ಅಡುಗೆ ಅನಿಲದ ಗ್ಯಾರಂಟಿ ಆಟೋ ಎಲ್‌ಪಿಜಿಗಿಲ್ಲ

 ಚಿತ್ರದುರ್ಗದಲ್ಲಿ ಮುಚ್ಚಿರುವ ಆಟೋ ಗ್ಯಾಸ್ ಬಂಕ್
ಚಿತ್ರದುರ್ಗದಲ್ಲಿ ಮುಚ್ಚಿರುವ ಆಟೋ ಗ್ಯಾಸ್ ಬಂಕ್
Published on

ಪ್ರಮುಖ ಮುಖ್ಯಾಂಶಗಳು

  • ಸಂಕಷ್ಟಕ್ಕೆ ಸಿಲುಕಿದ ಚಾಲಕರ ಬದುಕು
  • ಸಾಲ ಮಾಡಿ ಸಿಎನ್‌ಜಿ ಕರ್ನ್ವಷನ್‌ಗೆ ಮುಂದು
  • ಮಧ್ಯಪ್ರಾಚ್ಯದ ಯುದ್ಧ
ಡಿಪಿಎನ್ ಶ್ರೇಷ್ಠಿ, ಚಿತ್ರದುರ್ಗ
ಮಧ್ಯಪ್ರಾಚ್ಯದಲ್ಲಿ ಆಗುತ್ತಿರುವ ಯುದ್ಧದಿಂದಾಗಿ ಜಗತ್ತಿನ ಹಲವು ದೇಶಗಳೊಂದಿಗೆ, ಭಾರತದ ಮೇಲೂ ಎ-ೆಕ್ಟ್ ಆಗುತ್ತಿದೆ. ಯುದ್ಧದ ಅನಿಶ್ಚಿತತೆ ಮುಂದುವರಿಯುತ್ತಿರುವುದು ಬದುಕಿನ ಮೇಲೆ ಬೀರುವ ಹಲವು ದುಷ್ಪರಿಣಾಮಗಳೆಡೆ ಜನ ಸಾಮಾನ್ಯರ ಆತಂಕ ಹೆಚ್ಚುವಂತೆ ಮಾಡಿದೆ.
ಹೋಟೆಲ್, ಸಾರಿಗೆ, ರ-ÀÅ್ತ ಸಹಿತ ಹತ್ತು ಹಲವು ಕ್ಷೇತ್ರಗಳಲ್ಲಿ ಸಮಸ್ಯೆಗಳು ಬಿಗಡಾಯಿಸುತ್ತಿರುವ ಈ ಹೊತ್ತಿನಲ್ಲಿ ಅತ್ಯಂತ ಆದ್ಯತೆ ಮತ್ತು ಅಗತ್ಯವಾಗಿರುವ ಅಡುಗೆ ಅನಿಲ, ಸಾರಿಗೆ ಇಂಧನದ ಲಭ್ಯತೆ ಕುರಿತಂತೆ ಜನರ ಎದೆ ಬಡಿತ ಏರಿಳಿಯುವಂತೆ ಮಾಡುತ್ತಿದೆ.
ಶುಭ ಸೇರಿದಂತೆ ಹಲವು ಕಾರ್ಯಕ್ರಮಗಳಿಗೆ ಜನರನ್ನು ಆಹ್ವಾನಿಸಲು ಯೋಚಿಸುವಂತಾಗಿದೆ. ಅಡುಗೆಯವರು, ಕ್ಯಾಟರಿಂಗ್‌ ನವರು ಊಟ, ತಿಂಡಿ ಸಿದ್ಧಪಡಿಸುವುದಕ್ಕೆ ಒಪ್ಪಿಗೆ ನೀಡಲು ಹಿಂದೇಟು ಹೊಡೆಯುವಂತಾಗಿದೆ. ಗ್ಯಾಸ್ ಒದಗಿಸುವುದಾದರೆ ಮುಂದಿನ ಮಾತುಕತೆ ಎನ್ನುತ್ತಿದ್ದಾರೆ.
ಇನ್ನು ೩-೪ ತಿಂಗಳು ಮದುವೆ, ಗÊಹ ಪ್ರವೇಶ ಮತ್ತಿತರ ಕಾರ್ಯಗಳಿಗೆ ಗ್ಯಾಸ್ ಹೊಂದಿಸುವುದು ಹೇಗೆಂಬ ಚಿಂತೆ ಒಂದೆಡೆ ಯಾದರೆ, ಆಟೋ ಎಲ್‌ಪಿಜಿ ಪೂರೈಕೆ ಕೊರತೆ ಹಾಗೂ ಏರಿಕೆಯಾಗುತ್ತಿರುವ ದರದಿಂದಾಗಿ ಮುಂದಿನ ಪರಿಸ್ಥಿತಿ ಏನೆಂದು ಆಟೋ ಚಾಲಕರು ಚಿಂತಿಸುವAತಾಗಿದೆ.
ಇAಧನ ಲಭ್ಯತೆ:
ಚಿತ್ರದುರ್ಗ ಜಿಲ್ಲೆಯಲ್ಲಿ ಪೆಟ್ರೋಲ್, ಡೀಸೆಲ್ ಸದ್ಯಕ್ಕೆ ಸಮಸ್ಯೆ ಇಲ್ಲ, ಬೇಡಿಕೆಗೆ ತಕ್ಕಂತೆ ಪೂರೈಕೆಯಾಗುತ್ತಿದೆ. ಪವರ್ ಪೆಟ್ರೋ ಲ್ ಹೊರತುಪಡಿಸಿ ಪೆಟ್ರೋಲ್, ಡೀಸೆಲ್ ದರ ಹೆಚ್ಚಾಗಿಲ್ಲ. ಕೇಂದ್ರದ ಸುಂಕ ಕಡಿತದ ಕ್ರಮವೂ ದರ ಏರಿಕೆ ನಿಯಂತ್ರಿಸಿದೆ. ಆದರೂ ದಾಸ್ತಾನು ಕೆಲ ದಿನಗಳಿಗೆ ಸೀಮಿತವಾಗುತ್ತಿರುವುದು ಹಾಗೂ ಸ್ಟಾಕ್ ಬರುವುದನ್ನು ದಿಗಿಲಿನಿಂದಲೇ ಎದುರು ನೋಡುವಂತಾಗಿದೆ.
ಜಿಲ್ಲೆಯಲ್ಲಿ ೪,೧೪,೫೧೨ ಮನೆ ಅಡುಗೆ ಅನಿಲ ಗ್ರಾಹಕರು ಇದ್ದಾರೆ. ವಿವಿಧ ಕಂಪನಿಗಳು ಪೂರೈಸುತ್ತಿರುವ ಅಡುಗೆ ಅನಿಲ ಬೇಡಿ ಕೆ ಏ. ೪ರಲ್ಲಿದ್ದಂತೆ, ಐಒಸಿಎಲ್ ದಿನವೊಂದಕ್ಕೆ ೩,೦೬೯ ಸಿಲಿಂಡರ್ ಬುಕಿಂಗ್ ಆಗುತ್ತಿದೆ. ಈ ಕಂಪನಿ ಬ-Àರ್ ಸ್ಟಾಕ್ ೨ ದಿನಗಳಿಗಾಗುವಂತೆ ೮,೪೨೪ ಸಿಲಿಂಡರ್‌ಗಳಿವೆ.
ಬಿಪಿಸಿಎಲ್ ದಿನದ ಬೇಡಿಕೆ ೧೫,೬೮೧ ಸಿಲಿಂಡರ್ ಇದ್ದು, ೪,೦೦೯ ಸಿಲಿಂಡರ್ ಅಂದರೆ ೩ ದಿನಗಳಿಗೆ ಸ್ಟಾಕ್ ಇದೆ. ಎಚ್‌ಪಿ ಸಿಎಲ್ ೧,೫೭೧ ಸಿಲಿಂಡರ್ ದಾಸ್ತಾನು ಹಾಗೂ ದಿನಕ್ಕೆ ೮೫೦ ಸಿಲಿಂಡರ್ ಬುಕಿಂಗ್ ಇದ್ದು, ಇನ್ನೂ ಎರಡು ದಿವಸಗಳ ಸ್ಟಾಕ್ ಲಭ್ಯವಿದೆ.
ವಾಣಿಜ್ಯ ಅಡುಗೆ ಅನಿಲ ಸಿಲಿಂಡರ್ ಬೇಡಿಕೆ ಏ. ೪ರಂದು ಇರುವಂತೆ ಐಒಸಿಎಲ್-೩೭೫ ಸಿಲಿಂಡರ್ ಸ್ಟಾಕ್, ದಿನದ ಬೇಡಿಕೆ ೪೪ ಸಿಲಿಂಡರ್ ಇದ್ದು, ೮ ದಿನಗಳಿಗೆ ಆಗುತ್ತದೆ. ಬಿಪಿಸಿಎಲ್ ೩೧೩-೫೦-೬, ಎಚ್‌ಪಿಸಿಎಲ್ ೧೩೪-೯೦ ಹಾಗೂ ಒಂದು ದಿನದ ದಾಸ್ತಾನಿದೆ. ಜಿಲ್ಲೆಗೆ ಅಡುಗೆ ಅನಿಲದ ಪೂರೈಕೆಯಾಗುತ್ತಿದ್ದು, ಗ್ರಾಹಕರು ಆತಂಕ ಪಡುವಂಥ ಸನ್ನಿವೇಶವಿಲ್ಲ. ಧಾವಂತಕ್ಕೆ ಬಿದ್ದು ಅನಗತ್ಯ ಬುಕಿಂಗ್ ಮಾಡುವುದು ಅಥವಾ ಮನೆ ಬಳಕೆ ಅಡುಗೆ ಅನಿಲವನ್ನು ವಾಣಿಜ್ಯ ಉದ್ದೇಶಗಳಿಗೆ ಬಳಸುವುದು ತಪ್ಪಾಗುತ್ತದೆ.
ಸಿಎನ್‌ಜಿ ಪೂರೈಕೆಯಲ್ಲೂ ಕೊರತೆ ಇಲ್ಲ. ಜಿಲ್ಲೆಯಲ್ಲಿ ಸದ್ಯ ೫೯,೦೮೯ ಎಸ್‌ಸಿಎಂ ದಾಸ್ತಾನಿದ್ದು, ದೈನಂದಿನ ಬೇಡಿಕೆ ೫೧,೦೦೦ ಎಸ್‌ಸಿಎಂ ಇದೆ. ಪ್ರಸ್ತುತ ಒಂದು ಎಸ್‌ಸಿಎಂ ಸಿಎನ್‌ಜಿ ದರ ೮೪.೫೦ ರೂ. ಇದೆ. ಮನೆ ಮನೆಗೆ ಪೈಪ್ಡ್ ನ್ಯಾಚುರಲ್ ಗ್ಯಾಸ್ (ಪಿಎನ್‌ಜಿ) ಸಮಸ್ಯೆ ಇಲ್ಲ ಎಂದು ಅಽಕಾರಿಗಳು ತಿಳಿಸಿದ್ದಾರೆ.
ಆಟೋ ಎಲ್‌ಪಿಜಿ ಕೊರತೆ:
ಆಟೋ ಎಲ್‌ಪಿಜಿಗೆ ಕೊರತೆ ಇದೆ. ಚಿತ್ರದುರ್ಗ ನಗರದ ಐದರ ಪೈಕಿ ೪ ಎಲ್‌ಪಿಜಿ ಬಂಕ್, ಹೊಸದುರ್ಗ ಮತ್ತಿತರೆಡೆ ಜಿಲ್ಲೆಯ ಎಲ್‌ಪಿಜಿ ಬಂಕ್‌ಗಳ ಪೈಕಿ ಹಲವು ಮುಚ್ಚಿವೆ. ಏಜಿಸ್ ಆಟೋ ಗ್ಯಾಸ್ ಕಂಪನಿ ಉಳಿದ ಇತರೆ ಕಂಪನಿಗಳ ಬಂಕ್‌ಗಳಿಗೆ ಎಲ್‌ಪಿಜಿ ಪೂರೈಸುತ್ತಿದೆ.
ಆಮದಾಗುವ ಎಲ್‌ಪಿಜಿ ಏಜಿಸ್‌ನಿಂದಲೇ ರಾಜ್ಯದ ಇತರೆಡೆ ಸರಬರಾಜಾಗುತ್ತಿದೆ. ಆದರೆ ಆಟೋಗ್ಯಾಸ್ ಬಂಕ್‌ಗಳಿಗೆ ಎಲ್‌ಪಿಜಿ ಕೊರತೆ ಇರುವುದರಿಂದ ಪೂರೈಕೆ ಸಾಧ್ಯವಾಗದೆ ಇತರೆ ಕಂಪನಿಗಳ ಬಂಕ್‌ಗಳು ಮುಚ್ಚುವಂತಾಗಿವೆ. ೧೨ ಸಾವಿರ ಲೀಟರ್ ಎಲ್‌ಪಿಜಿಯ ಒಂದು ಲೋಡ್, ನಾನಾ ನಗರಗಳ ಏಜಿಸ್ ಬಂಕ್‌ಗಳಿಗೆ ಈಗ ಹಂಚಿಕೆಯಾಗುತ್ತಿದೆ.
ಮೊದಲೆಲ್ಲ ಇಂಡೆAಟ್‌ಗೆ ತಕ್ಕಂತೆ ಪೂರೈಕೆಯಾಗುತ್ತಿತ್ತು, ಈಗ ಸಾಧ್ಯವಾಗುತ್ತಿಲ್ಲ ಹಾಗೂ ಇವತ್ತಿದ್ದ ದರ ನಾಳೆ ಏರಿರುತ್ತದೆ. ಲೀಟರ್‌ಗೆ ೬೯ ರೂ. ಇದ್ದ ದರ, ಪ್ರಸ್ತುತ ೧೦೫ ರೂ.ಗೆ ಏರಿಕೆಯಾಗಿದೆ. ಇನ್ನು ೪೫ ದಿನಗಳಲ್ಲಿ ೧೨೫-೧೩೫ ರೂ.ಗೆ ಏರಲಿದೆ ಎಂದು ಹೇಳಲಾಗುತ್ತಿದೆ.
ಒಂದು ಲೋಡ್‌ಗೆ ಅಽಕ ಹಣ ಪಾವತಿಸಿ ಎಲ್‌ಪಿಜಿಗೆ ನಾವು ಕೂಡ ಕಾಯುವಂತಾಗಿದೆ ಎಂದು ಚಿತ್ರದುರ್ಗ ಏಜಿಸ್ ಬಂಕ್ ಮಾಲೀಕ ಅರುಣï ಕುಮಾರ್ ಹೇಳಿದರೆ, ಸಿಎನ್‌ಜಿ ಪೂರೈಕೆಯಲ್ಲಿ ಸಮಸ್ಯೆ ಇಲ್ಲವೆಂದು ನಗರದ ಸಿಎನ್‌ಜಿ ಬಂಕ್ ಮಾಲೀಕ ಚಿದಾನಂದ ರೆಡ್ಡಿ ತಿಳಿಸಿದ್ದಾರೆ.
----------------
ಕಂಗೆಟ್ಟಿರುವ ಆಟೋ ಚಾಲಕರು:
ಒಂದೆಡೆ ಎಲ್‌ಪಿಜಿ ದೊರೆಯುತ್ತಿಲ್ಲ, ಮತ್ತೊಂದೆಡೆ ದರ ಏರಿಕೆಯಿಂದಾಗಿ ಆಟೋ ಚಾಲಕರು ಕಂಗೆಟ್ಟಿದ್ದಾರೆ. ಸಾಲ ಸೋಲ ಮಾಡಿ ಹಗಲು, ರಾತ್ರಿ ಎನ್ನದೆ ಆಟೋ ಓಡಿಸಿ ಜೀವನ ಸಾಗಿಸುತ್ತಿರುವ ಚಾಲಕರ ಬದುಕು ಬವಣೆಗೆ ಸಿಲುಕುತ್ತಿದೆ.
ಒಂದೆಡೆ ಸಾಲದ ಹೊರೆ, ಮತ್ತೊಂದೆಡೆ ಕುಟುಂಬ ನಿರ್ವಹಣೆ ಹೇಗೆಂದು ಚಾಲಕರು ಪರದಾಡುವಂತಾಗಿದೆ. ಜಿಲ್ಲೆಯಲ್ಲಿ ಪೆಟ್ರೋಲ್, ಡೀಸೆಲ್, ಇವಿ, ಸಿಎನ್‌ಜಿ ಹಾಗೂ ಎಲ್‌ಪಿಜಿ ಸಹಿತ ೧೦,೨೪೩ ಆಟೋಗಳಿವೆ. ಚಿತ್ರದುರ್ಗ ನಗರವೊಂದರಲ್ಲೇ ಏಳು ಸಾವಿರಕ್ಕೂ ಹೆಚ್ಚು ಆಟೋಗಳಿವೆ.
ಎಲ್‌ಪಿಜಿ ಕೊರತೆ ಹಿನ್ನೆಲೆ ಅನೇಕ ಚಾಲಕರು ಸಾಲ ಮಾಡಿ ಸಿಎನ್‌ಜಿ ಟ್ಯಾಂಕ್ ಅಳವಡಿಕೆಗೆ ಮುಂದಾಗಿದ್ದಾರೆ. ಆದರೆ ಹೀಗೆ ಕನ್ವ ರ್ಷನ್ ಸಂದರ್ಭದಲ್ಲಿ, ಸುರಕ್ಷತೆಯ ದÊಷ್ಟಿಯಿಂದ ಅಽಕÊತ ಡೀಲರ್‌ಗಳಿಂದ ಸಿಎನ್‌ಜಿ ಟ್ಯಾಂಕ್ ಖರೀದಿಸಿ, ನಿಯಮಾನುಸಾರ ಅನುಮತಿ ಪಡೆದು ಅಳವಡಿಸಬೇಕೆಂದು ಸಾರಿಗೆ ಇಲಾಖೆ ಹೇಳಿದೆ.
ಎಲ್‌ಪಿಜಿ ವಹಿವಾಟು ಮೇಲೆ ಇಲ್ಲವೆ ಹತೋಟಿ?
ಇಂಧನ, ಅಡುಗೆ ಅನಿಲ ಪರಿಸ್ಥಿತಿ ಕುರಿತಂತೆ ಅಽಕಾರಿಗಳು ಈಗ ನಿತ್ಯ ಎಸ್ಪಿ ಅವರಿಗೆ ಮಾಹಿತಿ ಕೊಡಬೇಕಾಗಿದೆ. ಇತರೆ ಇಂಧನ ಮಾಹಿತಿ ಲಭ್ಯವಾಗುತ್ತಿದ್ದರೂ ಎಲ್‌ಪಿಜಿ ಕುರಿತ ಮಾಹಿತಿ ಸರಿಯಾಗಿ ಸಿಗದೆ ಅಽಕಾರಿಗಳೂ ಪರದಾಡುತ್ತಿದ್ದು, ಎಲ್‌ಪಿಜಿ ವಹಿವಾಟಿನ ಮೇಲೆ ಜಿಲ್ಲಾಡಳಿತಕ್ಕೆ ಹತೋಟಿ ಇಲ್ಲವೇ ಎನ್ನುವ ಪ್ರಶ್ನೆ ಎದುರಾಗಿದೆ.
----
ಜಿಲ್ಲೆಯಲ್ಲಿರುವ ಪೆಟ್ರೋಲ್ ಬಂಕ್‌ಗಳ ವಿವರ
ಜಿಲ್ಲೆಯಲ್ಲಿ ಒಟ್ಟು ೧೬೨ ಪೆಟ್ರೋಲ್ ಬಂಕ್‌ಗಳಿವೆ. ತಾಲೂಕುವಾರು ವಿವರ ಇಲ್ಲಿದೆ:
ಚಳ್ಳಕೆರೆ: ೩೦
ಚಿತ್ರದುರ್ಗ: ೫೨
ಹಿರಿಯೂರು: ೨೬
ಮೊಳಕಾಲ್ಮೂರು: ೧೪
ಹೊಳಲ್ಕೆರೆ: ೨೩
ಹೊಸದುರ್ಗ: ೧೭
ವಿವಿಧ ಕಂಪನಿಗಳ ಮನೆ ಬಳಕೆ ಅಡುಗೆ ಅನಿಲ ಗ್ರಾಹಕರ ಸಂಖ್ಯೆ
ಸಿಲಿAಡರ್ ವಿಧ ಐಒಸಿಎಲ್ ಬಿಪಿಸಿಎಲ್ ಎಚ್‌ಪಿಸಿಎಲ್
ಸಿಂಗಲ್ ಸಿಲಿಂಡರ್ ೪೯,೬೦೭ ೧,೨೯,೩೨೬ ೨೭,೫೦೯
ಡಬಲ್ ಸಿಲಿಂಡರ್ ೫೨,೭೫೧ ೧,೪೦,೪೬೩ ೧೪,೮೫೬
ಜಿಲ್ಲೆಯಲ್ಲಿರುವ ಸಿಎನ್‌ಜಿ ಬಂಕ್‌ಗಳ ಸಂಖ್ಯೆ: ೧೬
ಬಿಪಿಸಿಎಲ್: ೪
ಎಚ್‌ಪಿಸಿಎಲ್: ೮
ಐಒಸಿಎಲ್: ೪
----
"

ಎಲ್‌ಪಿಜಿ ಸಿಗದೆ ಆಟೋ ಓಡಿಸುವುದು ದುಸ್ತರವಾಗುತ್ತಿದೆ. ೮ ವರ್ಷದಿಂದ ಎಲ್‌ಪಿಜಿಯಿಂದ ಆಟೋ ಓಡಿಸುತ್ತಿದ್ದೆ. ಈಗ ಎಲ್ ಪಿಜಿ ಸಿಗದೆ ಮನೆತನ ತೂಗಿಸಲು ಕಷ್ಟವಾಗುತ್ತಿದೆ. ಎಲ್‌ಪಿಜಿ ದರವೂ ದುಬಾರಿ ಆಗುತ್ತಿದೆ. ಆದ್ದರಿಂದ ಆಟೋಕ್ಕೆ ಸಿಎನ್‌ಜಿ ಟ್ಯಾಂಕ್ ಅ ಳವಡಿಸಲು ೫ ರೂ. ಬಡ್ಡಿಯಂತೆ ಫೈನಾನ್ಸ್ನಲ್ಲಿ ಸಾಲ ಮಾಡಿದ್ದೇನೆ.

"

ಸಿಎನ್‌ಜಿ ಕನ್ವರ್ಷನ್‌ಗೆ ನಿಯಮಾನುಸಾರ ಸಾರಿಗೆ ಇಲಾಖೆ ಅನುಮತಿ ಪಡೆಯಬೇಕು. ಸುರಕ್ಷತೆ ಹಿನ್ನೆಲೆಯಲ್ಲಿ ಅಽಕೃತ ಡೀಲರ್ ಗಳಲ್ಲಿ ಟ್ಯಾಂಕ್‌ಗಳ ಖರೀದಿ ಸೂಕ್ತ.

"

ಜಿಲ್ಲೆಯಲ್ಲಿ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ, ಪಿಎನ್‌ಜಿ ಹಾಗೂ ಸಿಎನ್‌ಜಿ ಸಮಸ್ಯೆ ಇಲ್ಲ. ಜನರು ವಿನಾಕಾರಣ ಆತಂಕಕ್ಕೆ ಒಳ ಗಾಗುವುದು ಬೇಡ. ಆಟೋ ಎಲ್‌ಪಿಜಿ ಪೂರೈಕೆಯಲ್ಲಿ ಕೊರತೆ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net