28ಕ್ಕೆ ದುರ್ಗದಲ್ಲಿ ಯುವ ಚಿಂತನೆ

KALDAK PRABAKAR BHAT rss
Published on

ಚಿತ್ರದುರ್ಗ: ಸ್ವಾಮಿ ವಿವೇಕಾನಂದ ಜಯಂತಿ ಅಂಗವಾಗಿ ನಗರದ ಹಳೇ ಮಾಧ್ಯಮಿಕ ಶಾಲಾ ಆವರಣದಲ್ಲಿ 28ಕ್ಕೆ ಯುವ ಚಿಂತನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಎಬಿವಿಪಿ ನಗರ ಸಂಚಾಲಕ ಸತೀಶ್ ಭಗತ್ ತಿಳಿಸಿದರು.

ಸಭೆ ಉದ್ದೇಶಿಸಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ದಕ್ಷಿಣ ಮಧ್ಯ ಕ್ಷೇತ್ರೀಯ ಕಾರ್ಯಕಾರಿಣಿ ಸದಸ್ಯ ಡಾ.ಪ್ರಭಾಕರ್ ಕಲ್ಲಡ್ಕ ವಿಶೇಷ ಭಾಷಣ ಮಾಡಲಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಅಂದು ಚೈತನ್ಯ ವೃತ್ತದಿಂದ ಹಾಗೂ ಕೋಟೆ ರಸ್ತೆ ಉಚ್ಚಂಗಿಯಲ್ಲಮ್ಮ ದೇವಾಲಯದಿಂದ ಆರಂಭವಾಗುವ ವಿದ್ಯಾರ್ಥಿಗಳ ಮೆರವಣಿಗೆ ಒನಕೆ ಓಬವ್ವ ವೃತ್ತದಲ್ಲಿ ಒಗ್ಗೂಡಿ ಹಳೇ ಮಾಧ್ಯಮಿಕ ಶಾಲಾ ಆವರಣ ಸೇರಲಿವೆ ಎಂದರು.

ಪರಿಷತ್ ಪ್ರಮುಖ ಕಾರ್ತಿಕ್ ಮಾತನಾಡಿ, ಸಿಎಎ ಸೇರಿ ಪ್ರಸ್ತುತ ವಿದ್ಯಾಮಾನಗಳ ಕುರಿತು ಕಲ್ಲಡ್ಕ ಮಾತನಾಡಲಿದ್ದಾರೆ ಎಂದು ಹೇಳಿದರು.

ಪರಿಷತ್ ಜಿಲ್ಲಾ ಹಾಗೂ ನಗರ ಪ್ರಮುಖರಾದ ಚಂದ್ರಶೇಖರ್, ನರಸಮ್ಮ, ಕೃತಿಕಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net