

ಪ್ರಮುಖ ಮುಖ್ಯಾಂಶಗಳು
ಪ್ರಸಕ್ತ ಸಾಲಿನ ೧೫೧೬.೯೬ ಕೋಟಿ ರೂ.ಅನುದಾನ ಹಂಚಿಕೆಯಲ್ಲಿ ಈವರೆಗೆ ೭೦೩ ಕೋಟಿ ರೂ.ವೆಚ್ಚವಾಗಿದೆ. ೨೦೨೬ ರ ಮಾರ್ಚ್ ಅಂತ್ಯಕ್ಕೆ ಅನುದಾನ ಸಂಪೂರ್ಣ ಖರ್ಚಾಗುವ ನಿರೀಕ್ಷೆ ಇದೆ. ಹೊಸ ಹಣಕಾಸು ಸಾಲಿನಲ್ಲಿ ಪ್ರಮುಖವಾಗಿ ಶಿಕ್ಷಣಕ್ಕೆ ೧೦೬೬.೬೦ ಕೋಟಿ ರೂ.,ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ೧೭೬.೭೮ ಕೋಟಿ ರೂ., ಆರೋಗ್ಯಕ್ಕೆ ೧೧೫.೨೯ ಕೋಟಿ ರೂ.ಅನುದಾನ ಕೋರಿ ಪ್ರಸ್ತಾವನೆ ಸಿದ್ಧಪಡಿಸಲಾಗಿದೆ ಎಂದರು.