ಸಾಹುಕಾರ್ ಸಿಎಂ ಪದವಿ ಕೇಳಬೇಕು

UT khader
Published on

ಚಿತ್ರದುರ್ಗ: ರಮೇಶ್ ಜಾರಕಿಹೊಳಿ ಇಂತದ್ದೇ ಖಾತೆಗೆ ಪಟ್ಟು ಹಿಡಿಯುವುದಕ್ಕಿಂತ ಮುಖ್ಯಮಂತ್ರಿ ಪದವಿಯನ್ನೇ ಪಡೆಯಬೇಕೆಂದು ಮಾಜಿ ಸಚಿವ ಯು.ಟಿ.ಖಾದರ್ ವ್ಯಂಗ್ಯದ ದನಿಯಲ್ಲಿ ಸಲಹೆ ನೀಡಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸೇರಿದ್ದರಿಂದಲೇ ಎಂಟಿಬಿ ನಾಗರಾಜ್, ಎಚ್.ವಿಶ್ವನಾಥ್ ಸೋತರು. ಕಾಂಗ್ರೆಸ್ ಎಲ್ಲರನ್ನೂ ಒಳ್ಳಗೊಳ್ಳುವ ಪಕ್ಷವೇ ಹೊರತು, ಪಕ್ಷಕ್ಕಾಗಿ ದುಡಿದವರನ್ನು ಬಿಜೆಪಿಯಂತೆ ಕಡೆಗಣಿಸದು. ಲಾಲ್‌ಕೃಷ್ಣ ಆಡ್ವಾಣಿ ಅವರಂಥ ಹಿರಿಯ ನಾಯಕರಿಗೆ ಟಿಕೆಟ್ ಕೊಡದೆ ಬಿಜೆಪಿ ಅವಮಾನಿಸಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net