ಟ ಕುಸಿತ, ಮಳೆ ಪ್ರವಾಣದ ಕುಸಿತ ತೋರಿಸುತ್ತದೆ. ತಾಲೂಕಿನಲ್ಲಿ ಕುಡಿವ ನೀರಿಗೆ ಕೊಳವೆ ಬಾವಿಗಳೇ ಆಧಾರ, ಬೋರ್‌ವೆಲ್‌ಗಾಗಿ ಲಕ್ಷಾಂತರ ರೂ. ವ್ಯಯಿಸಿದರೂ ನೀರು ಸಿಗುತ್ತಿಲ್ಲ.

ಜೆ.ಜಿ.ಹಳ್ಳಿ ಹೋಬಳಿಯ 17 ಕೆರೆಗಳಿಗೆ ಶಾಶ್ವತ ನೀರಾವರಿ ಸೌಲಭ್ಯ ಕಲ್ಪಿಸಲು ರೂಪಿಸಿರುವ ಏತ ನೀರಾವರಿ ಯೋಜನೆ ಕುರಿತು ಜಿಲ್ಲಾ ಸಚಿವರು ಪರಿಶೀಲನೆಗೆ ತೆರಳಿದ ಸಂದರ್ಭದಲ್ಲಿ ಹಂದಿಗನಡು ಗ್ರಾಮದಲ್ಲಿ ಟ್ಯಾಂಕರ್ ನೀರಿಗೆ ಮಹಿಳೆಯರು ಖಾಲಿ ಕೊಡ ಹಿಡಿದು ನಿಂತಿರುವ ದೃಶ್ಯ ಕಂಡು ಬಂದಿದೆ. ಗ್ರಾಮದ ಕುಡಿವ ನೀರಿನ ಸಮಸ್ಯೆ ಕುರಿತು ಮಹಿಳೆಯರು ಸಚಿವರ ಗಮನಕ್ಕೆ ತಂದಿದ್ದು, ಟ್ಯಾಂಕರ್ ಮೂಲಕ ನೀರು ಪೂರೈಕೆ ವಾಡುತ್ತಿರುವುದು ಆನೆ ಹೊಟ್ಟೆಗೆ ಅರೆ ಕಾಸಿನ ಮಜ್ಜಿಗೆಯಂತಾಗಿದೆ. ನಮಗೆ ಶಾಶ್ವತ ಕುಡಿವ ನೀರಿನ ಸೌಲಭ್ಯ ಕಲ್ಪಿಸುವಂತೆ ಮನವಿ ವಾಡಿದ್ದಾರೆ. ಜಿಲ್ಲಾ ಸಚಿವವರಿಗೆ ಕಲ್ವಳ್ಳಿ ಭಾಗದ ಕುಡಿವ ನೀರಿನ ನೈಜ ಸಮಸ್ಯೆ ದರ್ಶನವಾಗಿದೆ.

ಪಿಲಾಜನಹಳ್ಳಿ, ಬ್ಯಾರಮಡು, ವಾಲ್ಮೀಕಿ ನಗರ, ದಿಂಡಾವರ, ಚಿಗಳಕಟ್ಟೆ, ಬಡಗೊಲ್ಲರಹಟ್ಟಿ, ವಾದೇನ ಹಳ್ಳಿಗಳಲ್ಲಿ ಅಂತರ್ಜಲ ಪಾತಾಳ ಸೇರಿದ್ದು, ಹನಿ ನೀರಿಗೂ ಪರಿತಪಿಸುವಂತಹ ಪರಿಸ್ಥಿತಿ ಎದುರಾಗಿದೆ. ಕಲ್ವಳ್ಳಿ ಭಾಗದ ಹಳ್ಳಿಗಳಲ್ಲಿ ಕೊಳವೆ ಬಾವಿಗಳು ಬತ್ತಿ ಹೋಗಿರುವುದರಿಂದ ಜನ ನೀರಿಗೆ ಪರದಾಡುವಂತಾಗಿದೆ. ಈ ಭಾಗದಲ್ಲಿ ಕಾಡುಗೊಲ್ಲ ಸಮುದಾಯ ಪಶುಪಾಲನೆಯನ್ನೇ ಪ್ರಮುಖ ವೃತ್ತಿಯಾಗಿಸಿ ಕೊಂಡಿದೆ. ಈ ಭಾಗದಲ್ಲಿ ಕೆರೆಕಟ್ಟೆಗಳು ಬತ್ತಿದ್ದು, ಮೇವು, ನೀರಿನ ಸಮಸ್ಯೆ ಎದುರಾಗಿರುವುದರಿಂದ ವಲಸೆ ಹೋಗಬೇಕಾಗಿದೆ ಎಂದು ಸ್ಥಳೀಯರು ಸಚಿವರಿಗೆ ಮನವರಿಕೆ ವಾಡಿದ್ದಾರೆ.

ಕಲ್ವಳ್ಳಿ, ಧರ್ಮಪುರ ಹೋಬಳಿ ವ್ಯಾಪ್ತಿಯ ಕೆರೆಗಳಿಗೆ ಶಾಶ್ವತ ನೀರಾವರಿ ಸೌಲಭ್ಯಕ್ಕೆ ಸರ್ಕಾರ ಅಗತ್ಯ ಅನುದಾನ ಮೀಸಲಿಟ್ಟು ಯೋಜನೆಗೆ ಅನುಮೋದನೆ ನೀಡಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. ಕಾಲಮಿತಿಯಲ್ಲಿ ಯೋಜನೆ ಪೂರ್ಣಗೊಳಿಸಿ ಕೆರೆಗಳಿಗೆ ನೀರು ಹರಿಸಿದರೆ ವಾತ್ರ ಕುಡಿವ ನೀರಿನ ಸಮಸ್ಯೆಗೆ ಪರಿಹಾರ ಸಿಗಲಿದೆ.

ನೀರಿನ ಸಮಸ್ಯೆ ತೀವ್ರಗೊಳ್ಳುತ್ತಿದೆ

ತಾಲೂಕಿನಲ್ಲಿ ಶತವಾನದ ಇತಿಹಾಸವಿರುವ ಎರಡು ಜಲಾಶಯಗಳಿದ್ದರೂ ಕುಡಿವ ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ. ಉಪ ಚುನಾವಣೆ ಕಾರಣಕ್ಕೆ ಸರ್ಕಾರ ತಾಲೂಕಿಗೆ ಅನುದಾನದ ಹೊಳೆ ಹರಿಸುತ್ತಿದ್ದು, ಚುನಾವಣೆ ಗೆಲುವಿಗೆ ಅಭಿವೃದ್ಧಿ ಮಂತ್ರ ಜಪಿಸುತ್ತಿದೆ. ಉಪ ಚುನಾವಣೆ ನೀತಿ ಸಂಹಿತೆ ಜಾರಿಯಾಗುವ ವೇಳೆಗೆ ನೀರಿನ ಸಮಸ್ಯೆ ಮತ್ತಷ್ಟು ಬಿಗಡಾಯಿಸಬಹುದೆಂಬ ಆತಂಕ ಎದುರಾಗಿದೆ. ಪ್ರಸಕ್ತ ವರ್ಷ ಮಳೆ ಕೊರತೆಯಿಂದ ಕೆರೆಕಟ್ಟೆಗಳಲ್ಲಿ ನೀರಿಲ್ಲದೆ ಅಂತರ್ಜಲ ಅಪಾಯದ ಮಟ್ಟ ತಲುಪಿದೆ. ತಾಲೂಕಿನ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ರೂಪಿಸಿದ್ದು, ತ್ವರಿತ ಕಾಮಗಾರಿ ಆರಂಭಿಸಿ ಗ್ರಾಮೀಣ ಜಲಪಾತ್ರೆಗಳಿಗೆ ಗಂಗೆ ಹರಿಸಿದರೆ ವಾತ್ರ ಕುಡಿವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲಿದೆ.

ಶುದ್ಧ ನೀರಿನ ಟಕ ಸ್ಥಗಿತ

ಅಂತರ್ಜಲ ತೀವ್ರ ಕುಸಿತದಿಂದ ಶುದ್ಧ ಕುಡಿವ ನೀರಿನ ಟಕಗಳಿಗೆ ನೀರು ಪೂರೈಕೆ ಕಷ್ಟಸಾಧ್ಯವಾಗಿದೆ. ಯಲದಕೆರೆ ಗ್ರಾಮದ ಶುದ್ಧ ಕುಡಿವ ನೀರಿನ ಟಕಕ್ಕೆ ಸಕಾಲದಲ್ಲಿ ನೀರು ಪೂರೈಕೆಯಾಗುತ್ತಿಲ್ಲ ಎನ್ನಲಾಗಿದೆ. ಜೆ.ಜಿ. ಹಳ್ಳಿ ಹೋಬಳಿಯಲ್ಲಿ ಜಲ ಜೀವನ್ ಮಿಷನ್ ಯೋಜನೆಯಡಿ ನಳ ಸಂಪರ್ಕ ಕಲ್ಪಿಸಲಾಗಿದೆ. ಆದರೆ, ನೀರು ಬರುತ್ತಿಲ್ಲ. ಈಗ ಟ್ಯಾಂಕರ್ ನಿರ್ಮಿಸಲಾಗುತ್ತಿದೆ. ಬಹುಗ್ರಾಮ ಕುಡಿವ ನೀರಿನ ಯೋಜನೆ ಕೂಡ ಹಳ್ಳ ಹಿಡಿದಿದೆ ಎಂಬ ಆರೋಪ ಕೇಳಿ ಬಂದಿದೆ.

ಬೆಳೆ ವಿಮೆಗೆ ಒತ್ತಾಯ

ಹಿರಿಯೂರು ತಾಲೂಕಿನಲ್ಲಿ ಬೆಳೆ ನಷ್ಟದಿಂದ ಅನ್ನದಾತರ ಬದುಕು ಬೀದಿಗೆ ಬಂದಿದೆ. ಸರ್ಕಾರ ಬೆಳೆ ಪರಿಹಾರ ಘೋಷಣೆಗೆ ಸೀಮಿತವಾಗಿದೆ. ತಕ್ಷಣ ಬೆಳೆ ವಿಮೆ ಪಾವತಿಸಬೇಕು. ಕಲ್ವಳ್ಳಿ ಭಾಗದ ಕುಡಿವ ನೀರಿನ ಸಮಸ್ಯೆ ಪರಿಹಾರಕ್ಕೆ ತ್ವರಿತ ಕ್ರಮ ವಹಿಸಬೇಕು. ನಿರ್ಲಕ್ಷಿಸಿದರೆ ಪ್ರಜಾಸೇವಾ ಅಭಿಯಾನ ಕಾರ್ಯಕ್ರಮದಲ್ಲಿ ಸಿಎಂಗೆ ಕಪ್ಪು ಬಾವುಟ ಪ್ರದರ್ಶನ ವಾಡಲಾಗುವುದು ಎಂದು ಜಿಲ್ಲಾ ರೈತ ಸಂದ ಅಧ್ಯಕ್ಷ ಕೆ.ಟಿ. ತಿಪ್ಪೇಸ್ವಾಮಿ ಎಚ್ಚರಿಸಿದ್ದಾರೆ.

ರಾಜ್ಯ ಸರ್ಕಾರ 244 ಕೋಟಿ ರೂ. ವೆಚ್ಚದಲ್ಲಿ ಕಲ್ವಳ್ಳಿ ಭಾಗದ 17 ಕೆರೆಗಳಿಗೆ ನೀರು ತುಂಬಿಸುವ ಏತ ನೀರಾವರಿ ಯೋಜನೆಗೆ ಅನುಮೋದನೆ ನೀಡಿರುವುದು ಸ್ವಾಗತಾರ್ಹ. ಶೀಘ್ರ ಕಾಮಗಾರಿ ಆರಂಭಿಸಿ ಕೆರೆಗಳಿಗೆ ನೀರು ಹರಿಸಬೇಕು.
ಜಯಪ್ರಕಾಶ್ ಯುವ ರೈತ, ಕೆ.ಕೆ.ಹಟ್ಟಿ
ಸಿಎಂ ಡಿ.ಕೆ.ಶಿವಕುವಾರ್ ಅವರು ಪ್ರಜಾಸೇವೆ ಅಸ ಹಿಡಿದು ಹಿರಿಯೂರಿಗೆ ಬರುತ್ತಿರುವುದು ಉಪ ಚುನಾವಣೆ ಗಿಮಿಕ್ ಆಗಿದೆ. ಮೊದಲು ತಾಲೂಕಿನ ಕುಡಿವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ರೂಪಿಸಬೇಕು.
ದ್ಯಾಮಣ್ಣ ಜಿಪಂ ವಾಜಿ ಉಪಾಧ್ಯಕ್ಷ/ ಬಿಜೆಪಿ ಮುಖಂಡ