ಚಿತ್ರದುರ್ಗದ ಹಿಂದೂ ಮಹಾಗಣಪತಿ ಉತ್ಸವ ಈ ಬಾರಿ ಮತ್ತಷ್ಟು ಅದ್ದೂರಿ
ಶೋಭಾಯತ್ರೆ
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
೨೬ರಂದು ಗೋಪೂಜೆ ಹಾಗೂ ಧ್ವಜಪೂಜೆ
ಸೆ.೧೪ಕ್ಕೆ ಪ್ರತಿಷ್ಠಾಪನೆ, ಅ.೩ಕ್ಕೆ ಶೋಭಾಯತ್ರೆ |
ಅ.೨ರವರೆಗೂ ನಿತ್ಯ ವೈವಿಧ್ಯಮಯ ಕಾರ್ಯಕ್ರಮಗಳು
ಚಿತ್ರದುರ್ಗ:
ಹಿಂದೂ ಮಹಾಗಣಪತಿ ಉತ್ಸವವನ್ನು ಈ ಬಾರಿ ಇನ್ನಷ್ಟು ಅದ್ದೂರಿಯಾಗಿ ಆಚರಿಸಲು ವಿಶ್ವ ಹಿಂದೂ ಪರಿಷತ್, ಬಜರಂಗದಳ ತೀರ್ಮಾನಿಸಿದೆ ಎಂದು ವಿಎಚ್‌ಪಿ ದಕ್ಷಿಣ ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪ್‌ವೆಲï ತಿಳಿಸಿದರು.
ರಾಷ್ಟçದಲ್ಲೇ ಚಿತ್ರದುರ್ಗದ ಹಿಂದೂ ಮಹಾಗಣಪತಿ ಮಹೋತ್ಸವ ಎರಡನೇ ಸ್ಥಾನದಲ್ಲಿದೆ. ಕರ್ನಾಟಕ ಮಾತ್ರವಲ್ಲದೆ, ದೇಶದ ಮೂಲೆ-ಮೂಲೆಗಳಿಂದ ಭಕ್ತರು ಇಲ್ಲಿಗೆ ಬಂದು ದರ್ಶನ ಪಡೆಯುತ್ತಿದ್ದಾರೆ. ಹೀಗಾಗಿ ೧೯ನೇ ವರ್ಷದ ಮಹೋತ್ಸವವೂ ವಿಜೃಂಭಣೆಯಿAದ ಜರುಗಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸೆ.೧೪ರಂದು ಮಹಾಗಣಪನ ಮೂರ್ತಿ ಪ್ರತಿಷ್ಠಾಪನೆ, ಅ.೩ರಂದು ವೈಭವದ ಶೋಭಾಯಾತ್ರೆ ನಡೆಯಲಿದೆ. ಮಹೋತ್ಸವದ ಯಶಸ್ಸಿಗೆ ನೂತನ ಉತ್ಸವ ಸಮಿತಿಯೊಂದಿಗೆ ಹಲವು ಸಮಿತಿಗಳನ್ನು ರಚಿಸಲಾಗಿದೆ . ಜೈನ್ ಧಾಮದಲ್ಲಿ ಆಯೋಜಿಸುತ್ತಿದ್ದ ಉತ್ಸವವನ್ನು ಈ ಬಾರಿ ಮುರುಘಾರಾಜೇಂದ್ರ ಕ್ರೀಡಾಂಗಣದಲ್ಲಿ ಆಚರಿಸಲು ನಿರ್ಧರಿಸಲಾಗಿದೆ. ಈ ಸಂಬAಧ ಅನುಮತಿ ಕೂಡ ಪಡೆಯಲಾಗಿದೆ ಎಂದರು.
ವಿಎಚ್‌ಪಿ ಜಿ¯್ಲÁ ಕಾರ್ಯದರ್ಶಿ ಚನ್ನಕೇಶವ ಮಾತನಾಡಿ, ಆ.೨೬ರಂದು ಬೆಳಗ್ಗೆ ೯.೪೫ರಿಂದ ೧೦.೩೦ರೊಳಗೆ ಗೋಪೂಜೆ ಹಾಗೂ ಧ್ವಜಪೂಜೆ ನೆರವೇರಲಿದೆ. ಸೆ.೯ ಅಥವಾ ೧೩ರಂದು ಹಿಂದೂ ಮಹಾಗಣಪತಿ ಪುರಪ್ರವೇಶ ಇರಲಿದೆ. ಅ.೨ರವರೆಗೂ ನಿತ್ಯ ವೈವಿಧ್ಯಮಯ ಕಾರ್ಯಕ್ರಮಗಳು ಜರುಗಲಿವೆ ಎಂದು ತಿಳಿಸಿದರು. ವಿಎಚ್‌ಪಿ ಪ್ರಾಂತ ಉಪಾಧ್ಯಕ್ಷ ಡಾ. ಮಂಜುನಾಥ್, ನೂತನ ಸಮಿತಿ ಅಧ್ಯಕ್ಷ ಸುಽÃರ್ ಗುಂಡಾರ್ಪಿ, ಗೌರವಾಧ್ಯಕ್ಷ ಷಡಕ್ಷರಪ್ಪ ಇತರರಿದ್ದರು.
ತಾಲೂಕು ಕೇಂದ್ರಗಳಲ್ಲೂ ಆಚರಣೆ
ಜಿಲ್ಲಾ ಕೇಂದ್ರ ಮಾತ್ರವಲ್ಲದೆ ೫ ತಾಲೂಕು ಕೇಂದ್ರ ಹಾಗೂ ಭರಮಸಾಗರದಲ್ಲೂ ನಮ್ಮ ಸಂಘಟನೆಯಿAದ ಅದ್ದೂರಿಯಾಗಿ ಹಿಂ ದೂ ಮಹಾಗಣಪತಿ ಉತ್ಸವ ನಡೆಯಲಿದೆ. ದುರ್ಗದ ಶೋಭಾಯಾತ್ರೆಗೂ ಮುನ್ನ ಉಳಿದೆಡೆ ಮೂರ್ತಿ ವಿಸರ್ಜನೆಯಾಗಲಿದೆ ಎಂದು ವಿಎಚ್‌ಪಿ ಪ್ರಾಂತ ಸತ್ಸಂಗ ಪ್ರಮುಖ್ ಚಂದ್ರಶೇಖರ್ ತಿಳಿಸಿದರು.