ಚಿತ್ರದುರ್ಗ: ಗೋಡಂಬಿ ಜಿಲ್ಲೆಗೆ ಒಂದು ಪರ್ಯಾಯ ಬೆಳೆಯಾಗಿ ರೂಪಗೊಳ್ಳುತ್ತಿದೆ ಎಂದು ಶಿವಮೊಗ್ಗ ಕೃಷಿ ಮತ್ತು ತೋಟಗಾ ರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ನಿವೃತ್ತ ಸಂಶೋಧಾನಾ ನಿರ್ದೇಶಕ ಡಾ.ಬಿ. ಸತ್ಯನಾರಾಯಣ ರೆಡ್ಡಿ ಹೇಳಿದರು.
ಬಾಗಲಕೋಟೆ ತೋಟಗಾರಿಕಾ ವಿಜ್ಞಾನಗಳ ವಿಶ್ವ ವಿದ್ಯಾಲಯ, ಬೆಂಗಳೂರು ತೋಟಗಾರಿಕೆ ಮಹಾ ವಿದ್ಯಾಲಯ ಹಾಗೂ ಕೊ ಚ್ಚಿನ್ ಗೋಡಂಬಿ ಮತ್ತು ಕೋಕೊ ಅಭಿವÊದ್ಧಿ ನಿರ್ದೇಶನಾಲಯಗಳ ಆಶ್ರಯದಲ್ಲಿ ನಗರದ ಕೃಷಿ ತಂತ್ರಜ್ಞರ ಸಂಸ್ಥೆಯಲ್ಲಿ ಇತ್ತೀ ಚೆಗೆ ಆಯೋಜಿಸಿದ್ದ ಜಿಲ್ಲಾಮಟ್ಟದ ಗೋಡಂಬಿ ಬೆಳೆ ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಗೋಂಡAಬಿ ಬೆಳೆ ವೆಚ್ಚ, ಕೃಷಿ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಬೇಕಾಗುವುದಿಲ್ಲ. ಇದು ಬರನಿರೋದಕ ಬೆಳೆಯಾಗಿರುವುದ ರಿಂದ ಜಿಲ್ಲೆಯ ರೈತರು ಒಂದೇ ಬೆಳೆಗೆ ಅವಲಂಬನೆ ಆಗದೆ ಗೋಡಂಬಿ ಬೆಳೆದರೆ ನಿರಂತರ ಆದಾಯ ಸಿಗಲಿದೆ ಎಂದರು.
ಬೆAಗಳೂರು ಜಿಕೆವಿಕೆ ತೋಟಗಾರಿಕೆ ಮಹಾವಿದ್ಯಾಲಯದ ನಿವೃತ್ತ ಡೀನ್ ಡಾ.ಕೆ.ಜಿ.ಎಸ್. ಸ್ವಾಮಿ ವಿಚಾರ ಸಂಕಿರಣ ಉದ್ಘಾಟಿ ಸಿದರು. ಕೃಷಿ ಇಲಾಖೆ ಅಽಕಾರಿಗಳಾದ ಟಿ.ಆರ್. ಯಶವಂತ್‌ಕುಮಾರ್, ದೇವರಾಜ್, ವಿರೂಪಾಕ್ಷಪ್ಪ, ಎನ್.ಕುಮಾರ್,
ಸಂಪನ್ಮೂಲ ವ್ಯಕ್ತಿಗಳಾದ ಡಾ.ಟಿ.ಆರ್.ಗುರುಪ್ರಸಾದ್, ಡಾ.ರಾಜಶೇಖರ್, ಡಿ.ಟಿ. ಶಿವಾನಂದಪ್ಪ, ಜಿ.ಟಿ. ವೀರಭದ್ರರೆಡ್ಡಿ, ಡಾ. ಸುರೇಶ್, ಟಿ.ಎಲ್. ಅಶೋಕ್, ಕೃಷಿ ತಂತ್ರಜ್ಞರ ಸಂಸ್ಥೆ ಕಾರ್ಯದರ್ಶಿ ಜಿ.ಟಿ. ವೀರಭದ್ರರೆಡ್ಡಿ, ಪ್ರಾಧ್ಯಾಪಕ ಡಾ.ಜಿ.ಜೆ. ಸುರೇಶ್ ಇತರರು ಇದ್ದರು.