ಇವಿಎಂ ವಿರೋಽ ಕಾಂಗ್ರೆಸ್ಸಿಗೆ ತಕ್ಕ ಉತ್ತರ

ಬ್ಯಾಲೆಟ್ ಪೇಪರ್‌ನಲ್ಲೂ ಎನ್‌ಡಿಎ ಪರ ಒಲವು
ವಿಧಾನ ಪರಿಷತ್ ಚುನಾವಣೆ ಗೆಲುವು ಹಿನ್ನೆಲೆಯಲ್ಲಿ ಚಿತ್ರದುರ್ಗದಲ್ಲಿ ಬುಧವಾರ ಬಿಜೆಪಿ ವಿಜಯೋತ್ಸವದಲ್ಲಿ ಮಾ ಜಿ ಶಾಸಕರಾದ ಜಿ.ಎಚ್.ತಿಪ್ಪಾರೆಡ್ಡಿ, ಎಸ್.ಕೆ. ಬಸವರಾಜನ್, ಮಲ್ಲಿಕಾರ್ಜುನ್, ಜಿ.ಎಚ್. ಮೋಹನ್ ಮತ್ತಿತರರು ಇದ್ದರು.
ವಿಧಾನ ಪರಿಷತ್ ಚುನಾವಣೆ ಗೆಲುವು ಹಿನ್ನೆಲೆಯಲ್ಲಿ ಚಿತ್ರದುರ್ಗದಲ್ಲಿ ಬುಧವಾರ ಬಿಜೆಪಿ ವಿಜಯೋತ್ಸವದಲ್ಲಿ ಮಾ ಜಿ ಶಾಸಕರಾದ ಜಿ.ಎಚ್.ತಿಪ್ಪಾರೆಡ್ಡಿ, ಎಸ್.ಕೆ. ಬಸವರಾಜನ್, ಮಲ್ಲಿಕಾರ್ಜುನ್, ಜಿ.ಎಚ್. ಮೋಹನ್ ಮತ್ತಿತರರು ಇದ್ದರು.
Published on: 

ಚಿತ್ರದುರ್ಗ: ವಿಧಾನ ಪರಿಷತ್ ಶಿಕ್ಷಕರ ಮತ್ತು ಪದವೀಧರ ಕ್ಷೇತ್ರಗಳಲ್ಲಿ ದೊರೆತಿರುವ ಭರ್ಜರಿ ಗೆಲುವು, ಮುಂದಿನ ಚುನಾವಣೆಗಳು ಬ್ಯಾಲೆಟ್ ಮೂಲಕ ನಡೆದರೂ ಎನ್‌ಡಿಎ ಒಕ್ಕೂಟಕ್ಕೆ ಜಯ ಖಚಿತ ಎಂಬುದನ್ನು ಸಾಬೀತು ಪಡಿಸಿದೆ ಎಂದು ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಅಭಿಪ್ರಾಯಪಟ್ಟರು.

ಪರಿಷತ್ ೪ ಸ್ಥಾನಗಳಲ್ಲಿ ಎನ್‌ಡಿಎ ಅಭ್ಯರ್ಥಿಗಳು ಜಯಗಳಿಸಿರುವ ಹಿನ್ನೆಲೆಯಲ್ಲಿ ನಗರದ ಗಾಂಽ ವೃತ್ತದಲ್ಲಿ ಬುಧವಾರ ಬಿಜೆಪಿ ಆಯೋಜಿಸಿದ್ದ ವಿಜಯೋತ್ಸವದಲ್ಲಿ ಮಾತನಾಡಿದ ಅವರು, ಈ ಫಲಿತಾಂಶ ರಾಜ್ಯ ಸರ್ಕಾರದ ಆಡಳಿತ ವೈ-Àಲ್ಯಗಳ ವಿರುದ್ಧ ಪದವೀಧರ ಹಾಗೂ ಶಿಕ್ಷಕ ಮತದಾರರು ಕಾಂಗ್ರೆಸ್ಸಿಗೆ ನೀಡಿದ ಎಚ್ಚರಿಕೆಯಾಗಿದೆ ಎಂದರು.

ಕಾAಗ್ರೆಸ್‌ನ ವಿರೋಧದಿಂದ ಚುನಾವಣೆಗಳಲ್ಲಿ ಇವಿಎಂ ಬಳಕೆ ಕುರಿತಂತೆ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಚರ್ಚೆಯಾಗುತ್ತಿವೆ. ಇವಿಎಂ ಮೂಲಕ ಬಿಜೆಪಿ ಗೆಲ್ಲುತ್ತಿದೆ ಎಂದು ಪ್ರತಿಪಕ್ಷಗಳು ಆರೋಪಿಸುತ್ತಿರುವುದನ್ನು ನೋಡಿದ್ದೇವೆ. ಆದರೆ, ಈ ಚುನಾವಣೆ ಬ್ಯಾಲೆಟ್ ಪೇಪರ್ ಮೂಲಕ ನಡೆದಿದ್ದು, ೪ ಕ್ಷೇತ್ರಗಳಲ್ಲೂ ಮೊದಲನೇ ಸುತ್ತಿನಲ್ಲೇ ಅಭೂತಪೂರ್ವ ಗೆಲುವು ಸಾಽಸಿರುವುದು ವಿಶೇಷವಾಗಿದೆ. ಇವಿಎಂ ಬಗ್ಗೆ ಮಾತನಾಡುತ್ತಿದ್ದವರಿಗೆ ಈಗ ಸರಿಯಾದ ಉತ್ತರ ಸಿಕ್ಕಿದೆ. ಬ್ಯಾಲೆಟ್‌ನಲ್ಲೂ ಬಿಜೆಪಿ, ಎನ್‌ಡಿಎಗೆ ಜನರ ಬೆಂಬಲವಿದೆ ಎಂಬುದು ಸಾಬೀತಾಗಿದೆ ಎಂದು ಹೇಳಿದರು.

ಮಾಜಿ ಶಾಸಕ ಎಸ್.ಕೆ.ಬಸವರಾಜನ್, ಜಿ.ಎಚ್.ಮೋಹನ್, ಕೆ.ಮಲ್ಲಿಕಾರ್ಜುನ್, ರೇಖಾ, ನವೀನ್ ಚಾಲುಕ್ಯ, ನಾಗರಾಜ್, ಲಿಂಗ ರಾಜ್, ಸುರೇಶ್, ದಗ್ಗೆ ಶಿವಪ್ರಕಾಶ್, ಕಿರಣ್, ವಸಂತಾಚಾರ್, ನವೀನ್, ನಾಗರಾಜ್, ವೆಂಕಟೇಶ್, ಬಸಮ್ಮ, ಶಮಿಕಾ, ಕಾಂಚನಾ, ರೋಹಿತ್, ಚಂದ್ರಿಕಾ ಲೋಕನಾಥ್, ಪ್ರದೀಪ್, ವಂಶಿ, ವಿರೂಪಾಕ್ಷ ಯಾದವ್, ಅರುಣಾಕುಮಾರಿ, ಶಾಂತಮ್ಮ, ಮಂಜುಳಮ್ಮ, ಕವನಾ, ಕವಿತಾ ,ರಜನಿ, ದೇವಿಕಾ ಇದ್ದರು.

ನಿರೀಕ್ಷಿತ ಫಲಿತಾಂಶ

ಆಗ್ನೇಯ ಪದವೀಧರರ ಕ್ಷೇತ್ರದ ಚುನಾವಣಾ ಪ್ರಚಾರ ಸಂದರ್ಭದಲ್ಲಿ ಕೆ.ಎಂ.ಸುರೇಶ್ ಅವರು ಮೊದಲ ಸುತ್ತಿನ ಮತದಾನದಲ್ಲೇ ಜಯಗಳಿಸುವ ವಿಶ್ವಾಸವನ್ನು ಎನ್‌ಡಿಎ ಪ್ರಮುಖರು ವ್ಯಕ್ತಪಡಿಸಿದ್ದರು. ಅದರಂತೆ ಮತದಾರರು ಅತ್ಯಂತ ಹೆಚ್ಚಿನ ಮತಗಳೊಂದಿಗೆ ಸುರೇಶ್ ಅವರನ್ನು ವಿಧಾನ ಪರಿಷತ್‌ಗೆ ಆಯ್ಕೆ ಮಾಡಿದ್ದಾರೆ. ಕಳೆದ ೪೦-೫೦ ವರ್ಷಗಳಿಂದ ಈ ಕ್ಷೇತ್ರದಲ್ಲಿ ಬಿಜೆಪಿ ೮ ಬಾರಿ ಹಾಗೂ ಜೆಡಿಎಸ್ ಎರಡು ಬಾರಿ ಗೆದ್ದಿದ್ದು, ಈಗ ಎನ್‌ಡಿಎ ಗೆಲುವು ದಾಖಲಿಸಿದೆ ಎಂದು ತಿಪ್ಪಾರೆಡ್ಡಿ ಹೇಳಿದರು.

ಮೈತ್ರಿ ಸರ್ಕಾರಕ್ಕೆ ದಿಕ್ಸೂಚಿ

ಆಗ್ನೇಯ ಪದವೀಧರ ಕ್ಷೇತ್ರದ ಈ ಗೆಲುವು ಸ್ಥಳೀಯ ಸಂಸ್ಥೆಗಳು, ಗ್ರಾಪಂ, ತಾಪಂ, ಜಿಪಂಗಳಲ್ಲಿ ಹಾಗೂ ರಾಜ್ಯದಲ್ಲಿ ಎನ್‌ಡಿಎ ಮೈತ್ರಿಕೂಟದ ಸರ್ಕಾರ ಅಽಕಾರಕ್ಕೆ ಬರುವುದರ ದಿಕ್ಸೂಚಿಯಾಗಿದೆ ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೆಂಕಟೇಶ್ ಯಾದವ್ ಹೇಳಿದರು.

ನಾಯಕರ ಮಾರ್ಗದರ್ಶನ

ಈ ಗೆಲುವಿಗೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ವಿಧಾನಸಭೆ ಪ್ರತಿಪಕ್ಷ ನಾಯಕ ಆರ್. ಅಶೋಕ್, ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಸೇರಿ ಬಿಜೆಪಿ, ಜೆಡಿಎಸ್ ಪ್ರಮುಖರ ಮಾರ್ಗದರ್ಶನ, ನೇತೃತ್ವ ಕಾರಣವಾಗಿದೆ. ಬುದ್ಧಿವಂತ ಮತದಾರರು ರಾಜ್ಯಸರ್ಕಾರದ ವಿರುದ್ಧ ಮತ ಚಲಾಯಿಸಿ ಈ ಜಯ ತಂದುಕೊಟ್ಟಿದ್ದಾರೆ.

ಜಿ.ಎಚ್. ತಿಪ್ಪಾರೆಡ್ಡಿ, ಮಾಜಿ ಶಾಸಕ, ಚಿತ್ರದುರ್ಗ

--

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net