ಲಾರಿಗೆ ಕಾರು ಡಿಕ್ಕಿ, ಮೂವರ ಸಾವು

ಅಂತ್ಯ ಸಂಸ್ಕಾರಕ್ಕೆ ತೆರಳುತ್ತಿದ್ದವರ ದುರ್ಮರಣ
Accident
ಹಿರಿಯೂರು ತಾಲೂಕಿನ ಕೆ.ಆರ್. ಹಳ್ಳಿ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳವಾರ ಸಂಭವಿಸಿದ ಲಾರಿ-ಕಾರು ಅಪಘಾತದ ದಶ್ಯ.Accident
Published on: 

ಹಿರಿಯೂರು: ಅಂತ್ಯಸಂಸ್ಕಾರದಲ್ಲಿ ಭಾಗವಹಿಸಲು ತೆರಳುತ್ತಿದ್ದ ಮೂವರು ತಾಲೂಕಿನ ಕೆ.ಆರ್. ಹಳ್ಳಿ ಸಮೀಪ ರಾಷ್ಟ್ರೀಯ ಹೆದ್ದಾರಿ ಸರ್ವೀಸ್ ರಸ್ತೆಯಲ್ಲಿ ಮಂಗಳವಾರ ಮಧ್ಯಾಹ್ನ ಲಾರಿ ಮತ್ತು ಕಾರುಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ಮೃತ ಪಟ್ಟಿದ್ದು, ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಕೊಪ್ಪಳ ಜಿಲ್ಲೆ ಯಲಬುರ್ಗಿ ತಾಲೂಕಿನ ಶಶಿಧರ್ (22), ಕುಷ್ಟಗಿ ತಾಲೂಕು ಮಡಿಕೇರಿ ಗ್ರಾಮದ ಮಂಜುನಾಥ್(22) ನಿಡಶೇರಿ ಗ್ರಾಮದ ಬಸವರಾಜ್(21) ಮೃತರು. ಹನು ಮೇಶ್ (22) ಪ್ರವೀಣಕುವಾರ್(20) ಎಂಬುವವರು ತೀವ್ರವಾಗಿ ಗಾಯಗೊಂಡಿದ್ದು, ಅವರನ್ನು ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲಿಸ ಲಾಗಿದೆ. ಕುಷ್ಟಗಿ ತಾಲೂಕು ನಿಡಶೇರಿ ಗ್ರಾಮದ ಬಸವರಾಜ್ ಮತ್ತು ಪ್ರವೀಣ್‌ಕುವಾರ್ ಅವರ ತಂದೆ ಮೃತಪಟ್ಟಿದ್ದು, ಅಂತಿಮ ದರ್ಶನಕ್ಕೆ ಐವರು ಕಾರಿನಲ್ಲಿ ತೆರಳುತ್ತಿದ್ದಾಗ ಟನೆ ನಡೆದಿದೆ. ಕೆ.ಆರ್. ಹಳ್ಳಿ ಗೇಟ್ ಸಮೀಪ ಮುಂದೆ ಚಲಿಸುತ್ತಿದ್ದ ಲಾರಿಗೆ ಕಾರು ಡಿಕ್ಕಿ ಹೊಡೆದು ರಸ್ತೆ ಬದಿಗೆ ಉರುಳಿ ಬಿದ್ದು ಸ್ಥಳದಲ್ಲೇ ಮೂವರು ಮೃತಪಟ್ಟಿದ್ದಾರೆ. ಡಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಸ್ಥಳೀಯರು ಆಗಮಿಸಿ ಕಾರಿನಲ್ಲಿ ಸಿಲುಕಿದ್ದವರನ್ನು ಹೊರಕ್ಕೆ ತೆಗೆದಿದ್ದಾರೆ. ಅಷ್ಟರಲ್ಲಿ ಮೂವರು ಮೃತಪಟ್ಟಿದ್ದರು. ಶಶಿಧರ್ ಕಾರು ಚಾಲಕನಾಗಿದ್ದು, ಬಸವರಾಜ್ ಮತ್ತು ಮಂಜುನಾಥ್ ಬೆಂಗಳೂರಿನ ಶಿವಾಜಿ ನಗರದಲ್ಲಿ ಬೇಕರಿಯಲ್ಲಿ ಕೆಲಸ ವಾಡುತ್ತಿದ್ದರು. ಶವಗಳನ್ನು ಹಿರಿಯೂರಿನ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಲಾಗಿದೆ. ಸ್ಥಳಕ್ಕೆ ಹಿರಿಯೂರು ಗ್ರಾವಾಂತರ ಠಾಣೆ ಸಿಪಿಐ ಕೆ.ಎನ್. ಚಂದ್ರಶೇಖರ್ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net