ರೈಲು ನಿಲ್ದಾಣಕ್ಕೆ ಹೈಟೆಕ್ ಸ್ಪರ್ಶ

ಚಿತ್ರದುರ್ಗದಲ್ಲಿ ನಿರ್ಮಾಣವಾಗುತ್ತಿರುವ ರೈಲು ನೂತನ ನಿಲ್ದಾಣದ ಚಿತ್ರ
ಚಿತ್ರದುರ್ಗದಲ್ಲಿ ನಿರ್ಮಾಣವಾಗುತ್ತಿರುವ ರೈಲು ನೂತನ ನಿಲ್ದಾಣದ ಚಿತ್ರ
Published on

ಪ್ರಮುಖ ಮುಖ್ಯಾಂಶಗಳು

  • ೧೧.೭೮ ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ
  • ಎಬಿಎಸ್‌ಎಸ್ ಅಡಿ ಚಿತ್ರದುರ್ಗದಲ್ಲಿ ಹೊಸ ರೈಲ್ವೇ ಸ್ಟೇಷನ್
  • ಕಾಮಗಾರಿಗೆ ಶಂಕುಸ್ಥಾಪನೆ

ಡಿಪಿಎನ್ ಶ್ರೇಷ್ಠಿ ಚಿತ್ರದುರ್ಗ

ರೈಲ್ವೇ ಇಲಾಖೆ ಅಮೃತ ಭಾರತ ರೈಲು ನಿಲ್ದಾಣ ಕಾಯಕಲ್ಪ ಯೋಜನೆಯಡಿ ಚಿತ್ರದುರ್ಗದಲ್ಲಿ ೧೧.೭೮ ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸುತ್ತಿರುವ ರೈಲು ನಿಲ್ದಾಣ ಕಾಮಗಾರಿ ಬಹುತೇಕ ಅಂತಿಮ ಹಂತಕ್ಕೆ ಬಂದಿದ್ದು, ಸೆಪ್ಟೆಂಬರ್ ತಿಂಗಳಲ್ಲಿ ಪೂರ್ಣ ಗೊಳ್ಳಲಿದೆ.
೨೦೨೪ರ ಫೆಬ್ರವರಿ ೨೬ರಂದು ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿದ್ದು, ೯ ತಿಂಗಳ ಕಾಲಮಿತಿಯಲ್ಲಿ ಈ ಯೋಜನೆ ಪೂರ್ಣಗೊಂಡು ಪ್ರಯಾಣಿಕರ ಸೇವೆಗೆ ಲಭ್ಯವಾಗಬೇಕಿತ್ತು. ಜಾಗದ ಸಮಸ್ಯೆಯಿಂದ ಕಾಮಗಾರಿ ಆಮೆ ವೇಗದಲ್ಲಿ. ಜಾಗದ ಸಮಸ್ಯೆಗೆ ಪರಿಹಾರ ಸಿಕ್ಕ ನಂತರ ಕಾಮಗಾರಿಗೆ ವೇಗ ನೀಡಲಾಗಿದ್ದು, ಸೆಪ್ಟೆಂಬರ್ ವೇಳೆಗೆ ಪೂರ್ಣಗೊಳ್ಳಲಿದೆ.
ಅಂದಾಜು ೩೫೦ ಚದರ ಅಡಿ ವಿಸ್ತೀರ್ಣದಲ್ಲಿ ನಿರ್ಮಾಣವಾಗುತ್ತಿರುವ ಜಿ ಪ್ಲಸ್ ಒನ್ ಸುಸಜ್ಜಿತ ನಿಲ್ದಾಣಕ್ಕೆ ಪ್ರವೇಶ ಮತ್ತು ನಿರ್ಗ ಮನಕ್ಕೆ ಪ್ರತ್ಯೇಕ ಅವಕಾಶ ಕಲ್ಪಿಸಲಾಗಿದೆ. ನೆಲ ಮಹಡಿಯಲ್ಲಿ ಮಹಿಳೆಯರ ಮತ್ತು ಪುರುಷರ ೫೦ ಪ್ರಯಾಣಿಕರ ಸಾಮರ್ಥ್ಯದ ಪ್ರತ್ಯೇಕ ವಿಶ್ರಾಂತಿ ಕೊಠಡಿಗಳು, ಮಹಿಳೆಯರ ವಿಶ್ರಾಂತಿ ಕೊಠಡಿಯಲ್ಲಿ ಶಿಶು ಆರೈಕೆ ಕೇಂದ್ರ ನಿರ್ಮಿಸಲಾಗಿದೆ.
ಕೆ-Éಟೇರಿಯಾ, ಫುಡ್‌ಕೋರ್ಟ್, ಟಿಕೆಟ್ ಕೌಂಟರ್, ವಿಐಪಿ ಲಾಂಜ್, ಸ್ಟೇಷನ್ ಮಾಸ್ಟರ್ ಕೊಠಡಿ, ಕೊರಿಯರ್ ಹಾಗೂ ಪಾರ್ಸೆಲ್ ಆಫೀಸ್ ಹಾಗೂ ಸುಸಜ್ಜಿತ ಶೌಚಗೃಹಗಳನ್ನು ನಿರ್ಮಿಸಲಾಗುತ್ತಿದೆ.
ಮೊದಲ ಮಹಡಿಯಲ್ಲಿ ೪ ವಿಶ್ರಾಂತಿಗ್ರಹಗಳು, ವಿಶಾಲವಾದ ೨ ಡಾರ್ಮೆಟರಿಗಳು, ಅಽಕಾರಿಗಳ ಮೂರು ವಿಶ್ರಾಂತಿ ಕೊಠಡಿ, ಪುರುಷ ಮತ್ತು ಮಹಿಳಾ ಟಿಟಿಇಗಳಿಗೆ ಪ್ರತ್ಯೇಕ ತಲಾ ಒಂದೊAದು ಕೊಠಡಿಗಳು ಹಾಗೂ ಮೇಲ್ವಿಚಾರಕರ ೪ ಕೊಠಡಿಗಳು ಇರಲಿವೆ.
ನಾಗರಿಕ ಸ್ನೇಹಿ
ನಿಲ್ದಾಣದ ಪ್ರವೇಶ ದ್ವಾರದಲ್ಲಿ ಆಕರ್ಷಕ ಕಮಾನು ನಿರ್ಮಾಣದೊಂದಿಗೆ ಉತ್ತಮ ಲ್ಯಾಂಡ್ ಸ್ಕೇಪಿಂಗ್ ಕೂಡ ಇದೆ. ಬಸ್‌ಬೇ, ಆಟೋಲೈನ್, ನಿಲ್ದಾಣ ಸಂಪರ್ಕ ರಸ್ತೆಗಳು, ವಾಹನಗಳ ಪಾರ್ಕಿಂಗ್‌ಗೆ ವ್ಯವಸ್ಥೆ, ಫ್ಲಾಟ್‌ಫಾರ್ಮ್, ಸಿಸಿಟಿವಿ ಕ್ಯಾಮರಾಗಳು, ಎಲ್‌ಇಡಿ ಫ್ಲಾಟ್‌ಫಾರ್ಮ್ ನೇಮ್, ಎಲ್‌ಇಡಿ ಸೂಚನಾ ಫಲಕಗಳು, ಎಟಿಎಂ, ವೈಫೈ ಸಹಿತ ನಾನಾ ಮೂಲ ಸೌಕರ್ಯಗಳು, ವಿದ್ಯುತ್ ದೀಪಗಳ ಮೆರುಗಿನೊಂದಿಗೆ ಅಂಗವಿಕಲರು ಹಾಗೂ ಹಿರಿಯ ನಾಗರಿಕರ ಸ್ನೇಹಿಯಾಗಿ ಆಧುನಿಕ ನಿಲ್ದಾಣ ರೈಲ್ವೆ ಪ್ರಯಾಣಿಕರ ಸೇವೆಗೆ ಸಜ್ಜಾಗುತ್ತಿದೆ.
೫೫೪ ರೈಲು ನಿಲ್ದಾಣಗಳ ಅಭಿವೃದ್ಧಿ
ಅಮೃತ ಭಾರತ ರೈಲು ನಿಲ್ದಾಣ ಕಾಯಕಲ್ಪ ಯೋಜನೆಯಡಿ ೪೧ ಸಾವಿರ ಕೋಟಿ ರೂ.ವೆಚ್ಚದಲ್ಲಿ ದೇಶದ ವಿವಿಧ ೫೫೪ ಪ್ರಮುಖ ರೈ ಲು ನಿಲ್ದಾಣಗಳ ಅಭಿವೃದ್ಧಿ, ೧೫೦೦ ಮೇಲ್ಸೇತುವೆ, ಕೆಳಸೇತುವೆಗಳ ನಿರ್ಮಾಣಕ್ಕೆ ವರ್ಚುವಲ್ ಆಗಿ ಜರುಗಿದ್ದ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ರೈಲ್ವೆ ಸಚಿವರು ಪಾಲ್ಗೊಂಡಿದ್ದರು. ಚಿತ್ರದುರ್ಗ ಸೇರಿದಂತೆ ಕರ್ನಾಟಕದ ನೈಋತ್ಯ ರೈಲ್ವೇ ವಿಭಾಗದಲ್ಲಿ ೩೧ ನಿಲ್ದಾಣಗಳ ಅಭಿವೃದ್ಧಿಗೆ ಶಂಕುಸ್ಥಾಪನೆ ನೆರವೇ ರಿಸಲಾಗಿತ್ತು.
*'

೩೫೦ ಚದರ ಅಡಿ ವಿಸ್ತೀರ್ಣದಲ್ಲಿ ಜಿ ಪ್ಲಸ್ ಒನ್ ಸುಸಜ್ಜಿತ ನಿಲ್ದಾಣ

*ಮಹಿಳೆ, ಪುರುಷರ ೫೦ ಪ್ರಯಾಣಿಕರ ಸಾಮರ್ಥ್ಯದ ಪ್ರತ್ಯೇಕ ವಿಶ್ರಾಂತಿ ಕೊಠಡಿ
*ಮಹಿಳೆಯರ ವಿಶ್ರಾಂತಿ ಕೊಠಡಿಯಲ್ಲಿ ಶಿಶು ಆರೈಕೆ ಕೇಂದ್ರ
*ಕೆ-ೆಟೇರಿಯಾ, ಫುಡ್‌ಕೋರ್ಟ್, ವಿಐಪಿ ಲಾಂಜ್, ಸುಸಜ್ಜಿತ ಶೌಚಗೃಹ ಸೌಲಭ್ಯ
* ಶಾಲವಾದ ೨ ಡಾರ್ಮೆಟರಿ, ಅಽಕಾರಿಗಳ ವಿಶ್ರಾಂತಿ ಕೊಠಡಿ, ಮೇಲ್ವಿಚಾರಕರ ೪ ಕೊಠಡಿ
"

ಕೇಂದ್ರದ ಮಹತ್ವಾಕಾಂಕ್ಷಿ ಅಮೃತ್ ಭಾರತ್ ರೈಲ್ವೇ ಸ್ಟೇಷನ್ ಯೋಜನೆಯಡಿ ಚಿತ್ರದುರ್ಗ ರೈಲು ನಿಲ್ದಾಣ ಆಧುನಿಕ ಮತ್ತು ವಿಶ್ವ ದರ್ಜೆ ಮೂಲ ಸೌಕರ್ಯಗಳೊಂದಿಗೆ ನಿರ್ಮಾಣವಾಗುತ್ತಿದೆ. ಆರಂಭದಲ್ಲಿ ಜಾಗದ ಸಮಸ್ಯೆಯಿಂದಾಗಿ ಕಾಮಗಾರಿ ವಿಳಂಬವಾಗಿದೆ. ಆಮೆಗತಿಯಲ್ಲಿ ಸಾಗಿದ್ದ ಕಾಮಗಾರಿ ಪರಿಶೀಲನೆ ನಡೆಸಿ ತ್ವರಿತವಾಗಿ ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ತಾಕೀತು ಮಾಡಲಾಗಿತ್ತು. ಈಗ ಕಾಮಗಾರಿಗೆ ವೇಗ ಸಿಕ್ಕಿದ್ದು, ಮುಂದಿನ ತಿಂಗಳೊಳಗೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ.

— ಗೋವಿಂದ ಎಂ.ಕಾರಜೋಳ ಲೋಕಸಭಾ ಸದಸ್ಯರು ಚಿತ್ರದುರ್ಗ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net