ಕೇಂದ್ರದ ಸಂಪುಟ ಒಪ್ಪಿದರೆ `ಭದ್ರಾ'ಕ್ಕೆ ೬೨೦೦ ಕೋಟಿ ರೂ. ನೆರವು
ಚಿತ್ರದುರ್ಗದಲ್ಲಿ ಸಿಡಿ ಪೇಸ್‌ನಿಂದ ಏರ್ಪಡಿಸಿದ್ದ ಕಟ್ಟಡ ನಿರ್ಮಾಣ ಸಾಮಗ್ರಿ ಪ್ರದರ್ಶನವನ್ನು ಡಾ. ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಉದ್ಘಾಟಿಸಿದರು. ಸಚಿವ ಟಿ. ರಘುಮೂರ್ತಿ, ಸಿ. ರವಿಕುಮಾರ್ ಇತರರರು ಇದ್ದರು.
ಮೂರು ದಿನಗಳ ಕಟ್ಟಡ ನಿರ್ಮಾಣ ಸಾಮಗ್ರಿ ಪ್ರದರ್ಶನಕ್ಕೆ ಚಾಲನೆ
ಭದ್ರಾ ಮೇಲ್ದಂಡೆ ಯೋಜನೆ
ಚಿತ್ರದುರ್ಗ:
ಕೇಂದ್ರದ ಸಚಿವ ಸಂಪುಟ ಒಪ್ಪಿಗೆ ನೀಡಿದರೆ ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರದಿAದ ೬೨೦೦ ಕೋಟಿ ರೂ.ಅನುದಾನ ಲಭ್ಯವಾಗಲಿದೆ ಎಂದು ಸಿರಿಗೆರೆ ಶ್ರೀ ತರಬಾಳು ಬೃಹನ್ಮಠದ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಜಿ¯್ಲÁ ಪ್ರಾಕ್ಡೀಸಿಂಗ್ ಆರ್ಕಿಟೆಕ್ಟ್÷್ಸಮತ್ತು ಸಿವಿಲ್ ಇಂಜಿನಿರ‍್ಸ್ ಅಸೋಸಿಯೇಷನ್(ಸಿಡಿ-ಪೇಸ್)ನಿಂದ ನಗರದ ಶ್ರೀ ಜಗದ್ಗುರು ಪಂಚಾಚಾರ್ಯ ಕಲ್ಯಾಣ ಮಂಟಪದಲ್ಲಿ ಆಯೋಜಿಸಿರುವ ೩ ದಿನಗಳ ಕಟ್ಟಡ ನಿರ್ಮಾಣ ಸಾಮಗ್ರಿಗಳ ಪ್ರದರ್ಶನಕ್ಕೆ ಶನಿವಾರ ಚಾಲನೆ ನೀಡಿ ಶ್ರೀಗಳು ಮಾತನಾಡಿದರು.
ಕೇಂದ್ರ ಈಗಾಗಲೇ ಈ ಯೋಜನೆಗೆ ೫೩೦೦ ಕೋಟಿ ರೂ. ಘೋಷಿಸಿದೆ. ಈಚೆಗೆ ಅನುದಾನ ಹೆಚ್ಚಳಕ್ಕೆ ಸಂಬAಽಸಿದAತೆ ಕೇಂದ್ರ ನೀರಾವರಿ ಮಂತ್ರಾಲಯದ ತಾಂತ್ರಿಕ ಸಲಹಾ ಸಮಿತಿ ಅನುಮೋದನೆ ನೀಡಿದೆ. ಸಾರ್ವಜನಿಕ ಬಂಡವಾಳ ಹೂಡಿಕೆ ಮಂಡಳಿ ಸಭೆಯಲ್ಲಿ ಈ ವಿಷಯ ಪಾಸ್ ಆಗಿ, ಸಂಪುಟ ಒಪ್ಪಿಗೆ ನೀಡಿದರೆ ಅನುದಾನದ ಮೊತ್ತ ೫೩೦೦ ಕೋಟಿ ರೂ.ಗಳಿಂದ ೬೨೦೦ ಕೋಟಿ ರೂ.ಗೆ ಏರಿಕೆ ಆಗಲಿದೆ ಎಂದು ತಿಳಿಸಿದರು.
ಈಗಾಗಲೇ ಚಾಲ್ತಿಯಲ್ಲಿರುವ ವಿವಿಧ ಏತ ನೀರಾವರಿ ಯೋಜನೆಗಳ ಮೂಲಕ ತುಂಗಾ-ಭದ್ರಾ ನೀರನ್ನು ಚಿತ್ರದುರ್ಗ, ದಾವಣ ಗೆರೆ ಜಿಲ್ಲೆಯ ಕೆರೆಗಳಿಗೆ ತುಂಬಿಸಿದರೆ ರೈತರ ಬದುಕು ಹಸನಾಗಲಿದೆ. ವಿವಿಧ ನೀರಾವರಿ ಯೋಜನೆಗಳ ಕುರಿತಂತೆ ಪ್ರತ್ಯೇಕ ವಾಟ್ಸ್ಆ್ಯಪ್ ಗ್ರೂಫ್‌ನಲ್ಲಿ ಕೆರೆಗಳಿಗೆ ತುಂಬುತ್ತಿರುವ ನೀರು ಕುರಿತಂತೆ ನಿತ್ಯ ರೈತರಿಂದ ಮಾಹಿತಿ ಪಡೆಯುತ್ತಿರುವುದಾಗಿ ಶ್ರೀಗಳು ತಿಳಿಸಿದರು.
ಭದ್ರಾ ಮೇಲ್ದಂಡೆ ಯೋಜನೆ ಅನುಷ್ಠಾನವಾದರೆ ಬರದ ನಾಡು ಚಿತ್ರದುರ್ಗ ಭಗೀರಥ ನಾಡಾಗುತ್ತದೆ. ನೂತನ ಸಚಿವ ಟಿ. ರಘು ಮೂರ್ತಿ ಅವರು ಭದ್ರಾ ಮೇಲ್ದಂಡೆ ತ್ವರಿತ, ಸಂಪೂರ್ಣ ಅನುಷ್ಠಾನಕ್ಕೆ ರಾಜ್ಯ ಸರ್ಕಾರದ ಮೇಲೆ ಒತ್ತಡ ತರಬೇಕು. ಪೂರಕವಾಗಿ ಯೋಜನೆ ನಿವೃತ್ತ ಮುಖ್ಯಇಂಜಿನಿಯರ್ ಎಫ್.ಎಚ್. ಲಮಾಣಿ ಅವರ ಸೇವೆ ಪಡೆಯಬೇಕು. ಹುದ್ದೆ ಸೃಷ್ಟಿಸಿ ಯೋಜನೆ ಕಾರ್ಯಾನುಷ್ಠಾನದಲ್ಲಿ ಅವರನ್ನು ತೊಡಗಿಸಿಕೊಳ್ಳಬೇಕೆಂದು ಸಚಿವರಿಗೆ ಶ್ರೀಗಳು ಸಲಹೆ ನೀಡಿದರು.
ಚಳ್ಳಕೆರೆಯಿಂದ ಮೂರು ಬಾರಿ ಶಾಸಕರಾಗಿರುವ ರಘುಮೂರ್ತಿ ಅವರನ್ನು ಸಚಿವರನ್ನಾಗಿ ಮಾಡಿ ಎಂದು ನಾವು ಯಾರಿಗೂ ಶಿ-Áರಸು ಮಾಡಿಲ್ಲ. ಅವರು ಸಚಿವರಾಗಬೇಕೆಂಬ ಆಶಯ ನಮಗೆ ಇತ್ತು. ಅವರ ಕಾರ್ಯದಕ್ಷತೆ ಗುರುತಿಸಿ ಸಿಎಂ ಡಿ.ಕೆ. ಶಿವ ಕುಮಾರ್ ಮಂತ್ರಿ ಮಾಡಿದ್ದಾರೆ.
ಯಾವ ಖಾತೆ ಎಂಬುದಿನ್ನೂ ಗೊತ್ತಾಗಿಲ್ಲ. ಯಾವುದೇ ಖಾತೆ ಕೊಟ್ಟರೂ ಸಮರ್ಥಕವಾಗಿ ನಿಭಾಯಿಸುವ ಶಕ್ತಿ ಅವರಲ್ಲಿದೆ. ರಘುಮೂರ್ತಿ ಅವರಿಂದ ಜಿಲ್ಲೆಗೆ ಹೊಸ ಬೆಳಕು ಮೂಡಲಿದೆ. ಅವರ ಚಳ್ಳಕೆರೆ ಶಾಸಕರ ಭವನ ಮಾದರಿಯಾಗಿದೆ ಎಂದರು.
ಕೃತಕ ಬುದ್ಧಿಮತ್ತೆಯ(ಎಐ)ಈ ಯುಗದಲ್ಲಿ ಆಧುನಿಕ ತಂತ್ರಜ್ಞಾನಗಳ ಸಮರ್ಪಕ ಬಳಕೆಯೊಂದಿಗೆ ಮನೆ ನಿರ್ಮಿಸುವವರ ಆಶೋತ್ತರಗಳನ್ನು ಈಡೇರಿಸಬೇಕಿದೆ.
ಆಧ್ಯಾತ್ಮದೊಂದಿಗೆ ಬೆಸೆದಿರುವ ಪ್ರಾಚೀನ ಭಾರತೀಯ ಪರಂಪರೆ ವಾಸ್ತುಶಿಲ್ಪ ಇತಿಹಾಸದ ಪ್ರತಿಬಿಂಬಿಸುತ್ತವೆ. ಪಾಳೇಗಾರರು ಚಿತ್ರದುರ್ಗದಲ್ಲಿ ಕಟ್ಟಿಸಿರುವ ಏಳು ಸುತ್ತಿನ ಕೋಟೆ ಸೇರಿ ಪ್ರಪಂಚದ ನಾನಾ ಐತಿಹಾಸಿಕ ಸ್ಮಾರಕಗಳು ಗತ ವೈಭವಕ್ಕೆ ಉತ್ತಮ ಉದಾಹರಣೆಯಾಗಿವೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಿಡಿ-ಪೇಸ್ ಅಧ್ಯಕ್ಷ ಸಿ. ರವಿಕುಮಾರ್ ಮಾತನಾಡಿದರು. ಕಾರ್ಯದರ್ಶಿ ಮಾಧವ ಎಂ. ಪೊಕಳೆ, ಎಸ್‌ಕೆ ಸ್ಟೀಲ್‌ನ ರಾಜೇಶ್, ಆಲ್ಟ್ರಾಟೆಕ್ ಸಿಮೆಂಟ್‌ನ ಪ್ರದೀಪ್‌ಕುಮಾರ್ ಪಾಟೀಲ್ ಇದ್ದರು. ಸಲಹಾ ಸಮಿತಿ ಸದಸ್ಯರಾದ ಕೆ.ಎಸ್. ಅರುಣ್‌ಕುಮಾರ್ ಸ್ವಾಗತಿಸಿದರು. ಪಿ.ಎಲ್. ಸುರೇಶ್‌ರಾಜು ಪ್ರಾಸ್ತಾವಿಕವಾಗಿ ಮಾತನಾಡಿದರು.
ಯಶಸ್ಸಿಗೆ ಇಂಜಿನಿಯರಿAಗ್ ಪದವಿ ಕಾರಣ
ಶಾಸಕನಾಗಿ ಅಭಿವೃದ್ಧಿ ಕೆಲಸಗಳಲ್ಲಿ ಯಶಸ್ವಿಯಾಗಲು ನನ್ನ ಸಿವಿಲ್ ಇಂಜಿನಿಯರಿAಗ್ ಪದವಿ ಕಾರಣ ಎಂದು ಸಚಿವ ಟಿ. ರಘು ಮೂರ್ತಿ ಹೇಳಿದರು.
ರಸ್ತೆ ಮತ್ತು ಸೇತುವೆ ದೇಶದ ಸಂಸ್ಕೃತಿ ಬಿಂಬಿಸುತ್ತವೆ ಎಂಬ ಮಾತಿದೆ. ಇಂಜಿನಿಯರ್‌ಗಳು ದಕ್ಷತೆಯಿಂದ ಜನರ ಆರ್ಥಿಕತೆ, ಅನುಕೂಲಕ್ಕೆ ತಕ್ಕಂತೆ ಮನೆ ನಿರ್ಮಿಸಿಕೊಡಬೇಕು. ಯಾವುದೇ ನಿರ್ಮಾಣವಿರಲಿ ಸುರಕ್ಷತೆ, ಗುಣಮಟ್ಟಕ್ಕೆ ಒತ್ತು ಕೊಡಬೇಕು. ಕಲುಷಿತವಾಗುತ್ತಿರುವ ರಾಜಕಾರಣದ ಈ ಸಂದರ್ಭದಲ್ಲಿ ಶ್ರೀಗಳಿಂದ ಉತ್ತಮ ಮಾರ್ಗದರ್ಶನ ದೊರೆಯುತ್ತಿದೆ ಎಂದರು.