fertilizers ಬೀಜ, ರಸಗೊಬ್ಬರ ಹೆಚ್ಚಿನ ಬೆಲೆಗೆ ಮಾರಿದರೆ ಕ್ರಮ

fertilizersಚಳ್ಳಕೆರೆ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಕೃಷಿ ಇಲಾಖೆ ಹಮ್ಮಿಕೊಂಡಿದ್ದ ರಸಗೊಬ್ಬರ ಮಾರಾಟಗಾರರ ಕಾರ್ಯಾಗಾರದಲ್ಲಿ ವ್ಯಾಪಾರಸ್ಥರು ಭಾಗವಹಿಸಿದ್ದರು.
fertilizersಚಳ್ಳಕೆರೆ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಕೃಷಿ ಇಲಾಖೆ ಹಮ್ಮಿಕೊಂಡಿದ್ದ ರಸಗೊಬ್ಬರ ಮಾರಾಟಗಾರರ ಕಾರ್ಯಾಗಾರದಲ್ಲಿ ವ್ಯಾಪಾರಸ್ಥರು ಭಾಗವಹಿಸಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕೃಷಿ ಇಲಾಖೆ ಉಪ ನಿರ್ದೇಶಕ ಡಾ. ಡಿ. ಉಮೇಶ್ ಎಚ್ಚರಿಕೆ
  • ಚಳ್ಳಕೆರೆಯಲ್ಲಿ ರಸಗೊಬ್ಬರ ಮಾರಾಟಗಾರರ ಸಭೆ ಮತ್ತು ತರಬೇತಿ ಕಾರ್ಯಾಗಾರ
  • ರೈತರಿಂದ ಅಗತ್ಯ ದಾಖಲಾತಿಗಳನ್ನು ಪಡೆದುಕೊಳ್ಳಬೇಕು

ಚಳ್ಳಕೆರೆ: fertilizers"ನೋಂದಾಯಿತ ಗೊಬ್ಬರ ಮಾರಾಟಗಾರರು ಬೀಜ ಕಾಯ್ದೆ ಮತ್ತು ಸಂಬಂಧಿತ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು," ಎಂದು ಕೃಷಿ ಇಲಾಖೆ ಉಪ ನಿರ್ದೇಶಕ ಡಾ. ಡಿ. ಉಮೇಶ್ ಹೇಳಿದರು.

ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಕೃಷಿ ಇಲಾಖೆ ವತಿಯಿಂದ ಆಯೋಜಿಸಿದ್ದ ಕೃಷಿ ಪರಿಕರಗಳ ಮಾರಾಟಗಾರರ ಸಭೆ ಮತ್ತು ಸುರಕ್ಷಿತ ಕೀಟನಾಶಕ ಬಳಕೆ ಕುರಿತ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಕಾನೂನು ಕ್ರಮದ ಎಚ್ಚರಿಕೆ

"ಬಯಲುಸೀಮೆಯಲ್ಲಿ ಕೃಷಿಕ ವರ್ಗವನ್ನು ಪ್ರೋತ್ಸಾಹಿಸುವ ಕೆಲಸ ಮಾಡಬೇಕು. ಇದಕ್ಕೆ ಕೃಷಿ ಇಲಾಖೆ ಮತ್ತು ಪೂರಕ ಪರಿಕರಗಳ ಮಾರಾಟಗಾರರ ಸ್ಪಂದನೆ ಇರಬೇಕು. ಕೀಟನಾಶಕ, ಬೀಜ ಮತ್ತು ರಸಗೊಬ್ಬರ ಹೆಚ್ಚಿನ ಬೆಲೆಗೆ ಮಾರಾಟ ಮಾಡುವುದು ಕಂಡುಬಂದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು," ಎಂದು ಎಚ್ಚರಿಸಿದರು.

ದಾಸ್ತಾನು ಮತ್ತು ದರಪಟ್ಟಿ ಕಡ್ಡಾಯ

"ಬೀಜ ಮತ್ತು ರಸಗೊಬ್ಬರವನ್ನು ರೈತರಿಗೆ ಅನುಕೂಲ ಆಗುವ ರೀತಿಯಲ್ಲಿ ಮಾರಾಟ ಮಾಡಬೇಕು. ಅಂಗಡಿಯಲ್ಲಿನ ರಸಗೊಬ್ಬರ ಮತ್ತು ಕೀಟನಾಶಕ ದಾಸ್ತಾನು ಹಾಗೂ ದರಪಟ್ಟಿ ಕಡ್ಡಾಯವಾಗಿ ಬಹಿರಂಗ ಪ್ರಕಟಣೆ ಮಾಡಬೇಕು. ಪ್ರತಿದಿನ ಮಾರಾಟ ಆಗುವ ದಾಸ್ತಾನು ಸರಿಯಾಗಿ ದಾಖಲೆ ಮಾಡಿಕೊಳ್ಳಬೇಕು. ಭೌತಿಕ ದಾಸ್ತಾನಿಗೂ ದಾಖಲೆಯಲ್ಲಿರುವ ಅಂಕಿ-ಅಂಶ ಸರಿಯಾಗಿ ತಾಳೆ ಇರಬೇಕು. ರೈತರ ಆಧಾರ್ ಪರಿಶೀಲಿಸಿ ರೈತರಿಂದ ಒಪ್ಪಿಗೆ ಸಹಿ ಪಡೆದು ರಸೀದಿ ನೀಡಬೇಕು," ಎಂದರು.

ಹವಾಮಾನಕ್ಕೆ ತಕ್ಕಂತೆ ಗೊಬ್ಬರ ವಿತರಣೆ

ಜಾಗೃತಿ ದಳ ಕೃಷಿ ಸಹಾಯಕ ನಿರ್ದೇಶಕ ಮಲ್ಲನಗೌಡ ಮಾತನಾಡಿ, "ರೈತರ ಜಮೀನಿನ ಬೆಳೆ ಮತ್ತು ಹವಾಗುಣಕ್ಕೆ ತಕ್ಕ ರೀತಿಯಲ್ಲಿ ಯೂರಿಯಾ ಮತ್ತು ರಸಗೊಬ್ಬರವನ್ನು ವಿತರಣೆ ಮಾಡಬೇಕು. ರೈತರಿಗೆ ವಿತರಿಸಿದ ರಸಗೊಬ್ಬರ ಬಗ್ಗೆ ಸರಿಯಾಗಿ ದಾಖಲೆ ಮಾಡಿಕೊಳ್ಳಬೇಕು. ರೈತರಿಂದ ಅಗತ್ಯ ದಾಖಲಾತಿಗಳನ್ನು ಪಡೆದುಕೊಳ್ಳಬೇಕು," ಎಂದು ತಿಳಿಸಿದರು.

ಕಾರ್ಯಾಗಾರದಲ್ಲಿ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಡಾ. ಎಸ್.ಟಿ. ರಮೇಶ್, ತೋಟಗಾರಿಕೆ ಇಲಾಖೆ ಮಧು, ಆರ್. ಜೀವನ್, ಎಚ್.ಪಿ. ಮಂಜುನಾಥ್, ಪರಿಕರಗಳ ಮಾರಾಟಗಾರರ ಸಂಘದ ಅಧ್ಯಕ್ಷ ಜಗದೀಶ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net