ಚಿತ್ರದುರ್ಗ: ಮತಪೆಟ್ಟಿಗೆಯನ್ನು ಸೂಕ್ಷ÷್ಮವಾಗಿ ಗಮನಿಸಿ, ಮತದಾನ ಬಳಿಕ ಮತಪತ್ರಗಳು ಹೊರಗೆ ಬಂದಿರುವ ಮತ್ತು ಅವುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊAಡಿರುವ ಹಲವು ನಿದರ್ಶನಗಳಿವೆ. ಇಂಥ ಅಚಾತುರ್ಯಗಳು ಮರುಕಳಿಸದಂತೆ ಎಚ್ಚರಿಕೆ ವಹಿಸಿ ಎಂದು ಜಿಲ್ಲಾ ಚುನಾವಣಾಽಕಾರಿ ಎಸ್. ರಮ್ಯಾ ಹೇಳಿದರು.
ಆಗ್ನೇಯ ಪದವೀಧರ ಕ್ಷೇತ್ರದಿಂದ ವಿಧಾನಪರಿಷತ್ತಿಗೆ ಅ. ೨೩ರಂದು ಚುನಾವಣೆ ನಿಗದಿಯಾಗಿರುವ ಹಿನ್ನೆಲೆಯಲ್ಲಿ ಗುರುವಾರ ಪಿಆರ್ಒ, ಎಪಿಆರ್ಒ, ಮತಗಟ್ಟೆ ಅಽಕಾರಿಗಳು ಹಾಗೂ ಮೈಕ್ರೋ ಅಬ್ಸವರ್ಸ್ಗಳಿಗೆ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಕ್ರಮಮದಲ್ಲಿ ಚುನಾವಣಾ ಕರ್ತವ್ಯಗಳ ಬಗ್ಗೆ ವಿವರಿಸಿ ಲೋಪಗಳಿಗೆ ಅವಕಾಶವಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಸೂಚಿಸಿದರು.
ಮತದಾನದಿಂದ ಮತ ಎಣಿಕೆವರೆಗೆ ಪ್ರತಿ ಹಂತದಲ್ಲಿ ಎಲ್ಲರೂ ಎಚ್ಚರ ವಹಿಸಬೇಕು. ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿಬೇಕು. ಗೊಂದಲಗಳಿಗೆ ಆಸ್ಪದವಾಗದಂತೆ ಚುನಾವಣÁ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ಕಿವಿಮಾತು ಹೇಳಿದರು.
ಮಾಸ್ಟರ್ ತರಬೇತಿದಾರರು ಸಲಹೆ, ಸೂಚನೆಗಳನ್ನು ಗಮನವಿಟ್ಟು ಕೇಳಬೇಕು. ವೆಬ್ಸೈಟ್ನಲ್ಲಿ ಲಭ್ಯವಿರುವ ಕೈಪಿಡಿಗಳನ್ನು ಡೌನ್ ಲೋಡ್ ಮಾಡಿಕೊಂಡು ಮನನ ಮಾಡಿಕೊಳ್ಳ ಬೇಕೆಂದರು.
ಡಯಟ್ ಪ್ರಾಂಶುಪಾಲ, ಮಾಸ್ಟರ್ ತರಬೇತುದಾರ ಎಸ್.ನಾಗ ಭೂಷಣ್ ತರಬೇತಿ ನೀಡಿದರು. ಎಸಿ ಡಾ.ಕೆ.ಜೆ.ಕಾಂತರಾಜ್, ಚುನಾವಣಾ ತಹಸೀಲ್ದಾರ್ ಬೀಬೀ -Áತಿಮಾ, ಚಿತ್ರದುರ್ಗ ತಹಸೀಲ್ದಾ ರ್ ಬಿ.ಎಂ.ಗೋವಿAದರಾಜ್ ಮತ್ತಿತರರು ಇದ್ದರು.
ಕುಲಗೆಡಲಿದೆ ಮತ
ಒಬ್ಬ ಮತದಾರ ಕಣದಲ್ಲಿರುವ ಎಲ್ಲ ಅಭ್ಯರ್ಥಿಗಳಿಗೂ ಪ್ರಾಶಸ್ತ್ತ್ಯ್ಯದ ಅನುಸಾರ ೧, ೨, ೩... ಹೀಗೆ ಆದ್ಯತೆಯೊಂದಿಗೆ ಮತ ಚಲಾಯಿ ಸಬಹುದು. ಆದರೆ ಒಂದಕ್ಕಿAತ ಹೆಚ್ಚು ಅಭ್ಯರ್ಥಿಗಳ ಹೆಸರಿನ ಮುಂದೆ ೧ ಹಾಕಿದರೆ ಆ ಮತಕ್ಕೆ ಮೌಲ್ಯ ಇರುವುದಿಲ್ಲ ಎಂದು ಅಪರ ಜಿಲ್ಲಾಽಕಾರಿ ಬಿ.ಟಿ. ಕುಮಾರಸ್ವಾಮಿ ಹೇಳಿದರು. ಮತದಾನಕ್ಕೆ ಚುನಾವಣಾ ಆಯೋಗ ನೀಡಿರುವ ಪೆನ್ ಬಳಕೆ ಕಡ್ಡಾಯ. ಮತಗಟ್ಟೆ ಸಿಬ್ಬಂದಿ ಪ್ರತಿ ಮತದಾರರ ಗುರುತನ್ನು ಪರಿಶೀಲಿಸಬೇಕೆಂದರು.