ಹರಿಪ್ರಸಾದ್ ಪದಗ್ರಹಣಕ್ಕೆ ಜಿಲ್ಲೆಯಿಂದ ೫ ಸಾವಿರ ಮಂದಿ

ಕೆಪಿಸಿಸಿ ನೂತನ ಅಧ್ಯಕ್ಷರ ಪದಗ್ರಹಣ ಸಮಾರಂಭ ಸಂಬAಧ ಚಿತ್ರದುರ್ಗದಲ್ಲಿ ಭಾನುವಾರ ಜರುಗಿದ ಪೂರ್ವಭಾವಿ ಸಭೆಯಲ್ಲಿ ಮುರಳಿಧರ ಹಾಲಪ್ಪ ಮಾತನಾಡಿದರು. ಎಚ್. ಆಂಜನೇಯ, ಎಂ.ಕೆ. ತಾಜ್‌ಪೀರ್, ಹಾಲಸ್ವಾಮಿ ಇತರರು ಇದ್ದರು.
ಕೆಪಿಸಿಸಿ ನೂತನ ಅಧ್ಯಕ್ಷರ ಪದಗ್ರಹಣ ಸಮಾರಂಭ ಸಂಬAಧ ಚಿತ್ರದುರ್ಗದಲ್ಲಿ ಭಾನುವಾರ ಜರುಗಿದ ಪೂರ್ವಭಾವಿ ಸಭೆಯಲ್ಲಿ ಮುರಳಿಧರ ಹಾಲಪ್ಪ ಮಾತನಾಡಿದರು. ಎಚ್. ಆಂಜನೇಯ, ಎಂ.ಕೆ. ತಾಜ್‌ಪೀರ್, ಹಾಲಸ್ವಾಮಿ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಜೂ. ೨೧ ರಂದು ಕಾರ್ಯಕ್ರಮ
  • ಪಕ್ಷದ ವರಿಷ್ಠರ ಆಗಮನ
  • ಮಾಜಿ ಸಚಿವ ಆಂಜನೇಯ ಮಾಹಿತಿ
ಚಿತ್ರದುರ್ಗ: ಬೆಂಗಳೂರಿನ ಅರಮನೆ ಮೈದಾನದಲ್ಲಿ ಜೂ. ೨೧ರಂದು ಕೆಪಿಸಿಸಿ ನೂತನ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರ ಪದ ಗ್ರಹಣ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಸಚಿವ ಎಚ್. ಆಂಜನೇಯ ಹೇಳಿದರು.
ನಗರದಲ್ಲಿ ಭಾನುವಾರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ನೂತನ ಸಿಎಂ ಡಿ.ಕೆ. ಶಿವಕುಮಾರ್ ಹರಿಪ್ರಸಾದ್ ಅವರಿಗೆ ಅಽ ಕಾರ ಹಸ್ತಾಂತರಿಸಲಿz್ದÁರೆ. ಜಿ¯್ಲೆಯಿಂದ ಪಕ್ಷದ ಐದು ಸಾವಿರ ಕಾರ್ಯಕರ್ತರು, ಮುಖಂಡರು, ಪದಾಽಕಾರಿಗಳು ಪಾಲ್ಗೊಳ್ಳಲಿದ್ದಾರೆ ಎಂದರು.
ಅAದಿನ ಸಮಾರಂಭಕ್ಕೆ ಪಕ್ಷದ ಯುವ ನೇತಾರ ರಾಹುಲï‌ಗಾಂಽ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ವೇಣುಗೋಪಾಲï, ಸುರ್ಜೆವಾಲ ಅವರನ್ನು ಆಹ್ವಾನಿಸಿದ್ದೇವೆ. ಇದೇ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಅಭಿನಂದಿಸಲಾಗುವುದು ಎಂದು ಹೇಳಿದರು.
ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿಗಳಿAದ ರಾಜ್ಯ ಹಸಿವು ಮುಕ್ತವಾಗಿದೆ. ಇದನ್ನು ಸಹಿಸದ ಬಿಜೆಪಿಗರು ರಾಜ್ಯ ದಿವಾಳಿ ಯಾಗಿದೆ ಎಂದು ಟೀಕಿಸುತ್ತಿರುವುದರಲ್ಲಿ ಅರ್ಥವಿಲ್ಲ. ಬಿಹಾರ ಸೇರಿ ಅನೇಕ ರಾಜ್ಯಗಳ ಸರ್ಕಾರಗಳು ನಮ್ಮ ಯೋಜನೆಗಳನ್ನು ಕಾಪಿ ಮಾಡಿ ಅಽಕಾರ ಪಡೆದಿವೆ ಎಂದು ತಿರುಗೇಟು ನೀಡಿದರು.
ಕಾಂಗ್ರೆಸ್ ನನ್ನನ್ನು ಕಡೆಗಣಿಸಿಲ್ಲ. ಆದರೀಗ ಆ ಕುರಿತು ಅನುಮಾನ ಕಾಡುತ್ತಿದೆ. ಒಳ ಮೀಸಲಾತಿಯಲ್ಲಿ ಲೋಪವಾಗಿದೆ. ಅದ ನ್ನು ಸರಿಪಡಿಸಿ ಮಾದಿಗ ಸಮುದಾಯಕ್ಕೆ ಸಾಮಾಜಿಕ ನ್ಯಾಯ ಒದಗಿಸುವಂತೆ ಹೋರಾಟ ನಡೆಸುತ್ತೇನೆ. ಪಕ್ಷಕ್ಕಾಗಿ ದುಡಿದ ವರಿಗೆ ಸೂಕ್ತ ಸ್ಥಾನಮಾನ ಕಲ್ಪಿಸುವಂತೆ ಒತ್ತಾಯಿಸಲು ಹೈಕಮಾಂಡ್ ಬಳಿಗೆ ಶೀಘ್ರದಲ್ಲೇ ನಿಯೋಗ ತೆರಳುವುದಾಗಿ ತಿಳಿಸಿ ದರು.
ಕೆಪಿಸಿಸಿ ಉಪಾಧ್ಯಕ್ಷ ಮುರಳೀಧರ ಹಾಲಪ್ಪ ಮಾತನಾಡಿ, ಕಾಂಗ್ರೆಸ್ ಕಟ್ಟಾಳು ಹರಿಪ್ರಸಾದ್ ಸಾಮಾನ್ಯ ಕಾರ್ಯಕರ್ತನಾಗಿ, ವಿದ್ಯಾರ್ಥಿ ನಾಯಕನಾಗಿ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರಾಗಿ, ೪ ಬಾರಿ ರಾಜ್ಯಸಭೆಗೆ ನೇಮಕಗೊಂಡಿದ್ದರು.
ಅವರೊಬ್ಬ ಸಂಘಟನಾ ಚತುರ. ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ಪಕ್ಷ ಸಂಘಟನೆಯಲ್ಲಿ ತೊಡಗಿz್ದÁರೆ. ಅವರ ನಾಯ ಕತ್ವ ಕಾರ್ಯಕರ್ತರಲ್ಲಿ ಉತ್ಸಾಹ ಮೂಡಿಸಿದೆ. ಮುಂಬರುವ ಎಲ್ಲ ಚುನಾವಣೆಗಳಲ್ಲೂ ಪಕ್ಷಕ್ಕೆ ಗೆಲುವು ಸಿಗುವ ವಿಶ್ವಾಸವಿದೆ ಎಂದರು.
ಪದಗ್ರಹಣಕ್ಕೆ ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ, ಬಳ್ಳಾರಿ ಸೇರಿ ನಾಡಿನ ವಿವಿಧೆಡೆಗಳಿಂದ ಕಾರ್ಯಕರ್ತ ರು ಹೆಚ್ಚಿನ ಸಂಖ್ಯೆಯಲ್ಲಿ ಬರುವ ನಿರೀಕ್ಷೆ ಇದೆ. ಈ ಜಿ¯್ಲÉಯ ಕಾಂಗ್ರೆಸ್ ಶಾಸಕರು ಜನರನ್ನು ಕರೆತರಬೇಕು. ಇದೊಂದು ಐತಿ ಹಾಸಿಕ ಕಾರ್ಯಕ್ರಮವಾಗಲಿದೆ. ಶಕ್ತಿ ಪ್ರದರ್ಶನಕ್ಕೂ ವೇದಿಕೆಯಾಗಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಜಿ¯್ಲÁಧ್ಯಕ್ಷ ಎಂ.ಕೆ. ತಾಜ್‌ಪೀರ್, ಶಾಸಕ ಕೆ.ಸಿ. ವೀರೇಂದ್ರಪಪ್ಪಿ, ಮಾಜಿ ಸಂಸದ ಬಿ.ಎನ್. ಚಂ ದ್ರಪ್ಪ, ವಿಧಾನಪರಿಷತ್ ಮಾಜಿ ಸದಸ್ಯೆ ಜಯಮ್ಮ ಬಾಲರಾಜ್, ಆದಿಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಎಸ್. ಮಂಜು ನಾಥ್, ಹಾಲಸ್ವಾಮಿ,ಜಿಪಂ ಮಾಜಿ ಸದಸ್ಯ ಆರ್. ನರಸಿಂಹರಾಜ, ಪ್ರಚಾರ ಸಮಿತಿ ಅಧ್ಯಕ್ಷ ಆರ್. ಕೃಷ್ಣಮೂರ್ತಿ, ಮುಖಂಡ ರಾದ ಅನ್ವರ್‌ಭಾಷಾ, ಆರ್. ಮಂಜುನಾಥ್, ಕೆ.ಪಿ. ಸಂಪತ್‌ಕುಮಾರ್, ಎನ್.ಡಿ. ಕುಮಾರ್, ಶಿವಣ್ಣ, ಭೂತೇಶ್, ಸಮರ್ಥ ರಾಯï, ಎಚ್. ಅಂಜಿನಪ್ಪ, ಮುನಿರಾ ಎ. ಮಕಾಂದಾರ್, ಚೇತನ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net