ಅಡಿಕೆ ಸಂವರ್ಧನೆಗೆ ಕ್ರಿಯಾಯೋಜನೆ Crop

ಹೊಸದುರ್ಗದಲ್ಲಿ ಆಯೋಜಿಸಿದ್ದ ತೆಂಗು ಮತ್ತು ಅಡಿಕೆ ಬೆಳೆಗಳ ವಿಚಾರ ಸಂಕಿರಣವನ್ನು ನಿವೃತ್ತ ಪೋಲಿಸ್ ಮಹಾ ನಿರ್ದೇಶಕ ಎಸ್.ಎನ್. ಸಿದ್ದರಾಮಪ್ಪ ಉದ್ಘಾಟಿಸಿದರು. ಡಾ. ಎಂ.ವಿ. ಧನಂಜಯ, ಮರಿದಿಮ್ಮಪ್ಪ, ಬಸವರಾಜನಾಯ್ಕ, ಪರಶುರಾಮ್ ಚಂದ್ರವಂಶಿ, ನಾರಾಯಣ ಸ್ವಾಮಿ ಇತರರಿದ್ದರು. Crop
ಹೊಸದುರ್ಗದಲ್ಲಿ ಆಯೋಜಿಸಿದ್ದ ತೆಂಗು ಮತ್ತು ಅಡಿಕೆ ಬೆಳೆಗಳ ವಿಚಾರ ಸಂಕಿರಣವನ್ನು ನಿವೃತ್ತ ಪೋಲಿಸ್ ಮಹಾ ನಿರ್ದೇಶಕ ಎಸ್.ಎನ್. ಸಿದ್ದರಾಮಪ್ಪ ಉದ್ಘಾಟಿಸಿದರು. ಡಾ. ಎಂ.ವಿ. ಧನಂಜಯ, ಮರಿದಿಮ್ಮಪ್ಪ, ಬಸವರಾಜನಾಯ್ಕ, ಪರಶುರಾಮ್ ಚಂದ್ರವಂಶಿ, ನಾರಾಯಣ ಸ್ವಾಮಿ ಇತರರಿದ್ದರು. Crop
Published on

ಪ್ರಮುಖ ಮುಖ್ಯಾಂಶಗಳು

  • ವಿಚಾರ ಸಂಕಿರಣದಲ್ಲಿ ಕುಲಪತಿ ಡಾ.ಎಂ.ವಿ. ಧನಂಜಯ ಹೇಳಿಕೆ

ಹೊಸದುರ್ಗ: ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ ವ್ಯಾಪ್ತಿಯ ಆರು ಜಿಲ್ಲೆಗಳಲ್ಲಿ ತೆಂಗು ಮತ್ತು ಅಡಿಕೆ ಬೆಳೆ ಸಂವರ್ಧನೆಗೆ ಕ್ರಿಯಾಯೋಜನೆ ರೂಪಿಸಲಾಗಿದೆ ಎಂದು ವಿಶ್ವವಿದ್ಯಾಲಯದ ಕುಲಪತಿ ಡಾ.ಎಂ.ವಿ. ಧನಂಜಯ ತಿಳಿಸಿದರು.

Crop

ಪಟ್ಟಣದ ಸಿದ್ಧರಾಮೇಶ್ವರ ಸಮುದಾಯ ಭವನದಲ್ಲಿ ಭಾನುವಾರ ಸಿದ್ಧರಾಮೇಶ್ವರ ವಿದ್ಯಾಸಂಸ್ಥೆ ಆಯೋಜಿಸಿದ್ದ ಅಡಿಕೆ ಮತ್ತು ತೆಂಗು ಬೆಳೆ ವಿಚಾರ ಸಂಕಿರಣದಲ್ಲಿ ಮಾತನಾಡಿದರು.
ವಿವಿ ವ್ಯಾಪ್ತಿಯಲ್ಲಿರುವ ನಾಲ್ಕು ಅಡಿಕೆ ಸಂಶೋಧನಾ ಕೇಂದ್ರಗಳನ್ನು ಒಂದುಗೂಡಿಸಿ ಸಂಶೋಧನೆ ಕಾರ್ಯಕ್ಕೆ ವೇಗ ನೀಡಲಾಗುವುದು. ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ ಅಡಿಯಲ್ಲಿ 2 ಎಕರೆ ವಿಸ್ತೀರ್ಣದ 50 ಕೃಷಿ ಸಂಶೋಧನಾ ತಾಕುಗಳನ್ನು ನಿರ್ಮಿಸಲಾಗುವುದು. ಬಿತ್ತನೆ ಬೀಜ ಸೇರಿ ಕೃಷಿ ಪರಿಕರಗಳನ್ನು ರೈತರಿಗೆ ಒದಗಿಸಲು ಹೋಬಳಿ ಕೇಂದ್ರಗಳಲ್ಲಿ ಸಹ್ಯಾದ್ರಿ ಕೃಷಿ ಕೇಂದ್ರಗಳನ್ನು ಆರಂಭಿಸಲು ಚಿಂತಿಸಲಾಗಿದೆ. ವಿಶ್ವವಿದ್ಯಾಲಯದ ಎಲ್ಲ ವಿಜ್ಞಾನಿಗಳಿಗೂ ರೈತರೊಂದಿಗೆ ನೇರ ಸಂಪರ್ಕ ಸಾಧಿಸಲು ಸೂಚನೆ ನೀಡಲಾಗಿದೆ. ಸಾಮಾಜಿಕ ಜಾಲತಾಣಗಳ ಮೂಲಕ ರೈತರಿಗೆ ಅಗತ್ಯ ಕೃಷಿ ಮಾಹಿತಿ ನೀಡಲಾಗುವುದು ಎಂದು ತಿಳಿಸಿದರು.
ಅಡಿಕೆ ಮತ್ತು ತೆಂಗು ಬೆಳೆಗಳ ಸಮಗ್ರ ಪೋಷಕಾಂಶ ನಿರ್ವಹಣೆ ಕುರಿತು ಬಬ್ಬೂರು ಕೃಷಿ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ. ಪರಶುರಾಮ ಚಂದ್ರವಂಶಿ ಮಾತನಾಡಿ, ಮಣ್ಣಿನ ಗುಣಲಕ್ಷಣಕ್ಕೆ ಅಗತ್ಯ ಗೊಬ್ಬರವನ್ನು ಸರಿಯಾದ ಸಮಯ, ಪ್ರಮಾಣ ಹಾಗೂ ವಿಧಾನದಲ್ಲಿ ನೀಡಿದರೆ ಮಣ್ಣಿನ ಆರೋಗ್ಯ ಸಂರಕ್ಷಿಸಬಹುದು. ಮಣ್ಣಿಗೆ ಗೊಬ್ಬರ ಸೇರಿಸುವ ಮೊದಲು ಮಣ್ಣು ಪರೀಕ್ಷೆ ಮಾಡಿಸುವ ಅಗತ್ಯವಿದೆ. ಕೊರತೆ ಇರುವ ಪೋಷಕಾಂಶಗಳನ್ನು ಸೇರಿಸಬೇಕಾಗಿದೆ. ಎಲ್ಲ ರೀತಿಯ ಬೆಳೆಗಳಿಗೂ ರಂಜಕ, ಕ್ಯಾಲ್ಸಿಯಂ, ಗಂಧಕ, ಸತು ಸೇರಿ 16 ವಿಧದ ಪೋಷಕಾಂಶಗಳನ್ನು ಭೂಮಿಗೆ ನೀಡುವ ಅಗತ್ಯವಿದೆ ಎಂದರು. ಕೀಟ ತಜ್ಞ ಡಾ. ಓಂಕಾರಪ್ಪ ಮಾತನಾಡಿ, ಅತಿಯಾದ ಕೀಟ, ಕಳೆ ನಾಶಕಗಳ ಬಳಕೆಯಿಂದ ಬೆಳೆಗಳಿಗೆ ಪೂರಕವಾದ ಸೂಕ್ಷ್ಮಾಣು ಜೀವಿಗಳು ನಾಶವಾಗಿ ಭೂಮಿಯ ಸತ್ವ ಹಾಳಾಗುತ್ತದೆ. ಕೀಟನಾಶಕಗಳನ್ನು ಮತ್ತೆ ಮತ್ತೆ ಸಿಂಪಡಿಸುವುದರಿಂದ ಕೀಟಗಳು ಅವುಗಳನ್ನು ಜೀರ್ಣಿಸಿಕೊಳ್ಳುವ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುತ್ತವೆ. ಹೀಗಾಗಿ ಕೀಟನಾಶಕ ಗಳು ಅವುಗಳ ಮೇಲೆ ಪ್ರಭಾವ ಬೀರುವುದಿಲ್ಲ. ಕಳೆನಾಶಕಗಳನ್ನು ಹೆಚ್ಚಾಗಿ ಬಳಸುವುದರಿಂದ ಭೂಮಿಯ ಪುನರ‌್ರಚನೆ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಸೂಕ್ಷ್ಮಾಣು ಜೀವಿಗಳು ನಾಶವಾಗಿ ಮಣ್ಣು ಹಾಳಾಗುತ್ತದೆ. ಇಂತಹ ಭೂಮಿಯಲ್ಲಿ ಬೆಳೆ ಬೆಳೆಯಲು ಸಾಧ್ಯವಾಗುವುದಿಲ್ಲ. ಸಾಂಪ್ರದಾಯಕ ಪದ್ಧತಿಯಲ್ಲಿ ಕಳೆ ನಿವಾರಣೆ, ಮಲ್ಚಿಂಗ್ ವಿಧಾನ ಅನುಸರಿಸುವುದು ಉತ್ತಮ ಎಂದರು.
ಕೃಷಿ ವಿಜ್ಞಾನಿ ಡಾ.ಎಚ್. ನಾರಾಯಣಸ್ವಾಮಿ ಮಾತನಾಡಿ, ತೆಂಗು ಮತ್ತು ಅಡಿಕೆ ಬೆಳೆಗಳಿಗೆ ನೀರು ಸರಿಯಾದ ಪ್ರಮಾಣದಲ್ಲಿ ನಿರ್ವಹಣೆ ಮಾಡ ಬೇಕು. ನೀರು ಪೂರೈಕೆ ಪ್ರಮಾಣ ಹೆಚ್ಚಾದರೂ ರೋಗಗಳಿಗೆ ಕಾರಣವಾಗುತ್ತದೆ ಎಂದರು.
ಭೂ ಸಂರಕ್ಷಣೆಗೆ ಒತ್ತುಕೊಡಿ: ತಾಲೂಕಿನಲ್ಲಿ ತೆಂಗು, ಅಡಿಕೆ ಪ್ರಮುಖ ವಾಣಿಜ್ಯ ಬೆಳೆಗಳಾಗಿರುವುದರಿಂದ ಕೃಷಿಕರಿಗೆ ಅಗತ್ಯ ಬೆಳೆ ಮಾಹಿತಿ ಒದಗಿಸಲು ಕೃಷಿ ವಿಜ್ಞಾನಿಗಳನ್ನು ಕರೆತಂದು ವಿಚಾರ ಸಂಕಿರಣ ಆಯೋಜಿಸಲಾಗಿದೆ. ಜಿಲ್ಲೆಯಲ್ಲಿ 45 ಸಾವಿರ ಹೆಕ್ಡೇರ್ ಪ್ರದೇಶದಲ್ಲಿ ತೆಂಗು ಮತ್ತು ಅಡಿಕೆ ಬೆಳೆ ಇದೆ. ಭದ್ರಾ ಮೇಲ್ದಂಡೆ ಯೋಜನೆ ನೀರು ತಾಲೂಕಿಗೆ ಬರಲಿದೆ. ರೈತರು ಭೂ ಸಂರಕ್ಷಣೆಗೆ ಒತ್ತು ಕೊಡಬೇಕು ಎಂದು ಕೃಷಿ ವಿಚಾರ ಸಂಕಿರಣ ಉದ್ಘಾಟಿಸಿ ನಿವೃತ್ತ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಎಸ್.ಎನ್. ಸಿದ್ದರಾಮಪ್ಪ ಹೇಳಿದರು.
ಸಿದ್ದರಾಮೇಶ್ವರ ವಿದ್ಯಾಸಂಸ್ಥೆ ಅಧ್ಯಕ್ಷ ಮರಿದಿಮ್ಮಪ್ಪ, ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಸದಸ್ಯರಾದ ಟಿ. ಬಸವರಾಜ ನಾಯ್ಕ, ಎಚ್. ಆರ್. ಯೋಗೀಶ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net