ಪರಿಚಿತರಿಂದಲೇ ಮಕ್ಕಳ ಮೇಲೆ ದೌರ್ಜನ್ಯ ಹೆಚ್ಚಳ

ಚಿತ್ರದುರ್ಗದಲ್ಲಿ ಶುಕ್ರವಾರ ಆಯೋಜಿಸಿದ್ದ ಒಂದು ದಿನದ ತರಬೇತಿ ಕಾರ್ಯಕ್ರಮದಲ್ಲಿ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಡಾ.ಕೆ.ಟಿ. ತಿಪ್ಪೇಸ್ವಾಮಿ, ಡಾ.ಎಸ್.ಪಿ. ಟವಿಕುಮಾರ್, ಕೆ.ಎಚ್. ವಿಜಯಕುಮಾರ್, ಗಂಗಪ್ಪ, ಡಿ. ಮಂಜುನಾಥ, ಜಗದೀಶ್, ರಂಗನಾಥ್ ಇದ್ದರು.
ಚಿತ್ರದುರ್ಗದಲ್ಲಿ ಶುಕ್ರವಾರ ಆಯೋಜಿಸಿದ್ದ ಒಂದು ದಿನದ ತರಬೇತಿ ಕಾರ್ಯಕ್ರಮದಲ್ಲಿ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಡಾ.ಕೆ.ಟಿ. ತಿಪ್ಪೇಸ್ವಾಮಿ, ಡಾ.ಎಸ್.ಪಿ. ಟವಿಕುಮಾರ್, ಕೆ.ಎಚ್. ವಿಜಯಕುಮಾರ್, ಗಂಗಪ್ಪ, ಡಿ. ಮಂಜುನಾಥ, ಜಗದೀಶ್, ರಂಗನಾಥ್ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಆಯೋಗದ ಸದಸ್ಯ ಡಾ.ಕೆ.ಟಿ. ತಿಪ್ಪೇಸ್ವಾಮಿ ಆತಂಕ
  • ಎಳೆಯರ ಹಕ್ಕುಗಳ ರಕ್ಷಣೆ, ಕಾಯ್ದೆಗಳ ಕುರಿತು ತರಬೇತಿ
  • ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ
ಚಿತ್ರದುರ್ಗ: ಸಮಾಜದಲ್ಲಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳು ಆತಂಕಕಾರಿ ರೀತಿಯಲ್ಲಿ ಹೆಚ್ಚಾಗುತ್ತಿದ್ದು, ಶೇ.೭೦-೯೦ ಪ್ರಕರಣಗಳಲ್ಲಿ ಅಪರಿಚಿತರಿಗಿಂತ ಮಗುವಿನ ಕುಟುಂಬಸ್ಥರು, ನೆರೆಹೊರೆಯವರು ಹಾಗೂ ಪರಿಚಿತರೇ ಆರೋಪಿ ಗಳಾಗಿರುತ್ತಾರೆ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಡಾ.ಕೆ.ಟಿ. ತಿಪ್ಪೇಸ್ವಾಮಿ ಆತಂಕ ವ್ಯಕ್ತಪಡಿಸಿದರು.
ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಮಕ್ಕಳ ರಕ್ಷಣಾ ನಿರ್ದೇಶನಾಲಯ, ಜಿಪಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಂಯುಕ್ತಾಶ್ರಯದಲ್ಲಿ ಮಕ್ಕಳ ಪಾಲನಾ ಸಂಸ್ಥೆಗಳ ಅಽಕಾರಿ-ಸಿಬ್ಬಂದಿಗೆ ಮಕ್ಕಳ ಹಕ್ಕುಗಳ ಮತ್ತು ರಕ್ಷಣಾ ಕಾಯ್ದೆಗಳ ಕುರಿತು ಜಿಲ್ಲಾ ಬಾಲಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಒಂದು ದಿನದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪೋಕ್ಸೋ ಪ್ರಕರಣಗಳನ್ನು ವಿಶ್ಲೇಷಿಸಿದಾಗ, ಮಗುವಿನ ಸಂಬAಽಕರು, ಸ್ನೇಹಿತರು, ಶಿಕ್ಷಕರು ಅಥವಾ ನೆರೆಹೊರೆಯವರೇ ದೌರ್ಜನ್ಯ ಎಸಗಿರುವುದು ಕಂಡುಬAದಿದೆ. ಆದ್ದರಿಂದ ಮಕ್ಕಳ ರಕ್ಷಣೆ ಮನೆಯಿಂದಲೇ ಶುರುವಾಗಬೇಕು ಎಂದರು.
ಉತ್ತರ ಭಾರತದಲ್ಲಾದ ಮೂವರು ಮಕ್ಕಳು ಆತ್ಮಹತ್ಯೆ ಪ್ರಕರಣ ಪ್ರಸ್ತಾಪಿಸಿದ ಅವರು, ಆನ್‌ಲೈನ್ ಗೇಮ್‌ಗಳು, ಮೊಬೈಲ್ ಮತ್ತು ಇಂಟರ್‌ನೆಟ್ ಬಳಕೆ ಬಗ್ಗೆ ಪಾಲಕರು ಮಕ್ಕಳೆಡೆ ನಿಗಾವಹಿಸಬೇಕು ಎಂದರು.
ಕೌಟಂಬಿಕ ಕಲಹಗಳಿಂದಾಗಿ ಸಂಕಷ್ಟಕ್ಕೀಡಾಗಿ ಬಾಲಮಂದಿರ ಸೇರಿದ ಮಕ್ಕಳ ಮಾನಸಿಕ ಸ್ಥಿತಿ ಅತ್ಯಂತ ಸೂಕ್ಷ÷್ಮವಾಗಿ ರುತ್ತದೆ. ಅಂತಹ ಮಕ್ಕಳಿಗೆ ಕಾನೂನಿನ ರಕ್ಷಣೆಯೊಂದಿಗೆ ಭಾವನಾತ್ಮಕ ಬೆಂಬಲ ಅವಶ್ಯಕ ಎಂದರು.
ತುಮಕೂರು ಮಕ್ಕಳ ಕಲ್ಯಾಣ ಸಮಿತಿ ಸದಸ್ಯ ಡಾ.ಎಸ್.ಪಿ. ಟವಿಕುಮಾರ್ ಮಾತನಾಡಿ, ಮಕ್ಕಳ ರಕ್ಷಣಾ ಘಟಕದಲ್ಲಿ ಕೆಲಸ ಮಾಡುವುದು ಇತರ ಇಲಾಖೆಗಳಿಗಿಂತ ಭಿನ್ನ. ಇಲ್ಲಿ ಕೆಲಸ ಮಾಡಿದಾಗ ಸಿಗುವ ಆತ್ಮತÊಪ್ತಿ ಮತ್ತು ಪುಣ್ಯ ಬೇರಲ್ಲೂ ಸಿಗುವುದಿಲ್ಲ ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವÊದ್ಧಿ ಇಲಾಖೆ ಉಪನಿರ್ದೇಶಕ ಕೆ.ಎಚ್. ವಿಜಯಕುಮಾರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಽಕಾರಿ ಗಂಗಪ್ಪ, ಜಿಲ್ಲಾ ನಿರೂಪಣಾಽಕಾರಿ ಡಿ. ಮಂಜುನಾಥ, ಮಕ್ಕಳ ಕಲ್ಯಾಣ ಸಮಿತಿ ಸದಸ್ಯರಾದ ಜಗದೀಶ್, ರಂಗನಾಥ್ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net