ಸರಳ ಬದುಕು, ಸಹಜ ಜೀವನ ಬಸವತತ್ವದ ಆಶಯ

 ಚಿತ್ರದುರ್ಗದಲ್ಲಿ ಸೋಮವಾರ ಆಯೋಜಿಸಿದ್ದ ಸಾಮೂಹಿಕ ಕಲ್ಯಾಣ ಮಹೋತ್ಸವದಲ್ಲಿ ಡಾ. ಶ್ರೀ ಬಸವಕುಮಾರ ಸ್ವಾಮೀಜಿ, ಡಾ. ಶ್ರೀ ಬಸವಪ್ರಭು ಸ್ವಾಮೀಜಿ, ಶ್ರೀ ಬಸವ ಮುರುಘೇಂದ್ರ ಸ್ವಾಮೀಜಿ, ಡಾ. ಮಹಮ್ಮದ್ ಖಾಸಿಂ ಇತರರು ಇದ್ದರು.
ಚಿತ್ರದುರ್ಗದಲ್ಲಿ ಸೋಮವಾರ ಆಯೋಜಿಸಿದ್ದ ಸಾಮೂಹಿಕ ಕಲ್ಯಾಣ ಮಹೋತ್ಸವದಲ್ಲಿ ಡಾ. ಶ್ರೀ ಬಸವಕುಮಾರ ಸ್ವಾಮೀಜಿ, ಡಾ. ಶ್ರೀ ಬಸವಪ್ರಭು ಸ್ವಾಮೀಜಿ, ಶ್ರೀ ಬಸವ ಮುರುಘೇಂದ್ರ ಸ್ವಾಮೀಜಿ, ಡಾ. ಮಹಮ್ಮದ್ ಖಾಸಿಂ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಡಾ.ಬಸವಕುಮಾರ ಸ್ವಾಮೀಜಿ ಅನಿಸಿಕೆ
  • ೩೬ನೇ ವರ್ಷದ ಮೊದಲ ಕಲ್ಯಾಣ ಮಹೋತ್ಸವ
  • ಅಂತರ್ಜಾತಿ ವಿವಾಹ
ಚಿತ್ರದುರ್ಗ:ನಾವಿಂದು ಅದ್ದೂರಿತನಕ್ಕೆ ಹಾತೊರೆಯುತ್ತ ಸರಳತೆಯಿಂದ ವಿಮುಖರಾಗುತ್ತಿದ್ದೇವೆ ಎಂದು ಮುರುಘಾ ಮಠದ ಆಡಳಿತ ಮಂಡಳಿ ಸದಸ್ಯ ಡಾ. ಬಸವಕುಮಾರ ಸ್ವಾಮೀಜಿ ಕಳವಳ ವ್ಯಕ್ತಪಡಿಸಿದರು.
ಶ್ರೀ ಮಠದಲ್ಲಿ ಸೋಮವಾರ ಆಯೋಜಿಸಿದ್ದ ೩೬ನೇ ವರ್ಷದ ಮೊದಲ ತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸವದಲ್ಲಿ ಆರ್ಶೀವಚನ ನೀಡಿದರು.
ಇವತ್ತಿನ ವ್ಯವಸ್ಥೆಯಲ್ಲಿ ಯಾವುದಕ್ಕೆ ಹೆಚ್ಚು ಪ್ರಚಾರ ಸಿಗುತ್ತದೆಯೋ ಅದರ ಹಿಂದೆ ಜನರು ಹೋಗುತ್ತಿದ್ದಾರೆ. ಅದ್ದೂರಿಗೆ ಮಾರು ಹೋಗಿ ದೇಶ ಕಟ್ಟುವಲ್ಲಿ ಬಹು ಮುಖ್ಯಪಾತ್ರ ವಹಿಸುವ ಸರಳತೆಯನ್ನು ಮರೆಯುತ್ತಿದ್ದೇವೆ. ಜಗತ್ತಿನ ಪ್ರತಿ ವಿದ್ಯಮಾನವನ್ನು ಕೆಲವೇ ಕ್ಷ ಣಗಳಲ್ಲಿ ತಿಳಿದುಕೊಳ್ಳುವುದು ನಮಗಿಂದು ಸುಲಭವಾಗಿದೆ. ಆದರೆ, ನಮ್ಮೊಳಗಿನ ವಿಚಾರಗಳನ್ನು ತಿಳಿದುಕೊಳ್ಳುವಲ್ಲಿ ನಾವುಗಳಿಂದು ಸೋ ಲುತ್ತಿದ್ದೇವೆ ಎಂದರು.
ದಾAಪತ್ಯ ಜೀವನ ಒಂದು ಆದರ್ಶ. ಶ್ರೀಮಠ ಬಡವರ, ದೀನರ ಮಠವಾಗಿದೆ. ಸರಳ ಬದುಕು, ಸಹಜತೆಯ ಜೀವನ ಬಸವ ತತ್ವದ ಮೂಲ ಆಶಯವಾಗಿದೆ. ೧೨ನೇ ಶತಮಾನ ಜಾತಿ ಗೋಡೆಗಳನ್ನು ಒಡೆಯುವಂಥ ಪ್ರಯತ್ನದಲ್ಲಿ ಅಂತರ್ಜಾತಿ ವಿವಾಹ ಗಳಿಗೆ ನಾಂದಿ ಆಗಿದೆ. ಮಠದಲ್ಲಿ ಅಂತರ್‌ಧರ್ಮೀಯ, ಅಂತರ್ಜಾತಿ ವಿವಾಹಗಳು ಜರುಗುತ್ತಿರುವುದು ವಿಶೇಷ ಎಂದರು.
ಸಾನ್ನಿಧ್ಯ ವಹಿಸಿ ಆರ್ಶೀವಚನ ನೀಡಿದ ಡಾ.ಬಸವಪ್ರಭು ಸ್ವಾಮೀಜಿ, ಶ್ರೀಮಠವು ದಶಕಗಳಿಂದಲೂ ಅತ್ಯಂತ ಸರಳ, ಅರ್ಥ ಪೂರ್ಣವಾಗಿ ಸಾಮೂಹಿಕ ವಿವಾಹಗಳನ್ನು ನಡೆಸಿಕೊಂಡು ಬರುತ್ತಿದೆ. ಬಡ ಮತ್ತು ಮಧ್ಯಮ ವರ್ಗದವರಿಗೆ ಮದುವೆ ವೆಚ್ಚದ ಹೊರೆ ತಗ್ಗಿಸುವುದು ಮತ್ತು ಜಾತಿಮತಗಳ ಭೇದವಿಲ್ಲದೆ ಸಮಾಜವನ್ನು ಒಗ್ಗೂಡಿಸುವುದು ಇಂದಿನ ಅತ್ಯಂತ ಅವಶ್ಯಕತೆಗಳಲ್ಲಿ ಒಂದಾಗಿದೆ ಎಂದರು.
ಸAಸಾರವೆAಬುದು ಒಂದು ಎತ್ತಿನ ಬಂಡಿ ಇದ್ದ ಹಾಗೆ. ಸತಿಪತಿಯರಲ್ಲಿ ಹೊಂದಾಣಿಕೆ ಮುಖ್ಯ. ಅವರ ನಡುವಿನ ಜಗಳ ಪರಸ್ಪರ ಪ್ರೀತಿಯ ಜಗಳವಾಗಬೇಕು. ಮನಸ್ತಾಪದ ಜಗಳ ಆಗಬಾರದು. ನಂಬಿಕೆ, ವಿಶ್ವಾಸ, ಹೊಂದಾಣಿಕೆಯಿAದ ಜೀವನ ನಡೆಸಿದರೆ ಸಂಸಾರ ಸ್ವರ್ಗವಾಗುತ್ತದೆ ಎಂದರು.
ಬಸವ ಸಮಿತಿ ಅಧ್ಯಕ್ಷ ಮದ್ದೇರು ರಾಜಣ್ಣ ಮಾತನಾಡಿದರು. ಅಮೃತ್ ಆಯುರ್ವೇದ ಕಾಲೇಜು ಪ್ರಾಧ್ಯಾಪಕ ಡಾ. ಮಹಮ್ಮದ್ ಖಾಸಿಂ ಅವರನ್ನು ಸನ್ಮಾನಿಸಲಾಯಿತು. ಶ್ರೀ ಬಸವಮುರುಘೇಂದ್ರ ಸ್ವಾಮೀಜಿ, ಪೈಲ್ವಾನ್ ತಿಪ್ಪೇಸ್ವಾಮಿ, ಹರಗುರು ಚರ ಮೂರ್ತಿಗಳು, ಶ್ರೀ ಮಠದ ಗುರುಕುಲದ ವಟುಗಳು, ಗಂಜಿಗಟ್ಟೆ ಕÊಷ್ಣಮೂರ್ತಿ, ಚುಟುಕು ಸಾಹಿತಿ ಗಂಗಾಧರಪ್ಪ ಇತರರು ಇದ್ದರು.
ಒಂದು ಜೋಡಿ ಅಂತರ್ಜಾತಿ ಸೇರಿ ೫ ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿರಿಸಿದವು. ಜಮುರಾ ಕಲಾವಿದರು ಪ್ರಾರ್ಥಿಸಿ ದರು. ಶಿಕ್ಷಕ ಗಿರೀಶಾಚಾರ್ಯ ಸ್ವಾಗತಿಸಿ, ಟಿ.ಪಿ.ಜ್ಞಾನಮೂರ್ತಿ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net