ಪುರಾತನ ಶಮೀವೃಕ್ಕೆ ಪೂಜೆ ಸಲ್ಲಿಸಿದ ವಿಪ್ರರು

125 ವರ್ಷಗಳ ಇತಿಹಾಸದ ಶಮೀವೃಕ್ಕೆ ಪೂಜೆ
Worship
ವಿಪ್ರ ಸಮುದಾಯದವರು ವಿಜಯ ದಶಮಿ ಪ್ರಯುಕ್ತ ಶಮೀ ವೃಕ್ಕೆ ಪೂಜೆ ಸಲ್ಲಿಸಿದರುWorship
Published on: 

ಭರಮಸಾಗರ: ಗ್ರಾಮದಲ್ಲಿ ವಿಪ್ರ ಸಮಾಜದ ಸದಸ್ಯರು ವಿಜಯದಶಮಿ ಹಬ್ಬವನ್ನು ಸಂಪ್ರದಾಯಬದ್ಧವಾಗಿ ಆಚರಿಸಿದರು. ನವರಾತ್ರಿಯ ಕೊನೆಯ ದಿನ ಬುಧವಾರ ವಿಜಯದಶಮಿಯಂದು ಸಮುದಾಯದ ಸದಸ್ಯರು ಒಟ್ಟಾಗಿ ಸೇರಿ, ಗ್ರಾಮದ ಸುಮಾರು 125 ವರ್ಷಗಳ ಇತಿಹಾಸ ಹೊಂದಿರುವ ಪುರಾತನ ಶಮೀವೃಕ್ಕೆ ಪೂಜೆ ಸಲ್ಲಿಸಿ ಬನ್ನಿ ಮುಡಿದರು. ಹಿಂದೂ ಧಾರ್ಮಿಕ ಸಂಪ್ರದಾಯದಲ್ಲಿ ಶಮೀವೃದ ಆರಾಧನೆಗೆ ವಿಶೇಷ ಮಹತ್ವವಿದೆ. ವಿಜಯದ ಸಂಕೇತವಾಗಿ ಬನ್ನಿ ಪತ್ರೆ ಪೂಜಿಸಿ, ವಿನಿಮಯ ಮಾಡಿಕೊಳ್ಳುವ ಪದ್ಧತಿ ಹಲವು ಪ್ರದೇಶಗಳಲ್ಲಿ ಆಚರಣೆಯಲ್ಲಿದೆ. ಬನ್ನಿಯನ್ನು ಬಂಗಾರಕ್ಕೆ ಸಮಾನವಾಗಿ ಪರಿಗಣಿಸುವ ನಂಬಿಕೆಯೂ ಜನಜನಿತವಾಗಿದೆ.

ತಲೆಮಾರುಗಳಿಂದ ಬಂದ ಸಂಪ್ರದಾಯ

ಭರಮಸಾಗರದ ಶ್ರೀ ಆಂಜನೇಯ ದೇವಸ್ಥಾನ ಸುಮಾರು 110 ವರ್ಷಗಳ ಇತಿಹಾಸ ಹೊಂದಿದ್ದು, ಹಿಂದಿನಿಂದಲೂ ಗ್ರಾಮದ ವಿಪ್ರ ಸಮಾಜದವರು ನವರಾತ್ರಿ ಹಾಗೂ ವಿಜಯದಶಮಿ ಹಬ್ಬಗಳನ್ನು ಒಗ್ಗಟ್ಟಿನಿಂದ ಆಚರಿಸಿಕೊಂಡು ಬರುತ್ತಿದ್ದಾರೆ. ಹಬ್ಬದ ಮರುದಿನ ಶಮೀವೃಕ್ಕೆ ಪೂಜೆ ಸಲ್ಲಿಸಿ, ಮೊಸರನ್ನವನ್ನು ನೈವೇದ್ಯವಾಗಿ ಅರ್ಪಿಸಿ ಸಾರ್ವಜನಿಕರಿಗೆ ಪ್ರಸಾದ ವಿತರಿಸುವ ಪದ್ಧತಿ ಇದೆ. ಆಚರಣೆಯಲ್ಲಿ ಮುಖ್ಯಸ್ಥರಾದ ಮಲ್ಲಾರಿರಾವ್​, ನಾಗಭೂಷಣರಾವ್​, ಅನಂತಪದ್ಮನಾಭರಾವ್​, ಶೇಷಗಿರಿರಾವ್​, ಶ್ರೀಪಾದ ಭಟ್ಟ ಸೇರಿದಂತೆ ಆನಂದ, ವಿಜಯಕುಮಾರ್​, ಚಂದ್ರಶೇಖರ್​, ಮುರುಳೀಧರ್​, ವಿನಾಯಕ, ವಿಕ್ರಂ ಹಾಗೂ ಕುಟುಂಬದವರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net