

ಚಿತ್ರದುರ್ಗ: ವರ್ಷದ ಮೊದಲ ಸೂರ್ಯ ಗ್ರಹಣವನ್ನು ಭಾನುವಾರ ನೂರಾರು ವೈಚಾರಿಕ ಮನಸ್ಸುಗಳು ಕಣ್ತುಂಬಿಕೊಂಡವು.
ನಭೋಮಂಡಲದ ಕೌತುಕ ಕ್ಷಣ ವೀಕ್ಷಣೆಗೆ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಮತ್ತು ವಿಜ್ಞಾನ ಕೇಂದ್ರ, ಮುರುಘಾ ಮಠದಲ್ಲಿ ವ್ಯವಸ್ಥೆ ಮಾಡಲಾಗಿತ್ತು.
ಚಿತ್ರದುರ್ಗ ನಗರದ ವಿಜ್ಞಾನ ಕಾಲೇಜು ಆವರಣದಲ್ಲಿ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳು ಸಾಮೂಹಿಕವಾಗಿ ಸೂರ್ಯ ಗ್ರಹಣ ವೀಕ್ಷಣೆ ಮಾಡಿದರು.
ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾಧ್ಯಕ್ಷ ಡಾ.ಎಚ್.ಕೆ.ಸ್ವಾಮಿ, ಭೌತಶಾಸ್ತ್ರ ಪ್ರಾಧ್ಯಾಪಕ ಡಾ.ಕೆ.ಕೆ.ಕಾಮಾನಿ, ಸಮಿತಿ ಕಾರ್ಯದರ್ಶಿ ಮಹಾಂತೇಶ್, ನವೀನ್ ಪಿ.ಆಚಾರ್ ಮತ್ತಿತರರು ಇದ್ದರು.