ಹೆದ್ದಾರಿ ನಿರ್ಮಾಣಕ್ಕೆ ಕೆರೆ ಮಣ್ಣು ಬಳಕೆಗೆ ತಡೆ ಹಾಕಿ

ಚಿತ್ರದುರ್ಗ ಜಿ¯್ಲÉಯ ಬಗ್ಗನಡು ಕೆರೆಯಿಂದ ರಾಷ್ಟಿçÃಯ ಹೆದ್ದಾರಿ-೪ರ ಸೇತುವೆ ನಿರ್ಮಾಣಕ್ಕೆ ಕೆರೆ ಮಣ್ಣು ಕೊಂಡೊಯ್ಯುವುದನ್ನು ತಡೆಯುವಂತೆ ಆಗ್ರಹಿಸಿ ಗ್ರಾಮಸ್ಥರು ಶನಿವಾರ ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಚಿತ್ರದುರ್ಗ ಜಿ¯್ಲÉಯ ಬಗ್ಗನಡು ಕೆರೆಯಿಂದ ರಾಷ್ಟಿçÃಯ ಹೆದ್ದಾರಿ-೪ರ ಸೇತುವೆ ನಿರ್ಮಾಣಕ್ಕೆ ಕೆರೆ ಮಣ್ಣು ಕೊಂಡೊಯ್ಯುವುದನ್ನು ತಡೆಯುವಂತೆ ಆಗ್ರಹಿಸಿ ಗ್ರಾಮಸ್ಥರು ಶನಿವಾರ ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಹಿರಿಯೂರು ತಾಲೂಕಿನ ಬಗ್ಗನಡು ಗ್ರಾಮಸ್ಥರ ಒತ್ತಾಯ
  • ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಕೆ
  • ಸಣ್ಣ ನೀರಾವರಿ ಇಲಾಖೆ
ಚಿತ್ರದುರ್ಗ: ಜಿ¯್ಲೆಯ ಹಿರಿಯೂರು ತಾಲೂಕಿನ ಗೌಡನಹಳ್ಳಿ ಗ್ರಾಪಂ ವ್ಯಾಪ್ತಿಯ ಬಗ್ಗನಡು ಕೆರೆಯಿಂದ ರಾಷ್ಟಿçÃಯ ಹೆದ್ದಾ ರಿ- ೪ರ ನಿರ್ಮಾಣಕ್ಕೆ ಮಣ್ಣು ಕೊಂಡೊಯ್ಯುವುದನ್ನು ತಡೆಯುವಂತೆ ಒತ್ತಾಯಿಸಿ ಗ್ರಾಮಸ್ಥರು ಶನಿವಾರ ಪ್ರತಿಭಟನೆ ನಡೆಸಿದರು.
ಈ ಕೆರೆ ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಗೆ ಒಳಪಟ್ಟಿದೆ. ತೆಂಗು ಮತ್ತು ಅಡಕೆ ಹಾಕಿರುವ ೮ರಿಂದ ೧೦ ಗ್ರಾಮಗಳ ರೈತರಿಗೆ ಕೆರೆ ಮಣ್ಣು ತುಂಬಾ ಅವಶ್ಯಕವಿದೆ. ಆದ್ದರಿಂದ ಹೆದ್ದಾರಿ ನಿರ್ಮಾಣಕ್ಕೆ ಮಣ್ಣು ಹೊಡೆಯುವುದನ್ನು ತಡೆಗಟ್ಟಬೇಕು ಎಂದು ಆಗ್ರಹಿಸಿ ಜಿಲ್ಲಾಡಳಿತಕ್ಕೆ ಒತ್ತಾಯಿಸಿ ಮನವಿ ಸಲ್ಲಿಸಿದರು.
ಎನ್‌ಎಚ್-೪ ಸೇತುವೆಗೆ ಮಣ್ಣು ತುಂಬಲು ಲಾರಿ ಮತ್ತು ಹಿಟಾಚಿಗಳೊಂದಿಗೆ ಈಚೆಗೆ ಹಿರಿಯೂರು ಗ್ರಾಮಾಂತರ ಪೊಲೀಸ್ ಉಪ ನಿರೀಕ್ಷಕ ಮಹೇಶ್ ಗೌಡ ಬಂದೋಬಸ್ತ್ ಸಮೇತ ಕೆರೆ ಮಣ್ಣು ತುಂಬಲು ಬಂದಿದ್ದರು. ಈ ವೇಳೆ ಗ್ರಾಮಸ್ಥರು ಮಣ್ಣು ತುಂಬದAತೆ ಮನವಿ ಮಾಡಿದ್ದಕ್ಕೆ ಎ-ï‌ಐಆರ್ ದಾಖಲಿಸುವ ಭೀತಿ ಉಂಟು ಮಾಡಿದ್ದಾರೆ ಎಂದು ಆರೋಪಿಸಿದ ಅವರು, ಗ್ರಾಮ ದ ಕೆರೆ ಮಣ್ಣನ್ನು ಬೇರೆಡೆಗೆ ಕೊಂಡೊಯ್ಯಲು ಅವಕಾಶ ನೀಡದಂತೆ ನಿರ್ದೇಶಿಸುವಂತೆ ಒತ್ತಾಯಿಸಿದರು.
ಗ್ರಾಮದಲ್ಲಿ ಎಸ್ಸಿ-ಎಸ್ಟಿ ಸಮುದಾಯದವರೇ ಹೆಚ್ಚಿನ ಸಂಖ್ಯೆಯಲ್ಲಿದ್ದು, ಜನರಿಗೆ ಉಪಯುಕ್ತವಾದ ಈ ಕೆರೆಯನ್ನು ಸಂರಕ್ಷಿಸ ಬೇಕಿದೆ. ಅದಕ್ಕಾಗಿ ೨೦೨೫ರ ನ. ೨೦ರಂದು ಬಗ್ಗನಡು ಕೆರೆ ಅಂಗಳದ ಮಣ್ಣನ್ನು ತೆಗೆಯುವಂತೆ ಡಿಸಿ ನೀಡಿರುವ ಆದೇಶ ಉಲ್ಲಂöಸಿ, ದಡದಲ್ಲಿನ ಬಳಪ ಮಣ್ಣನ್ನು ತೆಗೆಯಲು ತಾವು ಮಾಡಿರುವ ಕಾರ್ಯಾದೇಶ ಹಿಂಪಡೆಯುವAತೆ ಕೋರಿದರು.
ತಿಮ್ಮಣ್ಣ, ತಿಪ್ಪೇಸ್ವಾಮಿ, ಕರಿಯಣ್ಣ, ಶಶಿ, ಎಸ್. ಕಾಂತರಾಜ್, ಮಹೇಶ್, ತ್ರಿವೇಣಿ, ಮಧು, ಕರಿಯಮ್ಮ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net