ಕಾಂಗ್ರೆಸ್ ಸರ್ಕಾರದ ವಿರುದ್ಧ ಸಿಡಿದೆದ್ದ ಕಮಲ ಪಡೆ

ಕಾಂಗ್ರೆಸ್ ಸರ್ಕಾರ ರೈತ ವಿರೋಽಯಾಗಿ ವರ್ತಿಸುತ್ತಿದೆ ಎಂದು ಆರೋಪಿಸಿ ಚಿತ್ರದುರ್ಗದಲ್ಲಿ ಸೋಮವಾರ ಬಿಜೆಪಿ ರೈತ ಮೋರ್ಚಾ ಜಿಲ್ಲಾ ಘಟಕದ ನೇತೃತ್ವದಲ್ಲಿ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಮಾಜಿ ಸಚಿವ ಬಿ.ಶ್ರೀರಾಮುಲು, ಶಾಸಕ ಡಾ.ಎಂ. ಚಂದ್ರಪ್ಪ, ಎಂಎಲ್‌ಸಿ ಕೆ.ಎಸ್.ನವೀನ್, ಕೆ.ಟಿ. ಕುಮಾರಸ್ವಾಮಿ, ಜಿ.ಎಸ್. ಅನಿತ್‌ಕುಮಾರ್, ಪಾಪೇಶ್‌ನಾಯಕ ಇತರರು ಪ್ರತಿಭಟನೆಯಲ್ಲಿ ಇದ್ದರು.
ಕಾಂಗ್ರೆಸ್ ಸರ್ಕಾರ ರೈತ ವಿರೋಽಯಾಗಿ ವರ್ತಿಸುತ್ತಿದೆ ಎಂದು ಆರೋಪಿಸಿ ಚಿತ್ರದುರ್ಗದಲ್ಲಿ ಸೋಮವಾರ ಬಿಜೆಪಿ ರೈತ ಮೋರ್ಚಾ ಜಿಲ್ಲಾ ಘಟಕದ ನೇತೃತ್ವದಲ್ಲಿ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಮಾಜಿ ಸಚಿವ ಬಿ.ಶ್ರೀರಾಮುಲು, ಶಾಸಕ ಡಾ.ಎಂ. ಚಂದ್ರಪ್ಪ, ಎಂಎಲ್‌ಸಿ ಕೆ.ಎಸ್.ನವೀನ್, ಕೆ.ಟಿ. ಕುಮಾರಸ್ವಾಮಿ, ಜಿ.ಎಸ್. ಅನಿತ್‌ಕುಮಾರ್, ಪಾಪೇಶ್‌ನಾಯಕ ಇತರರು ಪ್ರತಿಭಟನೆಯಲ್ಲಿ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ರೈತರ ಬೇಡಿಕೆಗಳ ಈಡೇರಿಕೆಗೆ ಆಗ್ರಹ
  • ಸ್ಥಗಿತ ಯೋಜನೆಗಳ ಮರು ಆರಂಭಕ್ಕೆ ಒತ್ತಾಯ
  • ಬಿಜೆಪಿ ರೈತ ಮೋರ್ಚಾ
ಚಿತ್ರದುರ್ಗ : ಜಿಲ್ಲಾದ್ಯಂತ ಮೆಕ್ಕೆಜೋಳ ಖರೀದಿ ಕೇಂದ್ರಗಳನ್ನು ಕೂಡಲೇ ಪ್ರಾರಂಭಿಸಬೇಕು, ಮಳೆ ಇಲ್ಲದೆ ನಷ್ಟವಾಗಿರುವ ಶೇಂಗಾ ಬೆಳೆಗೆ ಪ್ರತಿ ಹೆಕ್ಟೇರ್‌ಗೆ ೫೦ ಸಾವಿರ ರೂ.ಪರಿಹಾರ ಘೋಷಿಸುವುದು ಸೇರಿ ರೈತರ ನಾನಾ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಗರದಲ್ಲಿ ಸೋಮವಾರ ಬಿಜೆಪಿ ರೈತ ಮೋರ್ಚಾ ಜಿಲ್ಲಾ ಘಟಕದ ನೇತೃತ್ವದಲ್ಲಿ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಈ ವೇಳೆ ಕಾಂಗ್ರೆಸ್ ಸರ್ಕಾರದ ಕಲ್ಪಿತ ಶವಯಾತ್ರೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಕಾಂಗ್ರೆಸ್ ಸರ್ಕಾರ ರೈತ ವಿರೋಽಯಾಗಿದೆ ಎಂದು ಆರೋಪಿಸಿ ನಗರದ ಶ್ರೀ ನೀಲಕಂಠೇಶ್ವರ ಸ್ವಾಮಿ ದೇಗುಲದಿಂದ ಒನಕೆ ಓಬವ್ವ ವೃತ್ತದವರೆಗೆ ಪಾದಯಾತ್ರೆ ನಡೆಸಿದ ಕಾರ್ಯಕರ್ತರು, ಜಿಲ್ಲಾಽಕಾರಿ ಟಿ.ವೆಂಕಟೇಶ್ ಮೂಲಕ ಸಿಎಂ ಸಿದ್ದರಾಮ ಯ್ಯ ಅವರಿಗೆ ಮನವಿ ರವಾನಿಸಿದರು.
ಜಿಲ್ಲೆಯಲ್ಲಿ ತೊಗರಿ ಬೆಳೆ ನಷ್ಟಕ್ಕೆ ಪರಿಹಾರ ಪ್ರಕಟಿಸಬೇಕು. ಹತ್ತು ಹಲವು ಮಳೆಯಾಶ್ರಿತ ಬೆಳೆಗಳು ಮಳೆ ಇಲ್ಲದೆ ನಷ್ಟವಾಗಿವೆ. ಅಽಕಾರಿಗಳಿಂದ ಮಾಹಿತಿ ಪಡೆದು ಪರಿಹಾರ ಕೊಡಬೇಕು. ರೈತ ವಿದ್ಯಾನಿಽ ಮರು ಆರಂಭಿಸುವುದು ಸೇರಿ ಬಿಜೆಪಿ ಸರ್ಕಾರದ ಅವಽಯಲ್ಲಿ ಜಾರಿಗೊಳಿಸಿದ ರೈತಪರ ಯೋಜನೆಗಳನ್ನು ಮರು ಜಾರಿಗೊಳಿಸಬೇಕೆಂದು ಒತ್ತಾಯಿಸಿದರು. ರಾಜ್ಯದಲ್ಲಿ ರೈತರ ಸಮಸ್ಯೆಗಳು ಹೆಚ್ಚಾಗುತ್ತಿದ್ದು, ಅಭಿವÊದ್ಧಿ ಕಾರ್ಯಗಳು ಕುಂಠಿತಗೊAಡಿವೆ ಎಂದು ಮಾಜಿ ಸಚಿವ ಬಿ. ಶ್ರೀರಾಮುಲು ಆರೋಪಿ ಸಿದರು.
ಅಽಕಾರ ಹಂಚಿಕೆ ವಿಷಯದಲ್ಲಿ ಜನರ ದಿಕ್ಕು ತಪ್ಪಿಸಲಾಗುತ್ತಿದೆ. ಆಡಳಿತದಲ್ಲಿರುವವರು ಕಾಲಹರಣ ಮಾಡುತ್ತಿದ್ದಾರೆ. ಈ ಸರ್ಕಾರ ನಿದ್ರೆಗೆ ಜಾರಿದೆ. ದಲಿತ ಸಮುದಾಯದ ಹೆಸರಲ್ಲಿರುವ ಅನುದಾನದಿಂದ ಈ ವರ್ಗಕ್ಕೆ ಯಾವುದೇ ಪ್ರಯೋಜನವಾಗುತ್ತಿಲ್ಲ.
ಜನರ ಹಿತ ಕಾಪಾಡುವಲ್ಲಿ ಈ ಸರ್ಕಾರ ಸಂಪೂರ್ಣ ವಿ-Àಲವಾಗಿದೆ ಎಂದು ವಾಗ್ದಾಳಿ ನಡೆಸಿದರು. ಹೊಳಲ್ಕೆರೆ ಶಾಸಕ ಡಾ. ಎಂ ಚಂದ್ರಪ್ಪ ಮಾತನಾಡಿ, ರೈತರು, ಕಾರ್ಮಿಕರು ಹಾಗೂ ಬಡವರ ಬಗ್ಗೆ ಕಾಳಜಿ ವಹಿಸದ ಈ ಸರ್ಕಾರವನ್ನು ಅಮಾನತ್ತಿನ ಲ್ಲಿಡಬೇಕೆಂದು ಕೇಂದ್ರ ಮತ್ತು ರಾಷ್ಟçಪತಿ ಅವರಿಗೆ ಮನವಿ ಮಾಡಿದರು. ಕಾಂಗ್ರೆಸ್ ಶಾಸಕರು, ಸಚಿವರು ಜನರ ಸಮಸ್ಯೆಗಳ ನ್ನು ಅಲಿಸುತ್ತಿಲ್ಲ. ಅವುಗಳಿಗೆ ಪರಿಹಾರ ಕಂಡುಕೊಳ್ಳದೆ ಮತದಾರರನ್ನು ನಿರ್ಲಕ್ಷಿಸಲಾಗುತ್ತಿದೆ ಎಂದು ದೂರಿದರು.
ಎಂಎಲ್‌ಸಿ ಕೆ.ಎಸ್. ನವೀನ್ ಮಾತನಾಡಿ, ರಾಜ್ಯದ ಎಲ್ಲ ಸಮಸ್ಯೆಗಳಿಗೂ, ಪರಿಹಾರಕ್ಕಾಗಿ ಕೇಂದ್ರದೆಡೆ ಬೊಟ್ಟು ಮಾಡು ವುದಕ್ಕೆ ಮಾತ್ರ ಸಿದ್ದರಾಮಯ್ಯ ಸರ್ಕಾರ ಸೀಮಿತವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಗೆ ರಾಜ್ಯದಿಂದ ಕೊಡುತ್ತಿದ್ದ ೪ ಸಾವಿರ ರೂ.ಗಳನ್ನು ಸ್ಥಗಿತಗೊಳಿಸಿರುವ ಕಾಂಗ್ರೆಸ್ ಸರ್ಕಾರದ ನಡೆಯನ್ನು ಖಂಡಿಸಿದರು.
ಪಕ್ಷದ ಜಿಲ್ಲಾಧ್ಯಕ್ಷ ಕೆ.ಟಿ. ಕುಮಾರಸ್ವಾಮಿ, ಎ. ಮುರಳಿ, ಜಿ.ಎಸ್. ಅನಿತ್‌ಕುಮಾರ್, ಎನ್.ಆರ್. ಲಕ್ಷಿ÷್ಮÃಕಾಂತ್, ಮಲ್ಲಿಕಾ ರ್ಜುನ್, ರಾಜೇಶ್ ಬುರುಡೇಕಟ್ಟೆ, ಸಂಪತ್‌ಕುಮಾರ್, ಬಾಳೆಕಾಯಿ ರಾಮದಾಸ್, ಮಾಧುರಿ ಗಿರೀಶ್, ನಾಗರಾಜ್‌ ಬೇದ್ರೆ, ದಗ್ಗೆ ಶಿವಪ್ರಕಾಶ್, ಲೋಕೇಶ್, ನಾಗರಾಜ್, ಸುರೇಶ್, ಮಲ್ಲೇಶ್, ಅಣ್ಣಪ್ಪ,ಬೋಸೇರಂಗಪ್ಪ, ಓಬಳೇಶ್, ಕೊಲ್ಲಿ ಲಕ್ಷಿ÷್ಮÃ, ಶಿವಲಿಂ ಗಪ್ಪ,ಪಾಪೇಶ್ ನಾಯಕ, ರಾಮರೆಡ್ಡಿ, ಸಿಂಧು, ತನಯ,ದೊಡ್ಡಯ್ಯ, ರಂಗಸ್ವಾಮಿ, ಎಂಐಟಿ ಸ್ವಾಮಿ, ವಿಜಯೇಂದ್ರ, ಜೆ.ಬಿ.ರಾ ಜು, ಡಾ. ಮಂಜುನಾಥ್, ಬಸಮ್ಮ, ಜಗದಾಂಬ, ಲಕ್ಷಿ÷್ಮÃ, ರೇಖಾ, ವೀಣಾ, ಲೀಲಾವತಿ, ಸಿದ್ದಮ್ಮ, ರಜನಿ, ಶಾಂತಮ್ಮ, ಸಿಂಧು, ಯಶವಂತ, ಕಿರಣ, ಕವಿತಾ, ಸುಮಾ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net