2028ಕ್ಕೆ ರಾಜ್ಯದಲ್ಲಿ ಮತ್ತೆ ಅಧಿಕಾರ ಚುಕ್ಕಾಣಿ

ಹಿರಿಯೂರು ಕ್ಷೇತ್ರಕ್ಕೆ ಅಭಿವೃದ್ಧಿಯ ಲಕ್ಷ್ಮಿ , 2200 ಕೋಟಿ ಮೊತ್ತದ ಯೋಜನೆಗಳು ಮಂಜೂರು
Groundbreaking Ceremony
ಹಿರಿಯೂರಿನಲ್ಲಿ ಒಕ್ಕಲಿಗ ಭವನ ನಿರ್ಮಾಣಕ್ಕೆ ಸಿಎಂ ಡಿ.ಕೆ.ಶಿವಕುಮಾರ್ ಭೂಮಿ ಪೂಜೆ ನೆರವೇರಿಸಿದರು. ನಂಜಾವಧೂತ ಶ್ರೀ, ಸಚಿವರಾದ ಯತೀಂದ್ರ ಸಿದ್ದರಾಮಯ್ಯ, ಟಿ. ರಘುಮೂರ್ತಿ. ಮುಖಂಡರಾದ ಡಾ.ಜೆ. ರಾಜು, ಆರ್. ಮಂಜುನಾಥ್, ರಾಮಚಂದ್ರಪ್ಪ ಇದ್ದರು.Groundbreaking Ceremony
Published on: 

ಹಿರಿಯೂರು: ರಾಜ್ಯದ ಜನರ ಪ್ರೀತಿ ವಿಶ್ವಾಸಗಳಿಸಿ 2028ಕ್ಕೆ ಕಾಂಗ್ರೆಸ್ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯುವುದು ನಿಶ್ಚಿತ ಎಂದು ಸಿಎಂ ಡಿ.ಕೆ. ಶಿವಕುವಾರ್ ವಿಶ್ವಾಸ ವ್ಯಕ್ತಪಡಿಸಿದರು.

ತಾಲೂಕಿನ ಧರ್ಮಪುರ, ಜೆ.ಜಿ. ಹಳ್ಳಿ, ಹಿರಿಯೂರಿನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳು, ಏತ ನೀರಾವರಿ ಯೋಜನೆಗೆ ಮಂಗಳವಾರ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿ, ನಾನು, ನಮ್ಮ ಸಚಿವರು ಹಿರಿಯೂರು ಕ್ಷೇತ್ರಕ್ಕೆ ಬರಿಗೈನಲ್ಲಿ ಬಂದಿಲ್ಲ. ಅಭಿವೃದ್ಧಿಯ ಲಕ್ಷಿಯನ್ನು ಕರೆ ತಂದಿದ್ದೇವೆ. ಕ್ಷೇತ್ರದಲ್ಲಿ 2,200 ಕೋಟಿ ರೂ. ಮೊತ್ತದ ಕಾಮಗಾರಿಗಳನ್ನು ವಿವಿಧ ಇಲಾಖೆಗಳ ಮೂಲಕ ಅನುಷ್ಠಾನಗೊಳಿಸಲು ಆದೇಶಿಸಿದ್ದೇನೆ ಎಂದು ತಿಳಿಸಿದರು.

ಪ್ರಜಾಸೇವೆ ಅಭಿಯಾನದ ಮೂಲಕ ಜನಸ್ನೇಹಿ ಆಡಳಿತದ ಸಂಕಲ್ಪ ವಾಡಿದ್ದು, ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ರಾಜ್ಯದಲ್ಲಿ ಭೂಮಿ ಬೆಲೆ ಹೆಚ್ಚಾಗಿದೆ. ಸವಾಜದ ಕಟ್ಟಕಡೆಯ ವ್ಯಕ್ತಿಗೂ ನಿವೇಶನ, ಸೂರು ಕಲ್ಪಿಸಲು ಯೋಜನೆ ರೂಪಿಸಲಾಗಿದೆ. ಈಗಾಗಲೇ 1.11 ಕೋಟಿ ಜನರಿಗೆ ಹಕ್ಕು ಪತ್ರ ವಿತರಿಸಲಾಗಿದೆ ಎಂದು ತಿಳಿಸಿದರು.

ವಾಜಿ ಶಾಸಕಿ ಪೂರ್ಣಿವಾ ಅವರ ತಂದೆ ಹಾಗೂ ನಾನು ಒಟ್ಟಿಗೆ ಕೆಲಸ ವಾಡಿದವರು. ಈ ಹಿಂದೆ ಬೇರೆ ಪಕ್ಷದಿಂದ ಸ್ಪರ್ಧಿಸಿದ್ದರೂ ಈ ರಾಜ್ಯಕ್ಕೆ ಭವಿಷ್ಯ ಇರುವುದು ಕಾಂಗ್ರೆಸ್‌ನಿಂದ ಎಂದರಿತು ಜನಸೇವೆ ಮಾಡುತ್ತಿದ್ದಾರೆ ಎಂದು ತಿಳಿಸಿದರು. ಜಿಲ್ಲಾ ಸಚಿವ ಟಿ.ರುಮೂರ್ತಿ ವಾತನಾಡಿ, ರಾಜ್ಯ ಸರ್ಕಾರ ವಿದ್ಯಾರ್ಥಿ, ರೈತ, ಜನ ಸ್ನೇಹಿಯಾಗಿ ಕೆಲಸ ವಾಡುತ್ತಿದೆ. ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ಹಿರಿಯೂರಿಗೆ ಸಿಂಹ ಪಾಲು ಸಿಗಲಿದೆ ಎಂದು ತಿಳಿಸಿದರು.

ಸಚಿವರಾದ ಕೆ.ಎಚ್.ಮುನಿಯಪ್ಪ, ಈಶ್ವರಖಂಡ್ರೆ, ಜಮೀರ್ ಅಹಮ್ಮದ್ ಖಾನ್, ಅಜಯ್ ಧರಮ್ ಸಿಂಗ್, ಶಾಸಕರಾದ ಬಿ.ಜಿ. ಗೋವಿಂದಪ್ಪ, ಡಾ. ರಂಗನಾಥ್, ವೀರೇಂದ್ರ ಪಪ್ಪಿ, ಟಿ.ಬಿ. ಜಯಚಂದ್ರ, ಎಂಎಲ್ಸಿ ಡಿ.ಟಿ.ಶ್ರೀನಿವಾಸ್, ವಾಜಿ ಸಚಿವ ಎಚ್. ಆಂಜನೇಯ, ವಾಜಿ ಸಂಸದ ಬಿ.ಎನ್. ಚಂದ್ರಪ್ಪ, ಆದಿಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಎಸ್.ಮಂಜುನಾಥ್, ಮುಖಂಡರಾದ ಸುಹಾಸ್ ಸುಧಾಕರ್, ಈರಲಿಂಗೇಗೌಡ, ರಾಕ್ ಮಂಜು, ಗೌಡಪ್ಪ, ಮಧು, ಈರಣ್ಣ, ಡಾ.ಜೆ. ರಾಜು, ಕೆಪಿಸಿಸಿ ಸದಸ್ಯ ಅಮೃತೇಶ್ವರಸ್ವಾಮಿ, ಜಿಪಂ ವಾಜಿ ಸದಸ್ಯರಾದ ನಾಗೇಂದ್ರನಾಯ್ಕ, ಗೀತಾ, ಸಿ.ಬಿ. ಪಾಪಣ್ಣ, ಧರ್ಮಪುರ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಸಕ್ಕರ ಗಿರೀಶ್, ಗೀತಾನಂದಿನಿ ಗೌಡ, ಬಿ.ಎಸ್. ರುನಾಥ್, ಮಹಂತೇಶ್ ಇತರರಿದ್ದರು.

ನುಡಿದಂತೆ ನಡೆಯುತ್ತೇವೆ..

ಸಚಿವ ಬಾಲಕೃಷ್ಣ ಮಾತನಾಡಿ, ನಮ್ಮ ಭರವಸೆಯಂತೆ ಅಭಿವೃದ್ಧಿ ಕಾರ್ಯ ಮಾಡಿದ್ದೇವೆ. ಈಗ ಹೇಳಿದಂತೆ ಮುಂದೆ ನಡೆದುಕೊಳ್ಳದಿದ್ದರೆ 2028ಕ್ಕೆ ನಮ್ಮನ್ನು ಕ್ಷೇತ್ರದ ಒಳಕ್ಕೆ ಬಿಟ್ಟುಕೊಳ್ಳಬೇಡಿ. ನುಡಿದಂತೆ ನಿಮ್ಮ ಕೆಲಸಗಳಾದರೆ ಪ್ರತಿಪಕ್ಷದವರನ್ನು ಒಳಗೆ ಬಿಟ್ಟು ಕೊಳ್ಳಬೇಡಿ. ಭರವಸೆ ಈಡೇರಿಸುವುದು ನಮ್ಮ ಬದ್ಧತೆ. ಸಂಕಲ್ಪ ಎಂದು ಹೇಳುವ ಮೂಲಕ ಕ್ಯಾಪ್ಟನ್ ಡಿಕೆಶಿ ಟಾಸ್ಕ್ ಅನ್ನು ಸಂಪುಟ ಸದಸ್ಯರು ಗಂಭೀರವಾಗಿ ಪರಿಗಣಿಸಿರುವುದನ್ನು ಸಾಕ್ಷೀಕರಿಸಿದರು.

ಪಕ್ಷ ದ್ರೋಹ ಸರಿಯಲ್ಲ

ಎಂಎಲ್‌ಸಿ ಚುನಾವಣೆ ಸೋಲಿಗೆ ಕೆ.ಎನ್. ರಾಜಣ್ಣ ನೀಡಿರುವ ಹೇಳಿಕೆ ಸುಳ್ಳು. ರಾಜಣ್ಣ ಎಂಎಲ್‌ಸಿ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಮತ ಹಾಕಿಸಿಲ್ಲ. ಪಕ್ಷ ವಿರೋಧಿಗಳನ್ನು ಮೊದಲು ಹೊರ ಹಾಕಬೇಕು. ರಾಜಣ್ಣ ಪಕ್ಷಕ್ಕೆ ದ್ರೋಹ ಮಾಡುವುದು ಸರಿಯಲ್ಲ ಎಂದು ಸಚಿವ ಎಚ್.ಸಿ. ಬಾಲಕೃಷ್ಣ ಅಸಮಾಧಾವ ವ್ಯಕ್ತಪಡಿಸಿದರು. ಹಿರಿಯೂರು ಉಪ ಚುನಾವಣೆ ಗಿಮಿಕ್ ಎಂಬುದು ಸರಿಯಲ್ಲ. ಈ ಭಾಗದ ಜನರ ಸಮಸ್ಯೆಗೆ ಸ್ಪಂದಿಸಿ ಯೋಜನೆ ರೂಪಿಸಿದ್ದೇವೆ. ಹಿರಿಯೂರಿನ ಅಭಿವೃದ್ಧಿಗೆ ದಿ. ಸುಧಾಕರ್, ಮಾಜಿ ಶಾಸಕಿ ಪೂರ್ಣಿವಾ ಕೊಡುಗೆ ಸ್ಮರಣೀಯ ಎಂದರು.

ಸಮುದಾಯ ಭವನ ನಿರ್ಮಾಣಕ್ಕೆ ಆದೇಶ

ಸವಾಜ ಕಲ್ಯಾಣ ಇಲಾಖೆಯಿಂದ ಎಲ್ಲ ಜಾತಿಯವರಿಗೂ ಸಮುದಾಯ ಭವನಗಳನ್ನು ನಿರ್ಮಿಸಲು ಆದೇಶ ನೀಡಲಾಗಿದೆ. ಸಚಿವ ಬಾಲಕೃಷ್ಣ ಅವರು ಕ್ಷೇತ್ರದ ಜನರ ಸಮಸ್ಯೆಗಳನ್ನು ಗಮನಕ್ಕೆ ತಂದಿದ್ದಾರೆ. ಒಕ್ಕಲಿಗರ ಸಮುದಾಯ ಭವನಕ್ಕೆ 5 ಕೋಟಿ ರೂ. ಅನುದಾನ ಮಂಜೂರಾತಿ ನೀಡಿದ್ದೇನೆ. ಗೊಲ್ಲರ ಸಮುದಾಯ ಭವನ, ಪರಿಶಿಷ್ಟ ಜಾತಿ/ಪಂಗಡ, ಹಿಂದುಳಿದ ವರ್ಗಗಳು, ಕನಕ ಭವನಕ್ಕೂ ಅನುದಾನ ನೀಡಲಾಗುವುದು. ಈ ಸರ್ಕಾರಕ್ಕೆ ಎಲ್ಲರೂ ಶಕ್ತಿ ತುಂಬಬೇಕು ಎಂದು ಮನವಿ ಮಾಡಿದರು.

5 ಲಕ್ಷ ನಿವೇಶನ ಹಂಚಿಕೆಗೆ ಚಿಂತನೆ

ರಾಜ್ಯದಲ್ಲಿ 5 ಲಕ್ಷ ನಿವೇಶನಗಳನ್ನು ಹಂಚಿಕೆ ವಾಡಲು ಚಿಂತನೆ ನಡೆಸಲಾಗಿದೆ. ಭೂಮಿ ಗ್ಯಾರಂಟಿ ಮೂಲಕ ಎಲ್ಲರ ಆಸ್ತಿ ದಾಖಲೆಗಳನ್ನು ಸರಿಪಡಿಸಿಕೊಡಲು ಸರ್ಕಾರ ಮುಂದಾಗಿದೆ. ರೈತರ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್‌ಗಾಗಿ ಈ ವರ್ಷ 30 ಸಾವಿರ ಕೋಟಿ ರೂ. ಅನುದಾನ ಒದಗಿಸಲಾಗಿದೆ. ನಮ್ಮ ಸರ್ಕಾರದ 10 ಸಚಿವರು ತಮ್ಮ ಇಲಾಖೆಯಿಂದ ಈ ಕ್ಷೇತ್ರದಲ್ಲಿ ಆಗಬೇಕಿರುವ ಕೆಲಸಗಳನ್ನು ವಾಡಿಸುತ್ತಿದ್ದಾರೆ. ರಾಜ್ಯದಲ್ಲಿ 200ಕ್ಕೂ ಹೆಚ್ಚು ತಾಲೂಕುಗಳನ್ನು ಬರಪೀಡಿತ ಎಂದು ೋಷಿಸಲಾಗಿದೆ ಎಂದು ಸಿಎಂ ಹೇಳಿದರು.

ಖಾಲಿ ಮಾತು ಆಡಲ್ಲ

ಧರ್ಮಪುರದ ಬಸ್ ನಿಲ್ದಾಣಕ್ಕೆ 3.5 ಕೋಟಿ ರೂ. ವೆಚ್ಚದ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಾಗಿದೆ. ತಾಲೂಕಿನ ನೀರಾವರಿ ಯೋಜನೆ ಬೇಡಿಕೆಗೆ ಮಂಜೂರಾತಿ ನೀಡಿ, ಟೆಂಡರ್ ಕರೆದು, ಈಗಾಗಲೇ ಪರಿಕ್ಷಾರ್ಥ ನೀರು ಹರಿಸಲಾಗಿದೆ. ನಾನು ಖಾಲಿ ವಾತು ಆಡುವವನಲ್ಲ. ರಾಜ್ಯದ ಪ್ರಜಾ ಸೇವಕನಾಗಿ, ಸುಧಾಕರ್ ಆತ್ಮೀಯ ಸ್ನೇಹಿತನಾಗಿ ನಿಮ್ಮ ಮುಂದೆ ನಿಂತಿದ್ದೇವೆ ಎಂದು ಹೇಳಿದರು.

ಟಾಸ್ಕ್ ಕೊಟ್ಟ ಸಿಎಂ..

ನೀತಿ ಸಂಹಿತೆ ಆತಂಕದಲ್ಲಿ ಹಲವು ಸಚಿವರು, ಶಾಸಕರು, ಪಕ್ಷದ ಪ್ರಮುಖರೊಂದಿಗೆ ಕ್ಷೇತ್ರದಲ್ಲಿ ಸಿಎಂ ಮಿಂಚಿನ ಸಂಚಾರ ನಡೆಸಿದರು. ಈ ಉಪಚುನಾವಣೆ ಗೆಲುವಿಗೆ ಶ್ರಮಿಸುವಂತೆ ತುಮಕೂರು, ದಾವಣಗೆರೆ ಹಾಗೂ ಚಿತ್ರದುರ್ಗ ಜಿಲ್ಲೆಗಳ ಕೈ ನಾಯಕರಿಗೆ ಟಾಸ್ಕ್ ನೀಡಿದರು.

ಇಬ್ಬರು ಆಕಾಂಕ್ಷಿಗಳು

ನಾನು ಈಗ ಕಾಂಗ್ರೆಸ್ ಪಕ್ಷದ ಅಧ್ಯಕ್ಷನಲ್ಲ. ಆದರೂ ಉಪಚುನಾವಣೆಯಲ್ಲಿ ಯಾರನ್ನು ಕಣಕ್ಕೆ ಇಳಿಸಬೇಕು ಎಂದು ನಾಲ್ಕು ಸರ್ವೇ ವಾಡಿಸಿದ್ದೇನೆ. ನಿಮ್ಮ ಅಭ್ಯರ್ಥಿಯಾಗಿ ನಾನೇ ಇದ್ದೇನೆ. ಧರ್ಮಪುರದ ಜನ ನಿಮ್ಮ ಸೇವೆ ವಾಡುವ ಪಕ್ಷ ಗೆಲ್ಲಿಸಬೇಕು. ಇಬ್ಬರು ಆಕಾಂಕ್ಷಿಗಳು ನಿಮ್ಮ ಮುಂದೆ ಇದ್ದಾರೆ. ಯಾರು ಅಭ್ಯರ್ಥಿ ಎಂಬುದನ್ನು ಅವರೇ ತೀರ್ವಾನಿಸಿಕೊಂಡು ಬರಲಿ ಎಂದು ಸಿಎಂ ವಾರ್ಮಿಕವಾಗಿ ಹೇಳಿದ್ದು, ಸುಹಾಸ್ ಒಬ್ಬರೇ ಆಕಾಂಕ್ಷಿ ಅಲ್ಲ, ಪೂರ್ಣಿವಾ ಕೂಡ ಇದ್ದಾರೆ ಎಂಬ ಸಂದೇಶ ರವಾನೆಯಾಯಿತು.

ಯಾರು ಬೇಕಾದರೂ ನಿಲ್ಲಲಿ

ಉಪ ಚುನಾವಣೆಗಳಲ್ಲಿ ಚನ್ನಪಟ್ಟಣದಲ್ಲಿ ಕುವಾರಣ್ಣನ ಮಗನನ್ನು ಬಲವಂತವಾಗಿ ನಿಲ್ಲಿಸಿದರು. ನಮ್ಮ ಅಭ್ಯರ್ಥಿ ಯೋಗೇಶ್ವರ್ 25 ಸಾವಿರ ಮತಗಳ ಅಂತರದಲ್ಲಿ ಗೆದ್ದರು. ಶಿಗ್ಗಾಂವಿಯಲ್ಲಿ ಬೊವ್ಮಾಯಿ ಅವರ ಪುತ್ರನ ವಿರುದ್ಧ ಪೈಲ್ವಾನ್ ಪಠಾಣ್ ಗೆದ್ದರು. ಇಬ್ಬರು ವಾಜಿ ಮುಖ್ಯಮಂತ್ರಿಗಳ ಮಕ್ಕಳನ್ನು ಜನ ಸೋಲಿಸಿದರು. ಇಲ್ಲೂ ಯಾರು ಬಂದು ನಿಲ್ಲುತ್ತಾರೋ ನಿಲ್ಲಲಿ. ಯಾವುದೇ ದೊಡ್ಡ ನಾಯಕರು ಬೇಕಾದರೂ ಬಂದು ನಿಲ್ಲಲಿ ಎಂದು ಸಿಎಂ ಸವಾಲು ಹಾಕಿದರು. ಧರ್ಮಪುರ ತಾಲೂಕು ರಚನೆ ಪ್ರಸ್ತಾವನೆ ಮುಂದಿಟ್ಟಿದ್ದೀರಿ. ಈ ಬಗ್ಗೆ ನಮಗೂ ಚಿಂತನೆ ಇದೆ ಎಂದರು.

ಸ್ನೇಹಿತನ ಸ್ಮರಣೆ

ಈ ಕಾರ್ಯಕ್ರಮಕ್ಕೆ ದುಃಖದಿಂದ ಬಂದಿರುವೆ. ನಾನು ಸಿಎಂ ಆಗಿರುವಾಗ ಸುಧಾಕರ್ ಇದ್ದಿದ್ದರೆ ಎಷ್ಟು ಸಂತೋಷಪಡುತ್ತಿದ್ದರು. ನಾನು ಮಂತ್ರಿಯಾಗದಿದ್ದರೂ ಚಿಂತೆ ಇಲ್ಲ, ನನ್ನ ಸ್ನೇಹಿತ ಡಿ.ಕೆ. ಶಿವಕುವಾರ್ ಸಿಎಂ ಆಗಬೇಕು ಎಂದು ಅವರು ಸಾಯುವ 2 ತಿಂಗಳ ಮುನ್ನ ಹೇಳಿದ್ದರು. ಅವರ ಕನಸು, ಜನರ ಮೇಲೆ ಇಟ್ಟಿದ್ದ ಪ್ರೀತಿ ಅಪಾರ. ಅವರಿಗೆ ಜಾತಿ ಧರ್ಮ ಇರಲಿಲ್ಲ. ಎಲ್ಲರನ್ನೂ ಒಟ್ಟಾಗಿ ಕರೆದುಕೊಂಡು ಹೋಗುತ್ತಿದ್ದರು ಎಂದು ಸಿಎಂ ಸ್ಮರಿಸಿಕೊಂಡರು.

ಸುಹಾಸ್‌ಗೆ ಅತಿಹೆಚ್ಚು ಮತ ಕೊಡಿ

ಕ್ಷೇತ್ರದಲ್ಲಿ ಪೂರ್ಣಿವಾ ಹಾಗೂ ಡಿ. ಸುಧಾಕರ್ ಅವರನ್ನು ಗೆಲ್ಲಿಸಿದ್ದೀರಿ, ಇಂದು ಗೆಳೆಯ ಸುಧಾಕರ್ ಇದ್ದಿದ್ದರೆ ಸಂಭ್ರವಾಚರಣೆ ವಾಡಬಹುದಿತ್ತು. ನೀವು ಸುಹಾಸ್ ಸುಧಾಕರ್ ಅವರನ್ನು ಅತಿ ಹೆಚ್ಚು ಮತ ಕೊಟ್ಟು ಗೆಲ್ಲಿಸಿ ಎಂದು ಡಿ. ಕೆ. ಶಿವಕುಮಾರ್ ಮನವಿ ಮಾಡಿದರು. ತಾಲೂಕಿನ ಜೆ.ಜಿ. ಹಳ್ಳಿ ಹೋಬಳಿಯ 17 ಕೆರೆಗಳಿಗೆ ಶಾಶ್ವತ ನೀರಾವರಿ ಸೌಲಭ್ಯ ಕಲ್ಪಿಸುವ ಏತ ನೀರಾವರಿ ಯೋಜನೆಗೆ ದಿಂಡಾವರ ಗ್ರಾಮದಲ್ಲಿ ಭೂಮಿ ಪೂಜೆ ನೆರವೇರಿಸಿ ವಾತನಾಡಿದರು.

15 ಸಾವಿರ ಲೀಡ್‌ನಲ್ಲಿ ಗೆಲ್ಲಿಸ್ತೀರಾ?

ಧರ್ಮಪುರ ಹೋಬಳಿ ಕಳೆದ ಚುನಾವಣೆಯಲ್ಲಿ ಸುಧಾಕರ್‌ಗೆ ಅಂದಾಜು 8 ಸಾವಿರ ಮತಗಳ ಲೀಡ್ ಕೊಟ್ಟಿತ್ತು. ನಾವು ನುಡಿದಂತೆ ನಡೆದಿದ್ದೇವೆ. 2,500 ಕೋಟಿ ರೂ. ಜತೆ ಇನ್ನೂ 500 ಕೋಟಿ ರೂ.ಕೊಡುತ್ತೇನೆ. ಈ ಹೋಬಳಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ 15 ಸಾವಿರ ವೋಟ್ ಲೀಡ್ ಕೊಡುತ್ತೀರಾ? ಎಂದು ಪ್ರಶ್ನಿಸುವ ಮೂಲಕ , ತಾವು ಸಿಎಂ ಆದ ಬಳಿಕ ಮೊದಲ ಉಪ ಚುನಾವಣೆ ರಿಸಲ್ಟ್ ಕಾಂಗ್ರೆಸ್ ಪರವಾಗಿರಬೇಕು, ಅಭ್ಯರ್ಥಿ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಬೇಕೆಂಬ ಮನದ ಇಂಗಿತ ಬಹಿರಂಗಪಡಿಸಿದರು.

ಮಾತಿನ ಭರದಲ್ಲಿ ಕ್ಯಾಂಡಿಡೇಟ್ ಘೋಷಣೆ

ಸುಹಾಸ್‌ಗೆ ಸುಧಾಕರ್‌ಗಿಂತ ಹೆಚ್ಚು ಮತ ಕೊಡಬೇಕು ಎಂದು ಮಾತಿನ ಭರದಲ್ಲಿ ಹೇಳಿದ ಸಿಎಂ, ನಮಗೆ ವೋಟು ಗ್ಯಾರಂಟಿ ತಾನೇ ಎಂದು ಪ್ರಶ್ನಿಸಿದರು. ಈ ವೇಳೆ ಸುಹಾಸ್ ಸುಧಾಕರ್‌ಗೆ ಟಿಕೆಟ್ ನೀಡುವಂತೆ ಸಭಿಕರು ಕೂಗಿದಾಗ, ನಿಮ್ಮ ಕ್ಯಾಂಡಿಡೇಟೇ ನನ್ನ ಕ್ಯಾಂಡಿಡೇಟ್ ಎಂದು ಪ್ರತಿಕ್ರಿಯಿಸಿದರು.

ಕನಕಪುರದಷ್ಟೇ ಹಿರಿಯೂರು ಮುಖ್ಯ

ತಾಲೂಕಿನ ಸಮಗ್ರ ಅಭಿವೃದ್ಧಿಗೆ ವಿಶೇಷ ಅನುದಾನ ನೀಡಿದ್ದು, ಧರ್ಮಪುರ ಏತ ನೀರಾವರಿ ಯೋಜನೆಯಲ್ಲಿ ಕೈಬಿಟ್ಟಿರುವ ಕೆರೆಗಳನ್ನು ತುಂಬಿಸಲು ಯೋಜನೆ ರೂಪಿಸಿದ್ದು, 35 ಕೋಟಿ ರೂ. ಅನುದಾನ ನೀಡಲಾಗುವುದು. ನನಗೆ ಕನಕಪುರ ಕ್ಷೇತ್ರ ಎಷ್ಟು ಮುಖ್ಯವೋ, ಹಿರಿಯೂರು ಕೂಡ ಅಷ್ಟೇ ಮುಖ್ಯ ಎಂದರು.