ಚಳ್ಳಕೆರೆ ಹೊರವಲಯದ ನರಹರಿ ನಗರದಲ್ಲಿ ಶ್ರೀ ನರಹರಿ ಸೇವಾ ಪ್ರತಿಷ್ಠಾನ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಡಾ.ವೈ. ರಾಜಾರಾಮ್ ಸ್ವಾಮೀಜಿ, ಬಿ.ಸಿ. ಸಂಜೀವಮೂರ್ತಿ, ದೇವರಾಜ್ ರೆಡ್ಡಿ, ಡಾ. ಮಂಜುನಾಥ್, ಡಾ. ರಾಜೇಶ್ ಇದ್ದರು.
ಚಳ್ಳಕೆರೆ : ವಿದ್ಯಾರ್ಥಿಗಳು ಸಾಧನೆಯೆಡೆಗೆ ಸಂಕಲ್ಪ ಮಾಡಬೇಕು ಎಂದು ಶ್ರೀ ನರಹರಿ ಸದ್ಗುರು ಆಶ್ರಯದ ಪೀಠಾಧ್ಯಕ್ಷ ಡಾ.ವೈ. ರಾಜಾರಾಮ್ ಸ್ವಾಮೀಜಿ ಹೇಳಿದರು.
ಇಲ್ಲಿನ ನರಹರಿ ನಗರದಲ್ಲಿ ಭಾನುವಾರ ಶ್ರೀ ನರಹರಿ ಸೇವಾ ಪ್ರತಿಷ್ಠಾನ ಮತ್ತು ನಾಗ ಸಿಂಹಾದ್ರಿ ಚಾರಿಟಬಲ್ ಟ್ರಸ್ಟ್ ಸಹಯೋಗದಲ್ಲಿ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಮತ್ತು ಉಚಿತ ಆರೋಗ್ಯ ತಪಾಸಣೆ ಶಿಬಿರದಲ್ಲಿ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಮಾತನಾಡಿದರು.
ಪ್ರಸ್ತುತ ತಾಂತ್ರಿಕ ಶಿಕ್ಷಣದ ಕಡೆಗೆ ಒಲವು ಹೆಚ್ಚುತ್ತಿದೆ. ಜತೆಗೆ ಮೌಲ್ಯಾಧಾರಿತ ಶಿಕ್ಷಣವೂ ಬೇಕಿದೆ. ವಿದ್ಯಾರ್ಥಿಗಳು ಸಂಸ್ಕೃತಿ, ಸಂಸ್ಕಾರ ಬೆಳೆಸಿಕೊಳ್ಳಬೇಕು ಎಂದರು.
ಶಿಮುಲ್ ಜಿಲ್ಲಾ ನಿರ್ದೇಶಕ ಬಿ.ಸಿ. ಸಂಜೀವಮೂರ್ತಿ ಮಾತನಾಡಿ, ಒತ್ತಡದ ಬದುಕಿನಲ್ಲಿ ಆರೋಗ್ಯ ಕಡೆಗಣಿಸುತ್ತಿದ್ದೇವೆ. ಸಮಸ್ಯೆ ಸಣ್ಣದಾಗಿರುವಾಗಲೇ ಎಚ್ಚೆತ್ತುಕೊಳ್ಳಬೇಕು. ಉಚಿತ ಆರೋಗ್ಯ ಶಿಬಿರಗಳ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಹೇಳಿದರು.
ಡಾ. ಮಂಜುನಾಥ್, ಡಾ. ಯೋಗೇಂದ್ರ, ಮಾಕಂ ಶ್ರೀನಿವಾಸಲು, ದೇವರಾಜ್ ರೆಡ್ಡಿ, ರಾಮಚಂದ್ರಪ್ಪ, ರಾಜೇಶ್ವರಿ, ಸಿದ್ದಾಪುರ ಯತೀಶ್, ಧನಂಜಯ, ಗೋವಿಂದರಾಜ್, ಗೀತಾ, ವಿಜಯ್, ಸರಸ್ವತಿ ಇದ್ದರು.