ಸ್ಥಳೀಯ ಪ್ರದೇಶಾಭಿದ್ಧಿ ಯೋಜನೆ ಕಾಮಗಾರಿ ತ್ವರಿತಗೊಳಿಸಿ

ವಿಳಂಬಕ್ಕೆ ಕಾರಣರಾದವರ ವಿರುದ್ಧ ಕ್ರಮ
ಸ್ಥಳೀಯ ಪ್ರದೇಶಾಭಿವÊದ್ಧಿ ಯೋಜನೆ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಎಡಿಸಿ ಬಿ.ಟಿ. ಕುಮಾರಸ್ವಾಮಿ, ಅಮರ್‌ನಾಥ್‌ಜೈನ್, ಹರೀಶ್, ಸಚಿನ್, ವಿನಯ್, ರಫೀಕ್ ಮತ್ತಿತರರು ಇದ್ದರು.
ಸ್ಥಳೀಯ ಪ್ರದೇಶಾಭಿವÊದ್ಧಿ ಯೋಜನೆ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಎಡಿಸಿ ಬಿ.ಟಿ. ಕುಮಾರಸ್ವಾಮಿ, ಅಮರ್‌ನಾಥ್‌ಜೈನ್, ಹರೀಶ್, ಸಚಿನ್, ವಿನಯ್, ರಫೀಕ್ ಮತ್ತಿತರರು ಇದ್ದರು.
Published on: 

ಚಿತ್ರದುರ್ಗ: ಸಂಸದರ ಹಾಗೂ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಕೈಗೊಂಡಿರುವ ಬಾಕಿ ಉಳಿದಿರುವ ಎಲ್ಲ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದು ಎಡಿಸಿ ಬಿ.ಟಿ. ಕುಮಾರಸ್ವಾಮಿ ಅಽಕಾರಿಗಳಿಗೆ ತಾಕೀತು ಮಾಡಿದರು.

ಡಿಸಿ ಕಚೇರಿಯಲ್ಲಿ ಬುಧವಾರ ಈ ಯೋಜನೆ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಕಾಮಗಾರಿಗಳ ಮಂದಗತಿ ಹಾಗೂ ವಿಳಂಬ ಧೋರಣೆ ವಿರುದ್ಧ ಅಽಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಅವರು, ನೀವೇ ಸ್ಥಳ ವೀಕ್ಷಿಸಿ, ಶಿ-Áರಸು ಮಾಡಿ ಕಾಮಗಾರಿಗಳಿಗೆ ಅನುಮೋದನೆ ಪಡೆದಿದ್ದರೂ ಜಾಗದ ಸಮಸ್ಯೆ ಅಥವಾ ಇತರೆ ತಾಂತ್ರಿಕ ಕಾರಣಗಳಿಂದ ವಿಳಂಬವಾಗುತ್ತಿರುವುದನ್ನು ಸಹಿಸಲು ಸಾಧ್ಯವಿಲ್ಲ. ಕಾಮಗಾರಿಗಳು ನಿಗದಿತ ಅವಽಯಲ್ಲಿ ಪೂರ್ಣಗೊಳ್ಳಬೇಕೆಂದು ಎಚ್ಚರಿಕೆ ನೀಡಿದರು.

ಯಾವುದೇ ಕಾಮಗಾರಿ ಕೈಗೊಳ್ಳುವ ಮುನ್ನ ಸೂಕ್ತ ಸ್ಥಳಾವಕಾಶವಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ತದನಂತರವೇ ಇಂಜಿನಿಯರ್‌ಗಳು ಜಾಗ ಪರಿಶೀಲಿಸಿ ವರದಿ ನೀಡಬೇಕು. ಕಾಮಗಾರಿಗಳ ಬಿಲ್ ಪಾವತಿ ಹಾಗೂ ಪ್ರಸ್ತಾವನೆಗಳನ್ನು ಇ-ಸಾಕ್ಷಿ ತಂತ್ರಾAಶದ ಮೂಲಕವೇ ಕಡ್ಡಾಯವಾಗಿ ಅನುಮೋದನೆಗೊಳಿಸಬೇಕು. ವಿಳಂಬಕ್ಕೆ ಕಾರಣರಾದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ವಿವಿಧ ಕ್ಷೇತ್ರಗಳಲ್ಲಿ ಸಮುದಾಯ ಭವನ , ಶೌಚಗೃಹ, ಶಾಲಾ ಕೊಠಡಿ, ಶುದ್ಧ ಕುಡಿವ ನೀರಿನ ಘಟಕ ನಿರ್ಮಾಣ, ರಸ್ತೆ ಅಭಿವೃದ್ಧಿ ಹಾಗೂ ಇತರೆ ಮೂಲ ಸೌಕರ್ಯಗಳ ಕಾಮಗಾರಿಗಳು ವಿವಿಧ ಹಂತಗಳಲ್ಲಿವೆ. ಕೆಲವೆಡೆ ಕೇವಲ ಪಾಯದ ಹಂತದಲ್ಲೇ ಕಾಮಗಾರಿ ನಿಂತಿವೆ. ಇದಕ್ಕೆ ಸಂಬAಧಪಟ್ಟ ಅಽಕಾರಿಗಳು ಆಸಕ್ತಿ ವಹಿಸಿ ಕಾಮಗಾರಿ ತ್ವರಿತಗತಿಯಲ್ಲಿ ಪೂರ್ಣಗೊಳಿಸಿ ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸಬೇಕು ಎಂದು ಹೇಳಿದರು.

--ಬಾಕ್ಸ್--

ನಿಗದಿತ ಮಾನದಂಡ

ಅAಗನವಾಡಿ, ಶಾಲಾ ಕಟ್ಟಡ ನಿರ್ಮಾಣ ಕಾಮಗಾರಿಗಳು ಇಲಾಖಾ ವಿನ್ಯಾಸದ ಹಾಗೂ ನಿಗದಿತ ಮಾನದಂಡಗಳ ಅನ್ವಯವೇ ಚಾಲನೆಗೆ ತೆಗೆದುಕೊಳ್ಳಬೇಕು ಎಂದು ಎಡಿಸಿ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಯಾವುದೇ ಆಸ್ತಿ, ಕಟ್ಟಡ ನಿರ್ಮಾಣ ಕಾಮಗಾರಿ ಕೈಗೊಳ್ಳುವ ಮುನ್ನ ಆಸ್ತಿ ಮಾಲೀಕರ ಎನ್‌ಒಸಿ ಪಡೆಯುವುದು ಕಡ್ಡಾಯ. ಇದು ಟ್ರಸ್ಟ್ ಅಥವಾ ಯಾವುದೇ ಸರ್ಕಾರದ ಅಽÃನಕ್ಕೆ ಒಳಪಟ್ಟಿರಬಹುದು. ಗ್ರಾಮೀಣ ಪ್ರದೇಶಗಳಲ್ಲಿ ಪಿಡಿಒ ಹಾಗೂ ಕಂದಾಯ ಇಲಾಖೆಯಡಿ ಸರ್ಕಾರದ ಗೋಮಾಳ ಅಥವಾ ಇತರೆ ಜಮೀನುಗಳಿದ್ದಲ್ಲಿ ತಹಸೀಲ್ದಾರ್ ಕಸ್ಟೋಡಿಯನ್ ಆಗಿರುತ್ತಾರೆ. ಎಲ್ಲರ ಅನುಮತಿ ಹಾಗೂ ಎನ್‌ಒಸಿ ಪಡೆದ ನಂತರವೇ ಕಾಮಗಾರಿಗಳನ್ನು ಸಂಬAಧಪಟ್ಟವರಿಗೆ ಹಸ್ತಾಂತರಿಸಬೇಕು. ಟ್ರಸ್ಟ್ ಅಥವಾ ಇತರ ಸಂಸ್ಥೆಗಳ ಅಽÃನದಲ್ಲಿರುವ ಆಸ್ತಿಗಳಿಗೂ ಸಹ ಕಡ್ಡಾಯವಾಗಿ ಅನುಮತಿ ಪಡೆಯಬೇಕು. ನವೆಂಬರ್ ೧೩ರೊಳಗೆ ಮತ್ತೊಂದು ಸಭೆ ಕರೆಯಲಾಗುವುದು. ಅಷ್ಟರೊಳಗೆ ಬಾಕಿ ಉಳಿದ ಎಲ್ಲ ಹಳೆಯ ಕಾಮಗಾರಿಗಳನ್ನು ವಿಲೇ ಮಾಡಿ, ಪ್ರಗತಿ ಸಾಽಸುವಂತೆ ಅಽಕಾರಿಗಳಿಗೆ ಸೂಚನೆ ನೀಡಿದರು.

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಇಇ ಅಮರನಾಥ್ ಜೈನ್, ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಹರೀಶ್, ಕೆಆರ್‌ಐಡಿಎಲ್ ಚಳ್ಳಕೆರೆ ಇಇ ಸಚಿನ್, ಚಿತ್ರದುರ್ಗ ಇಇ ವಿನಯ್, ಪಿಆರ್‌ಇಡಿ ಇಂಜಿನಿಯರ್ ರಫೀಕ್, ವಿಷಯ ನಿರ್ವಾಹಕಿ ಇಮ್ನಾಜ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net