ಅಲ್ಲಮಪ್ರಭುಗಳ ಸಾಧನೆ ಅತ್ಯಂತ ಅನನ್ಯ

ಚಿತ್ರದುರ್ಗದಲ್ಲಿ ಗುರುವಾರ ಏರ್ಪಡಿಸಿದ್ದ ಅಲ್ಲಮಪ್ರಭುಗಳ ಜಯಂತಿ ಆಚರಣೆಯಲ್ಲಿ ಡಾ.ಶ್ರೀ ಬಸವಕುಮಾರ ಸ್ವಾಮೀಜಿ,ಶ್ರೀ ಬಸವ ಯಾದವಾನಂದ ಸ್ವಾಮೀಜಿ,ಶ್ರೀ ಮುರುಘೇಂದ್ರ ಸ್ವಾಮೀಜಿ,ಶ್ರೀ ತಿಪ್ಪೇರುದ್ರ ಸ್ವಾಮೀಜಿ,ಶ್ರೀ ಬಸವ ಮ ಹಾಂತ ಸ್ವಾಮೀಜಿ,ಶ್ರೀ ಪೂಣÁðನಂದ ಸ್ವಾಮೀಜಿ ಇತರರು ಇದ್ದರು.
ಚಿತ್ರದುರ್ಗದಲ್ಲಿ ಗುರುವಾರ ಏರ್ಪಡಿಸಿದ್ದ ಅಲ್ಲಮಪ್ರಭುಗಳ ಜಯಂತಿ ಆಚರಣೆಯಲ್ಲಿ ಡಾ.ಶ್ರೀ ಬಸವಕುಮಾರ ಸ್ವಾಮೀಜಿ,ಶ್ರೀ ಬಸವ ಯಾದವಾನಂದ ಸ್ವಾಮೀಜಿ,ಶ್ರೀ ಮುರುಘೇಂದ್ರ ಸ್ವಾಮೀಜಿ,ಶ್ರೀ ತಿಪ್ಪೇರುದ್ರ ಸ್ವಾಮೀಜಿ,ಶ್ರೀ ಬಸವ ಮ ಹಾಂತ ಸ್ವಾಮೀಜಿ,ಶ್ರೀ ಪೂಣÁðನಂದ ಸ್ವಾಮೀಜಿ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಡಾ.ಬಸವಕುಮಾರ ಸ್ವಾಮೀಜಿ ಹೇಳಿಕೆ
  • ಶರಣ ಮಾರ್ಗಕ್ಕೆ ಗುರು
  • ಅನುಭವ ಮಂಟಪ
ಚಿತ್ರದುರ್ಗ: ಕನ್ನಡ ನಾಡಿನ ಸಾಹಿತ್ಯ, ಸಾಂಸ್ಕೃತಿಕÀ, ಧಾರ್ಮಿಕ ಹಾಗೂ ಆಧ್ಯಾತ್ಮಿಕ ಲೋಕದ ದಿಗ್ಗಜ ಅಲ್ಲಮಪ್ರಭುಗಳ ಜೀವ ನ ಮತ್ತು ಸಾಧನೆ ಅತ್ಯ ಂತ ಅನನ್ಯವಾದುದು ಎಂದು ಮುರುಘಾಮಠದ ಆಡಳಿತ ಮಂಡಳಿ ಸದಸ್ಯ ಡಾ.ಬಸವಕುಮಾರ ಸ್ವಾ ಮೀಜಿ ಹೇಳಿದರು.
ಶ್ರೀ ಮಠದಲ್ಲಿ ಗುರುವಾರ ಅನುಭವ ಮಂಟಪದ ಪ್ರಥಮ ಅಧ್ಯಕ್ಷ ಶ್ರೀ ಅಲ್ಲಮಪ್ರಭುಗಳ ಜಯಂತಿಯ ಸಾನ್ನಿಧ್ಯ ವಹಿಸಿ ಮಾತ ನಾಡಿ, ೧೨ನೇ ಶತಮಾನದ ಎಲ್ಲ ಶರಣರು, ಸಾಧಕರು, ಸಿದ್ಧರು, ಸಂತರ ಮೇಲೆ ಅಲ್ಲಮರು ಆಳವಾದ ಪ್ರಭಾವ ಬೀರಿ, ಶರಣ ಮಾರ್ಗಕ್ಕೆ ಗುರುವಾಗಿದ್ದಾರೆ ಎಂದರು.
ಅವರು ಈ ನೆಲದ ಬಹುದೊಡ್ಡ ತತ್ವಜ್ಞಾನಿ. ಜಗತ್ತಿನ ಧರ್ಮಗಳೆಲ್ಲ ಮತಗಳಾಗಿ, ಜಾತಿಗಳಾಗಿ ವಿಜÊಂಭಿಸುತ್ತಿದ್ದ ಕಾಲ ಘಟ್ಟದಲ್ಲಿ ಮತ ವೇ ಬೇರೆ, ಧರ್ಮವೇ ಬೇರೆ ಎಂದು ಸಾಽಸಿ ತೋರಿಸಿದ್ದಾರೆ. ಅವರ ಶೂನ್ಯ ಸಂಪಾದನೆ ಜ್ಞಾನದ ಪ್ರತೀಕ ವಾಗಿದೆ. ಅಲ್ಲಮರ ವಚನಗಳು, ಕನ್ನಡ ಸಾಹಿತ್ಯ, ಸಾಂಸÊ್ಕತಿಕ, ಆಧ್ಯಾತ್ಮಿಕ ಲೋಕಕ್ಕೆ ಸೀಮಿತವಾಗದೆ ಭಾರತೀಯ ಮತ್ತು ಜಾಗತಿಕ ಲೋಕಕ್ಕೆ ಅಸಾಧಾರಣ ಕೊಡುಗೆಯಾಗಿದೆ ಎಂದರು.
ನಿವೃತ್ತ ಪ್ರಾಂಶುಪಾಲ ಕೊಟ್ರೇಶ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಅಲ್ಲಮಪ್ರಭುಗಳು ಹಲವು ಶರಣರನ್ನು ಪ್ರಭಾವಿಸಿ ದ್ದಾರೆ ಎಂದರು. ಶ್ರೀ ಬಸವ ಯಾದವಾನಂದ ಸ್ವಾಮೀಜಿ, ಶ್ರೀ ಮುರುಘೇಂದ್ರ ಸ್ವಾಮೀಜಿ, ಶ್ರೀ ತಿಪ್ಪೇರುದ್ರ ಸ್ವಾಮೀಜಿ, ಶ್ರೀ ಬಸವಮಹಾಂತ ಸ್ವಾಮೀಜಿ, ಶ್ರೀ ಪೂರ್ಣಾನಂದ ಸ್ವಾಮೀಜಿ, ಪೈಲ್ವಾನ್ ತಿಪ್ಪೇಸ್ವಾಮಿ, ನಾಗರಾಜ್ ಸಂಗಮ್, ಆನಂದ್, ಬಸವರಾಜ ಕಟ್ಟಿ, ಬಿ.ಟಿ.ನಂ ದೀಶ್, ಎಂ.ಜಿ.ಲಿAಗರಾಜ್ ಇತರರು ಇದ್ದರು. ಉಮೇಶ್ ಪತ್ತಾರ್ ವಚನ ಪ್ರಾರ್ಥನೆ ನಡೆಸಿದರು. ಬಸವರಾಜ್ ಸ್ವಾಗತಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net