ಕಾನೂನು ಬಾಹಿರ ಕೃತ್ಯಗಳ ತಡೆಗೆ ಬೇಕು ದಿಟ್ಟ ನಿಲುವು

ಸಿವಿಲ್​ ನ್ಯಾಯಾಧೀಶ ಬಿ.ಆರ್​. ಪುನೀತ್​ ಸಲಹೆ
Law Knowledge
ಮೊಳಕಾಲ್ಮೂರು ಬಾಲಕಿಯರ ಸರ್ಕಾರಿ ಪ್ರೌಢ ಶಾಲೆಯಲ್ಲಿ ಮಕ್ಕಳ ರಕ್ಷಣೆ ಕಾನೂನು ಅರಿವು ಕಾರ್ಯಕ್ರಮವನ್ನು ಸಿವಿಲ್​ ನ್ಯಾಯಾಧೀಶ ಬಿ.ಆರ್​. ಪುನೀತ್​ ಉದ್ಘಾಟಿಸಿದರು. ಮಹಮದ್​ ಶಂಶಿರ್​ಆಲಿ, ಕೆ.ಎಂ. ರಾಮಾಂಜಿನಿ, ವೆಂಕಟೇಶ, ನಾಗರಾಜ್​ ಇತರರಿದ್ದರು.Law Knowledge
Published on: 

ಮೊಳಕಾಲ್ಮೂರು: ವಿದ್ಯಾರ್ಥಿನಿಯರು ಬಾಲ್ಯ ವಿವಾಹ ಹಾಗೂ ಲೈಂಗಿಕ ದೌರ್ಜನ್ಯಗಳಂತಹ ಕಾನೂನುಬಾಹಿರ ಕೃತ್ಯಗಳಿಗೆ ಕಡಿವಾಣ ಹಾಕಲು ದಿಟ್ಟ ನಿಲುವುಗಳನ್ನು ತೆಗೆದುಕೊಳ್ಳಬೇಕು ಎಂದು ಸಿವಿಲ್​ ನ್ಯಾಯಾಧೀಶ ಬಿ.ಆರ್​. ಪುನೀತ್​ ಹೇಳಿದರು.

ಪಟ್ಟಣದ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ ಶುಕ್ರವಾರ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘದಿಂದ ಹಮ್ಮಿಕೊಂಡಿದ್ದ ಮಕ್ಕಳ ರಕ್ಷಣೆ, ಕಾನೂನು ಅರಿವು ಕಾರ್ಯಕ್ರಮದಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ಬಾಲ್ಯ ವಿವಾಹ ಹಾಗೂ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿವೆ. ಇದರಿಂದಾಗಿ ಹೆಣ್ಣುಮಕ್ಕಳ ಭವಿಷ್ಯ, ಕನಸುಗಳು ಹಾಳಾಗುವ ಅಪಾಯಕಾರಿ ಬೆಳವಣಿಗೆ ಬಗ್ಗೆ ಉಚ್ಚ ನ್ಯಾಯಾಲಯ ಎಚ್ಚರಿಸಿದೆ ಎಂದರು.

ಕಾನೂನುಬಾಹಿರ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಕಾನೂನು ಸೇವಾ ಸಮಿತಿ ಸಂಕಲ್ಪ ತೊಟ್ಟಿದೆ. ಹೆಣ್ಣುಮಕ್ಕಳಿಗೆ ಅನ್ಯಾಯವಾದಲ್ಲಿ ಅದನ್ನು ವಿರೋಧಿಸಲು ಮುಂದಾಗಬೇಕು. ಅಗತ್ಯವಾದಲ್ಲಿ ಪೊಲೀಸರ ಸಹಕಾರ ಪಡೆದು ಆರೋಪಿಗಳ ವಿರುದ್ಧ ಕ್ರಮಕ್ಕೆ ಮುಂದಾಗುವ ದಿಟ್ಟತನ ಬೆಳಸಿಕೊಂಡಲ್ಲಿ ನಿಮ್ಮ ಜೀವನ ಸಾರ್ಥಕವಾಗಲಿದೆ. ಗ್ರಾಮೀಣ ಪ್ರದೇಶದಲ್ಲಿ ಬಾಲ್ಯ ವಿವಾಹ ಒಂದು ಪಿಡುಗಾಗಿದೆ. ಅದರ ಸಂಪೂರ್ಣ ನಿಮೂರ್ಲನೆಗೆ ಕಾನೂನು ವ್ಯವಸ್ಥೆ ಬಲವಾಗಿದೆ. ಹೆಣ್ಣು ಮಕ್ಕಳಿಗೆ ಉನ್ನತ ಶಿಣ ಕೊಡಿಸಿ ಉದ್ಯೋಗ ಮಾಡುವ ಆತ್ಮಸ್ಥೆರ್ಯ ತುಂಬಬೇಕು ಎಂದರು.

ಪ್ರಭಾರ ಮುಖ್ಯಶಿಕ್ಷಕ ನಾಗರಾಜ್​, ಸರ್ಕಾರಿ ಅಭಿಯೋಜಕ ಮಹಮದ್​ ಶಂಶಿರ್​ಆಲಿ, ವಕೀಲರಾದ ಕೆ.ಎಂ. ರಾಮಾಂಜಿನಿ, ವೆಂಕಟೇಶ, ಶಿಕ್ಷಕರಾದ ಜಿ.ಟಿ. ಗುರುಸ್ವಾಮಿ, ಜಗಳೂರು ಪಾಪಣ್ಣ, ಎಸ್​.ಎಲ್​. ಸವಿತಾ, ಶಿವಗಂಗಮ್ಮ, ಮನೋಹರರೆಡ್ಡಿ, ಪುರುಷೋತ್ತಮರೆಡ್ಡಿ, ಎನ್​.ಕೆ. ತಿಪ್ಪಮ್ಮ, ನಾಗರತ್ನ, ರೂಪ, ಕಾವೇರಿ ಇತರರು ಇದ್ದರು.

ಇಂದಿನ ಮಕ್ಕಳೇ ನಾಳಿನ ದೇಶ ಕಟ್ಟುವ ನಾಯಕರು. ಹೆಣ್ಣುಮಕ್ಕಳಿಗೆ ಉತ್ತಮ ಶಿಣ ಹೊಂದುವುದು ಅವಶ್ಯವಾಗಿದೆ. ಅದಕ್ಕಾಗಿ ಸರ್ಕಾರ ಎಲ್ಲ ರೀತಿಯ ಸೌಕರ್ಯ ಕಲ್ಪಿಸಿದೆ. ಅವುಗಳನ್ನು ಸದ್ಬಳಕೆ ಮಾಡಿಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಿ
ಪಿ.ಜಿ. ವಸಂತಕುಮಾರ ಅಧ್ಯ, ವಕೀಲರ ಸಂಘ