ಬಿಜೆಪಿ ಸರ್ಕಾರದಿಂದ ಕಾರ್ಮಿಕರ ಹಕ್ಕು ಕಸಿದು ಶೋಷಣೆ

 ಅಖಿಲ ಭಾರತ ಸಾರ್ವತ್ರಿಕ ಮುಷ್ಕರದ ಅಂಗವಾಗಿ ಚಿತ್ರದುರ್ಗದಲ್ಲಿ ಗುರುವಾರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ-ಜೆಸಿಟಿಯು, ಸಂಯುಕ್ತ ಹೋರಾಟ-ಕರ್ನಾಟಕ ಜಿಲ್ಲಾ ಘಟಕದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಜೆ.ಯಾದವರೆಡ್ಡಿ, ಕೆ.ಪಿ.ಭೂತಯ್ಯ, ಜಿ.ಸಿ.ಸುರೇಶ್‌ಬಾಬು, ಸಿ.ಕೆ.ಗೌಸ್‌ಪೀರ್, ಭಾಗ್ಯಮ್ಮ ಇತರರಿದ್ದರು.
ಅಖಿಲ ಭಾರತ ಸಾರ್ವತ್ರಿಕ ಮುಷ್ಕರದ ಅಂಗವಾಗಿ ಚಿತ್ರದುರ್ಗದಲ್ಲಿ ಗುರುವಾರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ-ಜೆಸಿಟಿಯು, ಸಂಯುಕ್ತ ಹೋರಾಟ-ಕರ್ನಾಟಕ ಜಿಲ್ಲಾ ಘಟಕದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಜೆ.ಯಾದವರೆಡ್ಡಿ, ಕೆ.ಪಿ.ಭೂತಯ್ಯ, ಜಿ.ಸಿ.ಸುರೇಶ್‌ಬಾಬು, ಸಿ.ಕೆ.ಗೌಸ್‌ಪೀರ್, ಭಾಗ್ಯಮ್ಮ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಜೆ. ಯಾದವರೆಡ್ಡಿ ಆಕ್ರೋಶ
  • ದುರ್ಗದಲ್ಲಿ ಸಾರ್ವತ್ರಿಕ ಮುಷ್ಕರ
  • ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ
ಚಿತ್ರದುರ್ಗ: ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ರೈತರು, ಕಾರ್ಮಿಕರು ಹಾಗೂ ದುಡಿಯುವ ವರ್ಗದವರ ಹಕ್ಕುಗಳನ್ನು ಕಸಿದುಕೊಂಡು ಅವರನ್ನು ಶೋಷಿಸುತ್ತಿದೆ ಎಂದು ಸಂಯುಕ್ತ ಹೋರಾಟ ಸಮಿತಿ ಪ್ರಮುಖ ಜೆ. ಯಾದವರೆಡ್ಡಿ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಒನಕೆ ಓಬವ್ವ ವೃತ್ತದಲ್ಲಿ ಗುರುವಾರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಹಾಗೂ ಸಂಯುಕ್ತ ಹೋರಾಟ-ಕರ್ನಾಟ ಕದ ಜಿಲ್ಲಾ ಘಟಕದ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಅಖಿಲ ಭಾರತ ಸಾರ್ವತ್ರಿಕ ಮುಷ್ಕರದಲ್ಲಿ ಮಾತನಾಡಿದರು.
ವಾರದ ರಜೆ, ಕೆಲಸದ ಭದ್ರತೆಗಾಗಿ ಅನೇಕ ನಾಯಕರ ಹೋರಾಟ, ತ್ಯಾಗ-ಬಲಿದಾನದಿಂದ ಜಾರಿಯಾಗಿದ್ದ ೨೮ ಕಾರ್ಮಿಕ ಹಾಗೂ ರೈತ ಪರ ಕಾನೂನುಗಳಲ್ಲಿ ಕೇವಲ ನಾಲ್ಕನ್ನು ಉಳಿಸಿಕೊಂಡು, ಉಳಿದವುಗಳನ್ನು ಕೇಂದ್ರ ಸರ್ಕಾರ ರದ್ದುಪಡಿಸಿದೆ. ಇದರಿಂದ ರೈತರು, ಕಾರ್ಮಿಕರು ಮತ್ತು ಶ್ರಮಿಕರ ಶೋಷಣೆ ಹೆಚ್ಚಾಗುತ್ತಿದೆ.
ರೈತರು ದುಡಿಯದಿದ್ದರೆ ದೇಶ ನಾಶವಾಗುತ್ತದೆ ಎನ್ನುವ ಅರಿವು ಆಳುವವರಿಗೆ ಇಲ್ಲದಂತಾಗಿದೆ. ನರೇಗಾ ಯೋಜನೆಯನ್ನು ಶಿಥಿಲಗೊಳಿಸುತ್ತಿರುವುದು ಖಂಡನೀಯ. ವಿದ್ಯುತ್ ಖಾಸಗೀಕರಣವಾದರೆ ರೈತರು ಉಳಿಯುವುದಿಲ್ಲ. ಬಂಡವಾಳಶಾಹಿಗಳ ಜತೆ ಸೇರಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಕಾರ್ಮಿಕರನ್ನು ಕಡೆಗಣಿಸುತ್ತಿವೆ ಎಂದು ಆರೋಪಿಸಿದರು.
ಅಂಗನವಾಡಿಗಳಿಗೆ ಬಜೆಟ್ ಕಡಿತ
ಸಿಪಿಐ ಜಿಲ್ಲಾ ಕಾರ್ಯದರ್ಶಿ ಜಿ.ಸಿ. ಸುರೇಶ್‌ಬಾಬು ಮಾತನಾಡಿ, ಅಂಗನವಾಡಿ ಕಾರ್ಯಕರ್ತೆಯರ ಬಜೆಟ್ ಅನ್ನು ೧೮ ಸಾವಿರ ಕೋಟಿ ರೂ.ಗಳಿಗೆ ಇಳಿಸಲಾಗಿದೆ. ಸ್ವಾಮಿನಾಥನ್ ವರದಿ ಜÁರಿಯಾಗದೆ ಬೆಳೆಗಳಿಗೆ ವೈಜÁ್ಞನಿಕ ಬೆಲೆ ಸಿಗುತ್ತಿಲ್ಲ. ಅಂಗನ ವಾಡಿ ಕಾರ್ಯಕರ್ತೆಯರ ಗೌರವ ಧನ ಹೆಚ್ಚಿಸಬೇಕು ಹಾಗೂ ನಿವೃತ್ತರಾದವರಿಗೆ ೧ ಲಕ್ಷ ರೂ. ಇಡಿಗಂಟು ನೀಡಬೇಕು ಎಂದು ಒತ್ತಾಯಿಸಿದರು.
ರಾಜ್ಯ ರೈತ ಸಂಘದ ಹಿರಿಯ ಉಪಾಧ್ಯಕ್ಷ ಕೆ.ಪಿ. ಭೂತಯ್ಯ ಮಾತನಾಡಿ, ಉದ್ಯಮಿಗಳ ಕೋಟ್ಯಂತರ ರೂ. ಸಾಲ ಮನ್ನಾ ಮಾಡುವ ಸರ್ಕಾರದ ಕಣ್ಣಿಗೆ ರೈತರು ಕಾಣುತ್ತಿಲ್ಲವೇ ಎಂದು ಪ್ರಶ್ನಿಸಿದರು.
ಕಾರ್ಮಿಕ ಮುಖಂಡ ಸಿ.ಕೆ. ಗೌಸ್‌ಪೀರ್ ಮಾತನಾಡಿ, ಭದ್ರಾ ಮೇಲ್ದಂಡೆ ಯೋಜನೆ ಕುರಿತು ಚಿತ್ರದುರ್ಗ ಸಂಸದ ಗೋವಿಂದ ಎಂ. ಕಾರಜೋಳ ಅವರು ಚಕಾರ ಎತ್ತುತ್ತಿಲ್ಲ ಎಂದು ದೂರಿದರು.
ಪ್ರತಿಭಟನಾ ಮೆರವಣಿಗೆ: ಪ್ರವಾಸಿ ಮಂದಿರದಿAದ ಆರಂಭವಾದ ಪ್ರತಿಭಟನಾ ಮೆರವಣಿಗೆ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದ ಮೂಲಕ ಒನಕೆ ಓಬವ್ವ ವೃತ್ತದಲ್ಲಿ ಸಮಾವೇಶಗೊಂಡಿತು. ಈ ಸಂದರ್ಭದಲ್ಲಿ ಮಾನವ ಸರಪಳಿ ರಚಿಸಿ, ಬಳಿಕ ಜಿಲ್ಲಾಽಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಲಾಯಿತು.
ರೈತ ಮುಖಂಡರಾದ ಬಸ್ತಿಹಳ್ಳಿ ಸುರೇಶ್‌ಬಾಬು, ಹಂಪಯ್ಯನÀಮಾಳಿಗೆ ಧನಂಜಯ, ಡಿ.ಎಸ್.ಹಳ್ಳಿ ಮಲ್ಲಿಕಾರ್ಜುನ, ಚಿಕ್ಕಪ್ಪನ ಹಳ್ಳಿ ರುದ್ರಸ್ವಾಮಿ, ಮಲ್ಲಾಪುರ ತಿಪ್ಪೇಸ್ವಾಮಿ, ಕಾರ್ಮಿಕ ಪ್ರಮುಖರಾದ ಟಿ.ಆರ್. ಉಮಾಪತಿ, ಇ. ಸತ್ಯಕೀರ್ತಿ, ಎಚ್. ರವಿಕುಮಾರ್, ಟಿ. ಶಫೀವುಲ್ಲಾ, ರವಿ, ಭಾಗ್ಯಮ್ಮ, ಕುಮಾರ್ ಸಮತಲ, ಸತ್ಯಪ್ಪ, ಹನುಮಂತಪ್ಪ, ರಾಮಚಂದ್ರಪ್ಪ, ಅಂಜಿನಪ್ಪ, ಪರ್ವೀನ್, ರಜಿಯಾಬಾನು, ಗಿರಿಜಮ್ಮ, ನಾಗವೇಣಿ, ಮಂಜುಳಾ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net