ಲೋಕಸಭಾ ಕ್ಷೇತ್ರದ ರಸ್ತೆ ಅಭಿವೃದ್ಧಿಗೆ ಸಿಆರ್‌ಐಎಫ್‌ನಿಂದ ೨೩ ಕೋಟಿ ರೂ.ಅನುದಾನ

ಸಂಸದ ಗೋವಿಂದ ಎಂ ಕಾರಜೋಳ
ಸಂಸದ ಗೋವಿಂದ ಎಂ ಕಾರಜೋಳ
Published on

ಪ್ರಮುಖ ಮುಖ್ಯಾಂಶಗಳು

  • ಕೇಂದ್ರ ಹೆದ್ದಾರಿ ಸಚಿವ ನಿತಿನ್‌ಗಡ್ಕರಿ ಮಂಜೂರು
  • ತಿAಗಳವೊಳಗೆ ಟೆಂಡರ್ ಪೂರ್ಣಗೊಳಿಸಲು ತಾಕೀತು
  • ಸಂಸದ ಗೋವಿಂದ ಎಂ.ಕಾರಜೋಳ ಹೇಳಿಕೆ
ಚಿತ್ರದುರ್ಗ: ಸಂಸದ ಗೋವಿಂದ ಎಂ ಕಾರಜೋಳ ಅವರ ಕೇಂದ್ರ ರಸ್ತೆ ಮತ್ತು ಮೂಲಸೌಲಭ್ಯ ನಿಽಯಿಂದ (ಸಿಆರ್‌ಐಎಫ್) ಚಿತ್ರದುರ್ಗ ಲೋಕಸಭಾ ಕ್ಷೇತ್ರದ ರಸ್ತೆಗಳ ಅಭಿವÊದ್ಧಿಗೆ ಕೇಂದ್ರದ ಹೆದ್ದಾರಿ ಸಚಿವಾಲಯ ೨೩ ಕೋಟಿ ರೂ.ಅನುದಾನ ಬಿಡುಗಡೆ ಮಾಡಿದೆ.
ಸದರಿ ರಸ್ತೆಗಳ ಅಭಿವೃದ್ಧಿ ಕಾಮಗಾರಿಗಳಿಗೆ ಇನ್ನೊಂದು ತಿಂಗಳವೊಳಗಾಗಿ ಟೆಂಡರ್ ಪ್ರಕ್ರಿಯೆ ಪೂರೈಸಿ ಕಾಮಗಾರಿ ಕೈಗೆತ್ತಿ ಕೊಳ್ಳಲು ಲೋಕೋಪಯೋ ಗಿ ಇಲಾಖೆ ಹೆದ್ದಾರಿ ವಿಭಾಗದ ಅಽಕಾರಿಗಳಿಗೆ ಸೂಚಿಸಲಾಗಿದೆ. ತಾವು ಮಾಡಿದ ಶಿ-Áರಸ್ಸಿನ ಮೇರೆಗೆ ಅನುದಾನ ಬಿಡುಗಡೆ ಮಾಡಿರುವ ಹೆದ್ದಾರಿ ಸಚಿವರಾದ ನಿತಿನ್ ಗಡ್ಕರಿ ಕೃತಜ್ಞತೆ ಸಲ್ಲಿಸುವುದಾಗಿ ಸಂಸದರು ತಿಳಿಸಿದ್ದಾರೆ.
ಅನುದಾನ ಮಂಜೂರಾಗಿರುವ ರಸ್ತೆಗಳ ವಿವರ
ಚಿತ್ರದುರ್ಗ ತಾಲೂಕಿನ ಜಾನುಕೊಂಡ-ಬುರುಜನರೊಪ ್ಪರಸ್ತೆಯಿಂದ ಅನ್ನೇಹಾಳ್‌ವಡ್ಡರಹಟ್ಟಿ ರಸ್ತೆಯ ಸೊನ್ನೆ ಕಿ.ಮಿ.ನಿಂದ ೧೦ ಕಿ. ಮೀ.ವರೆಗೆ ಆಯ್ದ ಭಾಗಗಳಲ್ಲಿ ಉಪ್ಪನಾಯಕನಹಳ್ಳಿ,ಓಬೇನಹಳ್ಳಿ,ನಂದೀಪುರ, ಸೊಂಡೇಕೊಳ, ಗೊಡಬನಾಳ್, ಮುಸಂಡಿಹಾಳ್ ಮಾ ರ್ಗ ಸಂಪರ್ಕಿಸುವ ರಸ್ತೆ ಅಭಿವÊದ್ಧಿಗೆ ೩ ಕೋಟಿ ರೂ.
ಚಳ್ಳಕೆರೆ ತಾಲೂಕಿನ ದೊಡ್ಡೇರಿಯಿಂದ (ರಾಜ್ಯಹೆದ್ದಾರಿ ೪೮)ಓಬೇನಹಳ್ಳಿ(ರಾಜ್ಯಹೆದ್ದಾರಿ ೨೪೩)ಗೆ ಸಂಪರ್ಕಿಸುವ ರಸ್ತೆಯ ಕಿ. ಮೀ.೩. ೬೦-೧೬ರವರೆಗೆ ಹಾಗೂ ಕಿ. ಮೀ.೧೭ರಿಂದ ಕಿ.ಮೀ.೩೬.೧೩ರವರೆಗೆ ಆಯ್ದಭಾಗಗಳಲ್ಲಿ ರೆಡ್ಡಿಹಳ್ಳಿ, ಗೋಪನಹಳ್ಳಿ, ಚಿಕ್ಕನಹಳ್ಳಿ,ಯಲಗಟ್ಟ, ಕೋನಿಹಾರ ಹಳ್ಳಿ,ಗೋಸಿಕೆರೆಕಾವಲ್,ಗೋಸಿಕೆರೆ ಚಿಕ್ಕಚೆಲ್ಲೂರು ಮಾರ್ಗವಾಗಿ ಸಂಪರ್ಕಿಸುವ ರಸ್ತೆಗೆ ೩ ಕೋಟಿ ರೂ.,ಮೊಳಕಾಲ್ಮೂರು ತಾಲೂಕಿನ ನಾಯಕನಹಟ್ಟಿಯಿಂದ (ರಾಜ್ಯಹೆದ್ದಾರಿ೪೫) ತೊರೆಕೋಲಮ್ಮನಹಳ್ಳಿ ಗೆ(ರಾಜ್ಯ ಹೆ ದ್ದಾರಿ ೬೫)ಗೆ ಸಂಪರ್ಕಿಸುವ ಸೊನ್ನೆ ಕಿ.ಮೀ.ದಿಂದ ೧೦.೫೦ರವರೆಗೆ ಗುಂತಕೋಲ್ಲಮ್ಮನಹಳ್ಳಿ ಮಾರ್ಗವಾಗಿ ಸಂಪರ್ಕಿಸುವ ರಸ್ತೆಗೆ ೩ ಕೋಟಿ ರೂ.
ಹಿರಿಯೂರು ತಾಲೂಕಿನ ಎಸ್‌ಎಚ್೨೪೩ರ ಕಿ.ಮೀ.೧೨೩ರಿಂದ ೧೪೨.೬೪ ರವರೆಗೆ,ಚಳ್ಳಕೆರೆ(ಎನ್‌ಎಚ್೧೫೦ಎ)ಯಿಂದ ವಿಶ್ವನಾಥನ ಹಳ್ಳಿ(ಎನ್‌ಎಚ್೪೮)ಗೆ ಸಂಪರ್ಕಿಸುವ ಪರಶುರಾಮ ದೇವರಕೋಟೆ, ಧರ್ಮಪುರ, ಸಕ್ಕರ, ದ್ವಾರನಕುಂಟೆ, ಕೋಡಿಹಳ್ಳಿ,ಇಕ್ಕನೂರು, ಪಿಟ್ಲಾಲಿ,ಆದಿವಾಲ,ಹಿರಿಯೂರು,ಲಕ್ಕವ್ವನಹಳ್ಳಿ,ದೊಡ್ಡಘಟ್ಟ,ಕುರುಬರಹಳ್ಳಿ,ಭರಮಗಿರಿಮಾರ್ಗಗಳಲ್ಲಿ ಆಯ್ದ ಭಾಗಗಳ ಅಭಿವÊದ್ಧಿಗೆ ೩ ಕೋಟಿ ರೂ.
ಹೊಸದುರ್ಗ ತಾಲೂಕಿನಲ್ಲಿ ರಾಜ್ಯಹೆದ್ದಾರಿ ೨೨೦ರ ಕಿ.ಮಿ.೩೬೯ ಶಿವಗಂಗಾದಿAದ ಎನ್‌ಎಚ್೧೫೦ ಎ ಅಮ್ಮನಹಟ್ಟಿ ರಸ್ತೆ ಕಿ.ಮೀ. ೪೩. ೫೬ರಿಂದ ೫೩.೫೬ರವರೆಗೆ ಮದ್ದೇರು, ತಾಳ್ಯ ಕುಮ್ಮಿನ ಗಟ್ಟ, ಜಾನಕಲ್‌ಹೊಸದುರ್ಗ (ಎಸ್‌ಎಚ್೨೪), ಹಾಗಲಕೆರೆ(ಎಸ್‌ಎಚ್೪೭),ಮತ್ತೋ ಡು,ವಡ್ಡರಹಟ್ಟಿ,ಕಿಟ್ಟದ ಹಳ್ಳಿ,ಚಿಕ್ಕಬ್ಯಾಲದಕೆರೆಮಾರ್ಗಗಳನ್ನು ಸಂಪರ್ಕಿಸುವ ರಸ್ತೆ ಅಭಿವÊದ್ಧಿಗೆ ೩ಕೋಟಿ ರೂ.
ಹೊಳಲ್ಕೆರೆ ತಾಲೂಕಿನ ಕಡೂರು-ಹಿರೇನಲ್ಲೂರು-ಅಜ್ಜಂಪುರ-ಯರಗನಹಳ್ಳಿ ರಸ್ತೆ ಕಿ.ಮೀ.೩೧ರಿಂದ ೩೩.೬೦ ಕಿ.ಮೀ ೩೪.೫೦ರಿಂದ ೩೫.೧೦, ಕಿ.ಮೀ.೩೫.೯೦ ರಿಂದ ೩೭.೫೨ರವರೆಗೆ ಎಸ್‌ಎಚ್ ೨೦೬ರಿಂದ ಎಸ್೧೫೩ಅನ್ನು ಸಂಪರ್ಕಿಸುವ ರಸ್ತೆ ಅಭಿವÊದ್ಧಿಗೆ ೩ ಕೋಟಿ ರೂ.
ಸಿರಾ ತಾಲೂಕಿನ ಪಟ್ಟನಾಯಕನಹಳ್ಳಿ,ಬರಗೂರು,ಹಾರೋಗೆರೆ ಮುಖÁಂತರ ಎಸ್‌ಎಚ್ ೪೮ರಿಂದ ಆಂಧ್ರಪ್ರದೇಶಗಡಿಗೆ ಸಂಪರ್ಕಿಸುವ ಎಂಡಿ ರಸ್ತೆಯ ಕಿ.ಮೀ.೫೭.೭೦ರಿಂದ ೬೪ರವರೆಗೆ ರಸ್ತೆ ಅಭಿವÊದ್ಧಿಗೆ ೨.೫೦ ಕೋಟಿ ರೂ. ಪಾವಗಡ ತಾಲೂ ಕಿನ ವಿರುಪಸಮುದ್ರ ಗ್ರಾಮದಲ್ಲಿ ಆಂಧ್ರಪ್ರದೇಶ ಗಡಿಯಿAದ ಎನ್‌ಎಚ್೭೩ನ್ನು ಸಂಪರ್ಕಿಸುವ ಎಸ್‌ಎಚ್೧೮೪ರ ಕಿ.ಮೀ. ೧೬೧.೪೦ರಿಂದ ೧೬೬ರವರೆಗೆ ರಸ್ತೆ ಅಭಿವÊದ್ಧಿಗೆ ೨.೫೦ ಕೋಟಿ ರೂ.ಅನುದಾನ ಬಿಡುಗಡೆ ಆಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net