ಮಹಿಳಾ ದಿನಾಚರಣೆ ಅಂಗವಾಗಿ ನಾಳೆ ಜಾಥಾ

PRESSMEET
Published on

ಚಿತ್ರದುರ್ಗ: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ವಿವಿಧ ಮಹಿಳಾ ಸಂಘಟನೆಗಳ ಆಶ್ರಯದಲ್ಲಿ ನಗರದಲ್ಲಿ ಮಾ.8ರಂದು ಕಾಲ್ನಡಿಗೆ ಜಾಥಾ ಮತ್ತು ಬೈಕ್ ರ‌್ಯಾಲಿ ಆಯೋಜಿಸಲಾಗಿದೆ ಎಂದು ಧರಣಿ ಸಂಸ್ಥೆ ಕಾರ್ಯ ದರ್ಶಿ ಎನ್.ರಮಾ ನಾಗರಾಜ್ ಹೇಳಿದರು.

ಅಂದು ಬೆಳಗ್ಗೆ 7.15ಕ್ಕೆ ನೀಲಕಂಠೇಶ್ವರ ದೇವಾಲಯದಿಂದ ಆರಂಭವಾ ಗುವ ಜಾಥಾಕ್ಕೆ ಡಿಸಿ ಆರ್.ವಿನೋತ್ ಪ್ರಿಯಾ, ಎಸ್ಪಿ ಜಿ.ರಾಧಿಕಾ ಚಾಲನೆ ನೀಡುವರು ಎಂದು ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ತಿಳಿಸಿದರು.

ದೇಸಿ ಉಡುಗೆಯೊಂದಿಗೆ ನೂರಾರು ಮಹಿಳೆಯರು ಭಾಗವಹಿಸಲಿದ್ದಾರೆ ಮಹಿಳೆಯರ ದೌರ್ಜನ್ಯಗಳೆಡೆ ಜಾಗೃತಿ ಮೂಡಿಸುವುದು ಜಾಥಾದ ಉದ್ದೇಶ ಎಂದರು.

ಮಧು ಕೊಠಾರಿ ಮಾತನಾಡಿ, ಮೊಬೈಲ್ ಬಳಕೆಯಿಂದ ದೂರುವುಳಿಯುವುದು ಇಂದು ಸವಾಲಿನ ಕೆಲಸವಾಗಿದ್ದು, ಮೊಬೈಲ್ ಬಳಕೆ ನಿಯಂತ್ರಣ ನಿಟ್ಟಿನಲ್ಲಿ ಜಾಗೃತಿಯ ಅಗತ್ಯವಿದೆ ಎಂದು ಹೇಳಿದರು.

ವಿವಿಧ ಸಂಘಟನೆ ಪ್ರಮುಖರಾದ ರೀನಾ ವೀರಭದ್ರಪ್ಪ, ಕವಿತಾ ಬಾಪ್ನಾ, ಸುಧಾ ನಾಗರಾಜ್, ಸುಮನ್, ಅಲಿಶಾ ಸುಭಾನ್, ಶೋಭಾ ಶ್ರೀನಿವಾಸ್, ವಿಜಯಲಕ್ಷ್ಮಿ, ಸುನಿತಾ ಗುಪ್ತ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net