ಚಿತ್ರದುರ್ಗದಲ್ಲಿ ಶುಕ್ರವಾರ ಎಸ್‌ಐಆರ್ ಕುರಿತಂತೆ ರಾಜಕೀಯ ಪಕ್ಷಗಳ ಪ್ರತಿನಿಽಗಳ ಸಭೆಯಲ್ಲಿ ಡಿಸಿ ಟಿ. ವೆಂಕಟೇಶ್, ಬೀಬೀ -Áತೀಮಾ, ಮಲ್ಲಿಕಾರ್ಜುನ ನಾಯಕ, ಜಿ.ಎಚ್. ಮೋಹನ್, ಕೆ. ಮಂಜುನಾಥ್, ಗೋಪಾಲಸ್ವಾಮಿ ನಾಯಕ, ಡಿ.ಎನ್. ಮೈಲಾರಪ್ಪ, ಗೌಸ್‌ಪೀರ್ ಇತರರು ಇದ್ದರು.
ಜಿಲ್ಲೆಯಲ್ಲಿ ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್)ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಈವರೆಗೆ ಶೇ. ೯೦.೧೫ ಗಣಕೀಕರಣ ಕರ‍್ಯ ಪೂರ್ಣಗೊಂಡಿದೆ ಎಂದು ಜಿಲ್ಲಾ ಚುನಾವಣಾಽಕಾರಿ, ಜಿಲ್ಲಾಽಕಾರಿ ಟಿ. ವೆಂಕಟೇಶ್ ತಿಳಿಸಿ ದರು.
ಡಿಸಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಎಸ್‌ಐಆರ್ ಸಂಬAಧ ಮಾನ್ಯತೆ ಪಡೆದ ರಾಜಕೀಯ ಪಕ್ಷಗಳ ಪ್ರತಿನಿಽಗಳ ಸಭೆಯಲ್ಲಿ ಮಾತನಾಡಿದರು.
ಜಿಲ್ಲೆಯ ೧೪,೪೦,೫೩೪ ಮತದಾರರ ಪೈಕಿ ಈವರೆಗೆ ೧೨,೯೮,೬೧೭ ಮತದಾರರ ಪರಿಶೀಲನೆ ಪೂರ್ಣಗೊಂಡಿದೆ. ಆ. ೨೪ ರಂದು ಕರಡು ಮತದಾರರ ಪಟ್ಟಿ ಪ್ರಕಟಗೊಳ್ಳಲಿದೆ. ನಂತರ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು ಹಾಗೂ ಹೊಸ ಸೇರ್ಪಡೆಗೆ ಒಂದು ತಿಂಗಳ ಕಾಲಾವಕಾಶ ಸಿಗಲಿದೆ ಎಂದರು.
ಗ್ರಾಮೀಣ ಪ್ರದೇಶಗಳಿಗೆ ಹೋಲಿಸಿದರೆ ನಗರ ಪ್ರದೇಶಗಳಲ್ಲಿ ಎಸ್‌ಐಆರ್ ಪ್ರಕ್ರಿಯೆ ಕೊಂಚ ಕಡಿಮೆಯಿದ್ದು, ಚಳ್ಳಕೆರೆ, ಚಿತ್ರ ದುರ್ಗ ಹಾಗೂ ಹಿರಿಯೂರು ನಗರ ವ್ಯಾಪ್ತಿಯಲ್ಲಿ ಶೇ. ೮೬ರಿಂದ ೮೮ ಸಾಧನೆಯಾಗಿದೆ. ರಾಜ್ಯದ ಇತರ ಜಿಲ್ಲೆಗಳಿಗೆ ಹೋಲಿಸಿದರೆ ನಮ್ಮ ಜಿಲ್ಲೆಯಲ್ಲಿ ಮತದಾರರ ಪಟ್ಟಿಯಿಂದ ಹೆಸರು ಕೈಬಿಡುವ ಪ್ರಮಾಣ ಶೇ. ೧೦ಕ್ಕಿಂತ ಕಡಿಮೆಯಿದ್ದು, ಉತ್ತಮ ಸಾಧನೆಯಾಗಿದೆ. ರಾಜ್ಯದಲ್ಲೇ ಅತ್ಯಂತ ಕಡಿಮೆ ಡಿಲೀಷನ್ ಆಗಿರುವ ಜಿಲ್ಲೆಗಳ ಪೈಕಿ ಚಿತ್ರದುರ್ಗ ೫ನೇ ಸ್ಥಾನದಲ್ಲಿದೆ.
ಎಸ್‌ಐಆರ್ ಸಂಬAಧ ಬಿಎಲ್‌ಒಗಳು ಮನೆ ಮನೆಗೆ ಭೇಟಿ ನೀಡುತ್ತಿದ್ದು, ಪರಿಶೀಲನೆ ವೇಳೆ ಪತ್ತೆಯಾಗದ ಕಾಯಂ ಆಗಿ ಸ್ಥಳಾಂತರಗೊAಡವರ ಬಗ್ಗೆ ಮತ್ತೊಮ್ಮೆ ಕ್ರಾಸ್ ಚೆಕ್ ಮಾಡಲಾಗುತ್ತಿದೆ. ರಾಜಕೀಯ ಪಕ್ಷಗಳ ಪ್ರತಿನಿಽಗಳು ಹಾಗೂ ಬಿಎಲ್‌ಎಗಳೊಂದಿಗೆ ಕೈಜೋಡಿಸಿ ಅರ್ಹರು ಪಟ್ಟಿಯಿಂದ ಹೊರಗುಳಿಯದಂತೆ ನೋಡಿಕೊಳ್ಳಬೇಕು.
ಎಸ್‌ಐಆರ್ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಯಾವುದೇ ಅರ್ಹರ ಹೆಸರು ಕೈಬಿಟ್ಟು ಹೋಗದಂತೆ ತೀವ್ರ ಜಾಗರೂಕತೆ ವಹಿಸಬೇಕು. ಮೂಲಪಟ್ಟಿಯಲ್ಲಿ ಹೆಸರು ಸೇರಿದರೆ ಮುಂದೆ ತಿದ್ದುಪಡಿ, ವರ್ಗಾವಣೆ ಸೇರಿದಂತೆ ಯಾವುದೇ ಮಾರ್ಪಾಡಿಗೆ ಸುಲಭವಾಗಿ ಅವಕಾಶವಿರುತ್ತದೆ.
೩೦,೭೯೦ ಮರಣ, ೭೦,೧೯೯ ಶಾಶ್ವತ ವಲಸೆ, ೨೧,೩೫೪ ಡಬಲ್ ಎಂಟ್ರಿ, ೧೮,೫೭೪ ಗೈರು ಹಾಜರು ಹಾಗೂ ೧,೦೦೦ ಇತರೆ ಸೇರಿದಂತೆ ಎಎಸ್‌ಡಿಡಿಒ ಮತದಾರರ ಪಟ್ಟಿಯನ್ನು ಈಗಾಗಲೇ ಎಲ್ಲ ರಾಜಕೀಯ ಪಕ್ಷಗಳ ಪ್ರತಿನಿಽಗಳಿಗೆ ಹಂಚಿಕೊಳ್ಳಲಾಗಿದೆ ಎಂದು ತಿಳಿಸಿದರು.
ಚುನಾವಣಾ ತಹಸೀಲ್ದಾರ್ ಬೀಬೀ -Áತೀಮಾ, ಗ್ರೇಡ್-೨ ತಹಸೀಲ್ದಾರ್ ಮಲ್ಲಿಕಾರ್ಜುನ ನಾಯಕ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಎಚ್. ಮೋಹನ್, ಜೆಡಿಎಸ್ ಜಿಲ್ಲಾಧ್ಯಕ್ಷ ಕೆ. ಮಂಜುನಾಥ್, ಜಿಲ್ಲಾ ಮಹಾ ಪ್ರಧಾನ ಕರ‍್ಯದರ್ಶಿ ಗೋಪಾಲ ಸ್ವಾಮಿ ನಾಯಕ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕರ‍್ಯದರ್ಶಿ ಡಿ.ಎನ್. ಮೈಲಾರಪ್ಪ, ಸಿಪಿಐ ಡಿಒಸಿ ಗೌಸ್‌ಪೀರ್ ಇತರರು ಇದ್ದರು.