ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ಪೊಲೀಸ್ ಹಾಗೂ ಸಾರಿಗೆ ಇಲಾಖೆ ಅಽಕಾರಿಗಳು ಚಿತ್ರದುರ್ಗದ ಖಾಸಗಿ ಬಸ್ ನಿಲ್ದಾಣದಲ್ಲಿ ಮಂಗಳವಾರ ರಸ್ತೆ ಸಂಚಾರ ನಿಯಮಗಳೆಡೆ ಜಾಗೃತಿ ಮೂಡಿಸಿದರು. ಡಿವೈಎಸ್‌ಪಿ ಪಿ.ಕೆ. ದಿನಕರ್,ಆರ್‌ಟಿಒ ಭರತ್ ಕಾಳಿಸಿಂಗೆ, ಪಿಐ ಗಳಾದ ಬಾಲಚಂದ್ರನಾಯಕ್, ತಿಮ್ಮಣ್ಣ, ಮೋಹನ್ ಮತ್ತಿತರ ಅಽಕಾರಿಗಳು ಇದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಜಿಲ್ಲಾದ್ಯಂತ ರಸ್ತೆ ಸುರಕ್ಷತಾ ಸಪ್ತಾಹ
ಸಾರ್ವಜನಿಕರಿಗೆ ಕ್ವಿಜ್
ವಿಜೇತರಿಗೆ ಹೆಲ್ಮೆಟ್ ವಿತರಣೆ
ಚಿತ್ರದುರ್ಗ: ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ರಕ್ಷಣಾ ಇಲಾಖೆ ಜಿಲ್ಲಾದ್ಯಂತ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿ ಕೊಳ್ಳಲಾಗಿದೆ ಎಂದು ಎಸ್‌ಪಿ ರಂಜಿತ್‌ಕುಮಾರ್ ಬಂಡಾರು ತಿಳಿಸಿದ್ದಾರೆ.
ನ.೧೭ರಂದು ಸಪ್ತಾಹ ಆರಂಭವಾಗಿದ್ದು, ೨೩ರವರೆಗೆ ಆಚರಿಸಲಾಗುತ್ತಿದೆ. ಈ ಅವಽಯಲ್ಲಿ ರಸ್ತೆ ಸುರಕ್ಷತೆ ಬಗ್ಗೆ ಸಾರ್ವಜನಿಕರ ಲ್ಲಿ ತಿಳಿವಳಿಕೆ ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಇದರಲ್ಲಿ ಎಲ್ಲ ಠಾಣಾಽಕಾರಿಗಳು, ಸಿಬ್ಬಂದಿ ಭಾಗ ವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ಸೋಮವಾರ ಜಿಲ್ಲೆಯ ಎಲ್ಲ ಪೊಲೀಸ್ ಅಽಕಾರಿಗಳು ಸಂಚಾರ ನಿಯಮಗಳನ್ನು ಸಾರ್ವಜನಿಕರು ಪಾಲಿಸುತ್ತಿದ್ದಾರೆಯೇ ಇಲ್ಲವೇ ಎಂಬುದನ್ನು ಪರಿಶೀಲಿಸಿದ್ದಾರೆ. ವ್ಯವಸ್ಥಿತ ವಾಹನಗಳ ನಿಲುಗಡೆಗೆ ಕ್ರಮವಹಿಸುವುದರ ಜತೆಗೆ ರಸ್ತೆ ಸುರಕ್ಷತೆ ಕುರಿತು ಕರ ಪತ್ರಗಳನ್ನು ವಿತರಿಸಿದ್ದಾರೆ.
ಮಂಗಳವಾರ ಆಟೋ ಚಾಲಕರು, ಲಾರಿ ಚಾಲಕರ ಸಭೆ ನಡೆಸಿ ರಸ್ತೆ ನಿಯಮಗಳ ಬಗ್ಗೆ ತಿಳಿಸಲಾಗಿದೆ. ಪೊಲೀಸರು, ಆರ್‌ಟಿಒ ಅಽಕಾರಿಗಳ ಜಂಟಿ ಕಾರ್ಯಾಚರಣೆ ಕೈಗೊಂಡು ವಾಹನಗಳ ಪರವಾನಗಿ ಇತರೆ ದಾಖಲೆಗಳನ್ನು ಪರಿಶೀಲಿಸಿದ್ದಾರೆ.
೧೯ ರಂದು ಎಲ್ಲ ಠಾಣೆಗಳ ವ್ಯಾಪ್ತಿಯಲ್ಲಿರುವ ಶಾಲಾ,ಕಾಲೇಜುಗಳಿಗೆ, ವಿವಿಧ ಕಚೇರಿಗಳಿಗೆ ತೆರಳಿ ರಸ್ತೆ ಸುರಕ್ಷತಾ ನಿಯಮಗಳ ಬಗ್ಗೆ ಜಾಗÊತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ೨೦ ರಂದು ಎಲ್ಲ ಠಾಣÉಗಳ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಕ್ವಿಜ್ ಏರ್ಪಡಿಸಿ ವಿಜೇತರಿಗೆ ಬಹುಮಾನವಾಗಿ ೧೦೦೦ ಹೆಲ್ಮೆಟ್‌ಗಳನ್ನು ವಿತರಿಸಲಾಗುತ್ತದೆ. ಡಿಎಆರ್‌ನಲ್ಲಿ ರಕ್ತದಾನ ಶಿಬಿರ ಆಯೋಜಿಸಿರುತ್ತದೆ.
೨೧ರಂದು ಹಿರಿಯೂರು ಮತ್ತು ಚಳ್ಳಕೆರೆಯಲ್ಲಿ ರಕ್ತದಾನ ಶಿಬಿರ ಏರ್ಪಡಿಸಿ ಈ ಕುರಿತು ಅರಿವು ಮೂಡಿಸಲಾಗುತ್ತದೆ. ೨೨ರಿಂದ ಎರಡು ದಿನಗಳ ಕಾಲ ಪೊಲೀಸ್ ಹಾಗೂ ಆರ್‌ಟಿಒ ಅಽಕಾರಿಗಳು ಜಂಟಿ ಕಾರ್ಯಾಚರಣÉ ನಡೆಸಿ ಸಂಚಾರ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಐಎಂವಿ ಪ್ರಕರಣಗಳನ್ನು ದಾಖಲಿಸಲಾಗುತ್ತದೆ.
ಅಪಘಾತವಾಗುವಂಥ ಕಪ್ಪುಚುಕ್ಕೆ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಿ ಸಂಬAಽಸಿದ ಇಲಾಖೆಗೆ ದುರಸ್ತಿಗೆ ಕೋರಲಾಗುತ್ತದೆ ಎಂದು ಎಸ್‌ಪಿ ತಿಳಿಸಿದ್ದಾರೆ.
"
ಸಾರಿಗೆ ಹಾಗೂ ಪೊಲೀಸ್ ಇಲಾಖೆಯಿಂದ ನವೆಂಬರ್‌ನ್ನು ವಾಯು ಮಾಲಿನ್ಯ ತಡೆ ಜಾಗೃತಿ ಮಾಸಾಚರಣೆಯನ್ನಾಗಿ ಜಿಲ್ಲೆಯಲ್ಲಿ ಆಚರಿಸಲಾಗುತ್ತಿದೆ.