

ಪ್ರಮುಖ ಮುಖ್ಯಾಂಶಗಳು
ಚಳ್ಳಕೆರೆ:ತಾಲ್ಲೂಕಿನರೇಣುಕಾಪುರ ಸರ್ಕಾರಿ ಹಿರಿಯಪ್ರಾಥಮಿಕ ಶಾಲೆಯನ್ನು ಮಾದರಿ ಶಾಲೆಯನ್ನಾಗಿರೂಪಿಸಲು ಎಲ್ಲರೂ ಒಗ್ಗಟ್ಟಿನಿಂದಶ್ರಮಿಸಬೇಕು ಎಂದು ಗ್ರಾಮೀಣಕುಡಿಯುವ ನೀರು ಮತ್ತು ನೈರ್ಮಲ್ಯಇಲಾಖೆ ಕಾರ್ಯದರ್ಶಿ ಜಾಫರ್ಷರೀಫ್ ಸುತಾರ್ ಅವರು ಕರೆನೀಡಿದರು.
ರೇಣುಕಾಪುರ ಗ್ರಾಮವುಮಕ್ಕಳಸ್ನೇಹಿ ಗ್ರಾಮ ಪಂಚಾಯಿತಿಅಭಿಯಾನದ ಅಡಿಯಲ್ಲಿ 'ಕಾಯಕಗ್ರಾಮ'ವಾಗಿಆಯ್ಕೆಯಾಗಿದೆ.ಈ ಹಿನ್ನೆಲೆಯಲ್ಲಿ,ಶಾಲಾ ಆವರಣದಲ್ಲಿಶುಕ್ರವಾರ ಆಯೋಜಿಸಲಾಗಿದ್ದಮಕ್ಕಳ ವಿಶೇಷ ಗ್ರಾಮ ಸಭೆಯಲ್ಲಿಅವರು ಮಾತನಾಡಿದರು.
ಮಕ್ಕಳ ಹಕ್ಕುಗಳರಕ್ಷಣೆ ಮತ್ತು ಅವರ ಧ್ವನಿಯನ್ನುಆಲಿಸಲು ಮಹತ್ವ ನೀಡಬೇಕು.ಈ ನಿಟ್ಟಿನಲ್ಲಿ,ನವೆಂಬರ್ 14ರಿಂದ ಮುಂದಿನಜನವರಿ 24 ರವರೆಗೂ10 ವಾರಗಳಕಾಲ ಗ್ರಾಮ ಪಂಚಾಯಿತಿಗಳಲ್ಲಿಮಕ್ಕಳ ವಿಶೇಷ ಗ್ರಾಮ ಸಭೆಗಳನ್ನುಆಯೋಜಿಸಬೇಕು ಎಂದು ಜಾಫರ್ ಷರೀಫ್ಸುತಾರ್ ಅವರು ಸೂಚಿಸಿದರು.
ಈ ವಿಶೇಷ ಸಭೆಯಲ್ಲಿಗ್ರಾಮೀಣ ಮತ್ತು ಕುಡಿಯುವ ನೀರು,ನೈರ್ಮಲ್ಯ ವಿಭಾಗದರಾಜ್ಯ ಸಮಾಲೋಚಕ ಆನಂದ್,ರೇಣುಕಾಪುರಗ್ರಾ.ಪಂ.ಅಧ್ಯಕ್ಷ ಜಾನಜ್ಜ,ಉಪಾಧ್ಯಕ್ಷೆಮಂಜಮ್ಮ, ಸದಸ್ಯರಾದದೇವಿರಮ್ಮ,ಪಾಲಕ್ಕ,ನರಸಿಂಹಪ್ಪ,ವೆಂಕಟೇಶ್ಸೇರಿದಂತೆ ಪಿಡಿಒ ಬಿ.ಸಿ.ಶಶಿರಾಜ್ಮತ್ತು ಹಲವು ಗ್ರಾಮ ಪಂಚಾಯಿತಿಅಧಿಕಾರಿಗಳು,ಶಾಲಾ ಮುಖ್ಯಶಿಕ್ಷಕಮಂಜಣ್ಣ ಹಾಗೂ ಶಿಕ್ಷಕ ವೃಂದದವರು ಭಾಗವಹಿಸಿದ್ದರು.
ಇದಕ್ಕೂ ಮುನ್ನ,ಚಳ್ಳಕೆರೆತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿಕಾರ್ಯದರ್ಶಿ ಜಾಫರ್ ಷರೀಫ್ ಸುತಾರ್ಅವರ ಅಧ್ಯಕ್ಷತೆಯಲ್ಲಿ ಮಹತ್ವದಪ್ರಗತಿ ಪರಿಶೀಲನಾ ಸಭೆ ನಡೆಯಿತು.ಈ ಸಭೆಯಲ್ಲಿಜಲಜೀವನ್ ಮಿಷನ್ (JJM)ಯೋಜನೆ ಹಾಗೂಕೆಎಸ್‌ಆರ್‌ಎಸ್‌ಡಬ್ಲ್ಯೂಎಸ್‌ಪಿ(KSRSWSP)ಕಾರ್ಯಕ್ರಮಗಳಪ್ರಗತಿಯನ್ನು ಪರಿಶೀಲಿಸಲಾಯಿತು.ಗ್ರಾಮೀಣ ಕುಡಿಯುವನೀರು ಮತ್ತು ನೈರ್ಮಲ್ಯ ಇಲಾಖೆಇಇ ಅಮರನಾಥ್ ಜೈನ್ ಸೇರಿದಂತೆಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಅಧಿಕಾರಿಗಳು ಉಪಸ್ಥಿತರಿದ್ದರು.