ದಿನದ ೨೪ ತಾಸು ಶುದ್ಧ ಕುಡಿವ ನೀರು

 ಚಿತ್ರದುರ್ಗ ತಾಲೂಕು ಕೆ. ಬಳ್ಳೆಕಟ್ಟೆಯಲ್ಲಿ ಸೋಮವಾರ ಆಯೋಜಿಸಿದ್ದ ಜಲ ಅರ್ಪಣ ದಿವಸ ಕಾರ್ಯಕ್ರಮದಲ್ಲಿ ಸಂಸದ ಗೋವಿಂದ ಎಂ. ಕಾರಜೋಳ, ಅಮರನಾಥ್‌ಜೈನ್, ಶಿವಮೂರ್ತಿ, ಮಾಧುರಿಗಿರೀಶ್, ಹನುಮಂತೇಗೌಡ ಇತರರು ಇದ್ದರು.
ಚಿತ್ರದುರ್ಗ ತಾಲೂಕು ಕೆ. ಬಳ್ಳೆಕಟ್ಟೆಯಲ್ಲಿ ಸೋಮವಾರ ಆಯೋಜಿಸಿದ್ದ ಜಲ ಅರ್ಪಣ ದಿವಸ ಕಾರ್ಯಕ್ರಮದಲ್ಲಿ ಸಂಸದ ಗೋವಿಂದ ಎಂ. ಕಾರಜೋಳ, ಅಮರನಾಥ್‌ಜೈನ್, ಶಿವಮೂರ್ತಿ, ಮಾಧುರಿಗಿರೀಶ್, ಹನುಮಂತೇಗೌಡ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ನೀರಿನ ಸದ್ಬಳಕೆಗೆ ಸಂಸದ ಗೋವಿಂದ ಕಾರಜೋಳ ಸಲಹೆ
  • ಜಲ ಅರ್ಪಣ ದಿವಸ ಕಾರ್ಯಕ್ರಮ
  • ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ
ಚಿತ್ರದುರ್ಗ : ಬರ ಪೀಡಿತ ಚಿತ್ರದುರ್ಗವನ್ನು ಸಮೃದ್ಧ ನಾಡನ್ನಾಗಿ ಅಭಿವೃದ್ಧಿ ಪಡಿಸಬೇಕಿದೆ ಎಂದು ಸಂಸದ ಗೋವಿಂದ ಎಂ. ಕಾರಜೋಳ ಹೇಳಿದರು.
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಚಿತ್ರದುರ್ಗ ತಾಲೂಕು ಲಕ್ಷಿ÷್ಮÃಸಾಗರ ಗ್ರಾಪಂ ವ್ಯಾಪ್ತಿಯ ವಿಜಾಪುರ, ಐಯ್ಯನಹಳ್ಳಿ ಕೆ. ಬಳ್ಳೆಕಟ್ಟೆ ಗ್ರಾಮಗಳಲ್ಲಿ ಸೋಮವಾರ ಆಯೋಜಿಸಿದ್ದ ಜಲ ಅರ್ಪಣ ದಿವಸ ಕಾರ್ಯಕ್ರಮ
ಉದ್ಘಾಟಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಸಮೃದ್ಧಿ ನೆಲೆಸುವಂತೆ ಮಾಡುವ ನಿಟ್ಟಿನಲ್ಲಿ ಸಾರ್ವಜನಿಕರಿಂದ ಜನಪ್ರತಿನಿಽಗಳವರೆಗೆ ಎಲ್ಲರೂ ತಮ್ಮ ಜವಾಬ್ದಾರಿ ಗಳನ್ನು ಅತ್ಯಂತ ಸಮರ್ಪಕವಾಗಿ ನಿರ್ವಹಿಸಬೇಕಿದೆ. ಎಲ್ಲರೂ ನೀರಿನ ಸದ್ಬಳಕೆ ಪರಿಜ್ಞಾನ ಬೆಳೆಸಿಕೊಳ್ಳಬೇಕು. ಮುಂದಿನ ಪೀಳಿಗೆಗೆ ನೀರು ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯವಾಗಬೇಕು ಎಂದು ತಿಳಿಸಿದರು.
ಜಿಲ್ಲೆಯ ಹಳ್ಳಿಗಳಿಗೆ ಶುದ್ಧ ಕುಡಿವ ನೀರು ಸಮರ್ಪಿಸುತ್ತಿದ್ದೇವೆ. ಜಲವೇ ಜೀವನ ಎಂಬ ಮಾತು ಅಕ್ಷರಶಃ ಸತ್ಯ. ನೀರಿಲ್ಲದೆ ನಾಗರಿಕತೆ, ಅಭಿವೃದ್ಧಿಯೂ ಇಲ್ಲ. ಮಳೆಯಾಶ್ರಿತ ಪ್ರದೇಶ ಚಿತ್ರದುರ್ಗಕ್ಕೆ ನೀರು ಜೀವನಾಡಿಯಾಗಿದೆ. ಕೇಂದ್ರದ ಜಲ್ ಜೀವನ್‌ಮಿಷನ್ ಯೋಜನೆ ಉದ್ದೇಶ ಪ್ರತಿ ಗ್ರಾಮೀಣ ಕುಟುಂಬಕ್ಕೂ ದಿನದ ೨೪ ಗಂಟೆ ಶುದ್ಧ ಕುಡಿವ ನೀರು ಒದಗಿಸುವುದಾಗಿದೆ ಎಂದು ತಿಳಿಸಿದರು.
ಚಿತ್ರದುರ್ಗ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ದಶಕಗಳಿಂದ ಇದೆ. ಇಂದು ಜಿಲ್ಲೆಯ ಸಾವಿರಾರು ಮನೆಗಳಿಗೆ ಜೆಜೆಎಂ ಯೋಜನೆಯಡಿ ನಳದ ಮೂಲಕ ಕುಡಿಯುವ ನೀರು ಸಂಪರ್ಕ ಒದಗಿಸಲಾಗಿದೆ. ೯೪೦ ಕೋಟಿ ರೂ. ಅನುದಾನದಲ್ಲಿ ೧೫೫೯ ಕುಡಿಯುವ ನೀರಿನ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಈಗಾಗಲೇ ೫೦೪ ಕೋಟಿ ರೂ. ವೆಚ್ಚದೊಂದಿಗೆ ೧೦೮೩ ಕಾಮಗಾರಿ ಪೂರ್ಣಗೊಳಿಸಲಾಗಿದೆ ಎಂದು ತಿಳಿಸಿದರು.
ಚಿತ್ರದುರ್ಗ ತಾಲೂಕಿನ ಗ್ರಾಮಾಂತರ ಭಾಗದಲ್ಲಿ ೨೭೧ ಕಾಮಗಾರಿಗಳಿಗೆ ೧೮೯ ಕೋಟಿ ರೂ. ಅನುದಾನ ಬಳಸಲಾಗಿದೆ. ನೀರನ್ನು ವ್ಯರ್ಥ ಮಾಡದೆ ಮಿತವಾಗಿ ಬಳಸಬೇಕು. ಅಂತರ್ಜಲ ಹೆಚ್ಚಿಸಲು ಮಳೆ ನೀರು ಕೊಯ್ಲು ಮತ್ತು ಕೆರೆಗಳ ಪುನಶ್ಚೇತನಕ್ಕೂ ಒತ್ತು ನೀಡಬೇಕಿದೆ ಎಂದರು.
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಇಇ ಅಮರನಾಥ್ ಜೈನ್, ಎಇಇ ಶಿವಮೂರ್ತಿ, ತಾಪಂ ಇಒ ರವಿ ಕುಮಾರ್, ಗ್ರಾಪಂ ಆಡಳಿತಾಽಕಾರಿಗಳಾದ ಕೆ. ವಿನಯ್, ಪುಷ್ಪಲತಾ, ಪಿಡಿಒಗಳಾದ ಶ್ರುತಿ, ಜಯಶೀಲಾ, ಡಿಸಿಸಿ ಬ್ಯಾಂಕ್ ನಿರ್ದೇಶಕ ಮಾಧುರಿ ಗಿರೀಶ್, ಜೆಜೆಎಂ ಜಿಲ್ಲಾ ವ್ಯವಸ್ಥಾಪಕ ಮಂಜುನಾಥ್ ನಾಡರ್, ಹನುಮಂತೇಗೌಡ ಮತ್ತಿತರ ಮುಖಂಡರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net