ಡಿಜಿಟಲ್ ತಂತ್ರಜ್ಞಾನದ ಬಳಕೆಯಲ್ಲಿರಲಿ ಎಚ್ಚರ

ಜಿಲ್ಲೆಯ ಸಹಕಾರ ಸಂಘಗಳ ಅಧ್ಯಕ್ಷರು, ವ್ಯವಸ್ಥಾಪಕರಿಗೆ ಚಿತ್ರದುರ್ಗದಲ್ಲಿ ಮಂಗಳವಾರ ಆಯೋಜಿಸಿದ್ದ ಒಂದು ದಿನದ ತರಬೇತಿ ಕಾರ್ಯಕ್ರಮವನ್ನು ರಾಜ್ಯ ಸಹಕಾರ ಯೂನಿಯನ್ ನಿರ್ದೇಶಕ ಮಾಧುರಿ ಗಿರೀಶ್ ಉದ್ಘಾಟಿಸಿದರು. ಎಚ್.ಎನ್.ತಿಪ್ಪೇಸ್ವಾಮಿ, ಜಿ.ಇ. ಅಜ್ಜಪ್ಪ, ಆರ್. ಮಲ್ಲೇಶಪ್ಪ, ಜೆ. ಶಿವಪ್ರಕಾಶ್, ಜಿ.ವಿ. ಗಂಗಾಧರಪ್ಪ, ಉಪನ್ಯಾಸಕ ಬಿ.ವಿ. ರವೀಂದ್ರನಾಥ್, ಜಯಶ್ರೀ ಪಿ. ಹುನಗುಂದ ಇತರರು ಇದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಸಹಕಾರಿ ಮಾಧುರಿಗಿರೀಶ್ ಸಲಹೆ
  • ಜಿಲ್ಲಾ ಸಹಕಾರ ಯೂನಿಯನ್‌ನಲ್ಲಿ ತರಬೇತಿ
  • ರಾಜ್ಯ ಸಹಕಾರ ಮಹಾಮಂಡಳ
ಚಿತ್ರದುರ್ಗ: ಡಿಜಿಟಲ್ ತಂತ್ರಜ್ಞಾನ ಬಳಕೆಯಲ್ಲಿ ಎಚ್ಚರಿಕೆ ಅಗತ್ಯ ಎಂದು ರಾಜ್ಯ ಸಹಕಾರ ಮಹಾಮಂಡಳದ ನಿರ್ದೇಶಕ ಮಾಧುರಿ ಗಿರೀಶ್ ಹೇಳಿದರು.
ಸಹಕಾರ ಇಲಾಖೆ, ರಾಜ್ಯ ಸಹಕಾರ ಮಹಾಮಂಡಳ ಹಾಗೂ ಚಿತ್ರದುರ್ಗ ಜಿಲ್ಲಾ ಸಹಕಾರ ಯೂನಿಯನ್ ಇವುಗಳ ಸಂಯುಕ್ತ ಆಶ್ರಯದಲ್ಲಿ ಜಿಲ್ಲೆಯ ಪತ್ತಿನ ಸಹಕಾರ ಸಂಘಗಳ ಅಧ್ಯಕ್ಷರು, ವ್ಯವಸ್ಥಾಪಕರಿಗೆ ನಗರದ ಸಹಕಾರ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ವಿಶೇಷ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ. ಈ ದೃಷ್ಟಿಯಿಂದ ಎಐ ಸಹಿತ ಅಗತ್ಯ ಜ್ಞಾನದ ಅಗತ್ಯವಿದೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಎಚ್.ಎನ್. ತಿಪ್ಪೇಸ್ವಾಮಿ ಮಾತನಾಡಿ, ಸಹಕಾರಿ ಕಾಯ್ದೆ ತಿದ್ದುಪಡಿಗಳು ಮತ್ತು ಬದಲಾವಣೆಗಳನ್ನು ತಿಳಿದುಕೊಂಡು ಸಹಕಾರ ಸಂಘಗಳನ್ನು ಪ್ರಗತಿ ಕಡೆಗೆ ಕೊಂಡೊಯ್ಯಬೇಕು. ರಾಷ್ಟಿçÃಕೃತ ಬ್ಯಾಂಕ್‌ಗಳ ಪೈಪೋಟಿ ಎದುರಿಸಬೇಕು ಎಂದರು.
\ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕರಾದ ಜಿ.ಇ. ಅಜ್ಜಪ್ಪ , ಆರ್. ಮಲ್ಲೇಶಪ್ಪ, ಜೆ. ಶಿವಪ್ರಕಾಶ್, ಜಿ.ವಿ. ಗಂಗಾಧರಪ್ಪ, ಉಪನ್ಯಾಸಕ ಬಿ.ವಿ. ರವೀಂದ್ರನಾಥ್, ಜಿಲ್ಲಾ ಸಹಕಾರ ಯೂನಿಯನ್ ಮುಖ್ಯ ಕಾರ್ಯನಿರ್ವಹಣಾಽಕಾರಿ ಜಯಶ್ರೀ ಪಿ. ಹುನಗುಂದ, ಸಹಕಾರ ಶಿಕ್ಷಕ ನಾಗರಾಜ ಪಾಟೀಲ್, ವ್ಯವಸ್ಥಾಪಕಿ ಸೌಮ್ಯ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net