ಚಿತ್ರದುರ್ಗದಲ್ಲಿ ಮಂಗಳವಾರ ಏರ್ಪಡಿಸಿದ್ದ `ಸೈಬರ್ ಸುರಕ್ಷತಾ ಕ್ರಮಗಳು ಹಾಗೂ ಎಐ.ಯುಗದಲ್ಲಿ ಮೊಬೈಲ್‌ಫೋನ್ ಜವಾಬ್ದಾ ರಿಯುತ ಬಳಕೆ ಕುರಿತ ವಿಚಾರ ಸಂಕಿರಣದಲ್ಲಿ ಸಂಪನ್ಮೂಲ ವ್ಯಕ್ತಿ ಶಶಿಧರರಾವ್ ಅವರನ್ನು ಸನ್ಮಾನಿಸಲಾಯಿತು. ಎಚ್.ಎಂ.ಉಮಾದೇ ವಿ,ಎಂ.ಬಿ.ಶAಕರಪ್ಪ, ಎನ್.ಗೌರಮ್ಮ, ಜಯಲಕ್ಷಿ÷್ಮÃ, ಜ್ಯೋತಿ, ಮಲ್ಲಿಕಾ ಮತ್ತಿತರರು ಇದ್ದರು.
ಇಂಟರ್‌ನೆಟ್‌ನಲ್ಲಿ ನೋಡಿದ್ದೆಲ್ಲವನ್ನೂ ಸುಲಭವಾಗಿ ನಂಬಬಾರದು
ಚಿತ್ರದುರ್ಗ:
ಕÊತಕ ಬುದ್ಧಿಮತ್ತೆಯ(ಎಐ)ಈ ಯುಗದಲ್ಲಿ ಇಂದಿನ ಮೊಬೈಲ್ -ೆÇÃನ್‌ಗಳು ಜ್ಞಾನದ ಕಣಜಗಳೂ ಆಗಿವೆ ಎಂದು ತಂತ್ರಜ್ಞಾನ, ಉನ್ನತ ಶಿಕ್ಷಣ ತಜ್ಞ, ರೋಟರಿ ಕ್ಲಬ್ ಆಫ್ ಚಿನ್ಮೂಲಾದ್ರಿ ಚಿತ್ರದುರ್ಗ ಅಧ್ಯಕ್ಷ ಶಶಿಧರ್‌ರಾವ್ ಹೇಳಿದರು.
ದೇವರಾಜ ಅರಸು ಎಜುಕೇಶನ್ ಸೊಸೈಟಿಯ ಶ್ರೀ ವೆಂಕಟೇಶ್ವರ ಕಾಲೇಜ್ ಆ-ï ಎಜುಕೇಶನ್, ರೋಟರಿ ಕ್ಲಬ್ ಆ-ï ಚಿನ್ಮೂ ಲಾದ್ರಿ, ರೋಟರಿ ವಿದ್ಯಾಲಯದ ಸಹಯೋಗದಲ್ಲಿ ಮಂಗಳವಾರ ನಗರದ ಎಸ್‌ಆರ್‌ಬಿಎಂಎಸ್ ರೋಟರಿ ಬಾಲಭವನದಲ್ಲಿ ಆಯೋಜಿಸಿದ್ದ `ಸೈಬರ್ ಸುರಕ್ಷತಾ ಕ್ರಮಗಳು ಹಾಗೂ ಎಐ ಯುಗದಲ್ಲಿ ಮೊಬೈಲ್ ಫೋನ್ ಜವಾಬ್ದಾರಿಯುತ ಬಳಕೆ' ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.
ಕೋವಿಡ್ ಕಾಲಘಟ್ಟದ ನಂತರದಲ್ಲಿ ಮೊಬೈಲ್‌ಫೋನ್ ಮಕ್ಕಳ ಶಿಕ್ಷಣದ ಭಾಗವೇ ಆಗಿದೆ. ಆದರೆ, ಅದನ್ನು ಬಹಳ ಎಚ್ಚರಿಕೆ ಹಾ ಗೂ ಜವಾಬ್ದಾರಿಯಿಂದ ಬಳಸಬೇಕಿದೆ. ತಂತ್ರಜ್ಞಾನದ ಯಾವುದೇ ಪ್ರಕಾರ ಅಥವಾ ಮೊಬೈಲ್ -ÉÇÃನ್ ಬಳಕೆಗೆ ಪಾಲಕರ ಮೇಲುಸ್ತುವಾರಿ, ಮಾರ್ಗದರ್ಶನ ಅಗತ್ಯವಿದೆ ಎಂದರು.
ಪಾಸ್‌ವರ್ಡ್ಗಳನ್ನು ಯಾರೊಂದಿಗೆ ಹಂಚಿಕೊಳ್ಳಬಾರದು. ಅಪರಿಚಿತ ಲಿಂಕ್‌ಗಳ ಮೇಲೆ ಎಂದಿಗೂ ಕ್ಲಿಕ್ ಮಾಡಬಾರದು. ಇಂಟ ರ್‌ನೆಟ್‌ನಲ್ಲಿ ನೋಡಿದ್ದೆಲ್ಲವನ್ನೂ ಸುಲಭವಾಗಿ ನಂಬಬಾರದು, ಇತ್ಯಾದಿ ಸೈಬರ್ ಜಗತ್ತಿನಲ್ಲಿ ಸುರಕ್ಷಿತವಾಗಿರಲು ಕಟ್ಟುನಿಟ್ಟಿನಿಂದ ಅನುಸರಿಸಬೇಕಾದ ಸರಳ ನಿಯಮಗಳನ್ನು ವಿವರಿಸಿದರು.
ರೋಟರಿ ಆಂಗ್ಲ ಮಾಧ್ಯಮ ಶಾಲೆ ಮುಖ್ಯಶಿಕ್ಷಕಿ ಎಚ್.ಎಂ.ಉಮಾದೇವಿ ಅಧ್ಯಕ್ಷತೆ ವಹಿಸಿದ್ದರು. ರೋಟರಿ ವಿದ್ಯಾಲಯದ ಆಡಳಿ ತಾಽಕಾರಿ ಎಂ.ಬಿ. ಶಂಕರಪ್ಪ, ರೋಟರಿ ಕನ್ನಡ ಮಾಧ್ಯಮ ಶಾಲೆ ಮುಖ್ಯಶಿಕ್ಷಕಿ ಎನ್.ಗೌರಮ್ಮ, ಶಿಕ್ಷಕರಾದ ಜಯಲಕ್ಷಿ÷್ಮÃ, ಜ್ಯೋತಿ, ಮಲ್ಲಿಕಾ ಮತ್ತಿತರರಿದ್ದರು.