ಹೆಣ್ಮಕ್ಕಳ ಮೇಲಿನ ದೌರ್ಜನ್ಯಕ್ಕೆ ತಡೆ ನನ್ನ ಆದ್ಯತೆ

CTD 1 SP
Published on

ಚಿತ್ರದುರ್ಗ: ಮಹಿಳಾ ಅಧಿಕಾರಿಯಾಗಿ ಮಹಿಳೆ, ಮಕ್ಕಳ ಮೇಲಿನ ದೌರ್ಜನ್ಯಗಳ ನಿಯಂತ್ರಣ ನನ್ನ ಪ್ರಥಮ ಆದ್ಯತೆ ಎಂದು ಜಿಲ್ಲಾ ರಕ್ಷಣಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ಜಿ.ರಾಧಿಕಾ ಹೇಳಿದರು.

ಬೆಂಗಳೂರಿಗೆ ವರ್ಗಾವಾಗಿರುವ ಡಾ.ಕೆ.ಅರುಣ್ ಅವರಿಂದ ಶನಿವಾರ ಅಧಿಕಾರ ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಅಪರಾಧಗಳ ಸಂಖ್ಯೆ ಕಡಿತಗೊಳಿಸಲು ಶ್ರಮಿಸುತ್ತೇನೆ ಎಂದು ತಿಳಿಸಿದರು.

ಯಾವುದೇ ಪಕ್ಷ, ಮತ ಪಂಥಗಳೆನ್ನದೇ ನಿಷ್ಪಕ್ಷಪಾತವಾಗಿ ಕೆಲಸ ಮಾಡುತ್ತೇನೆ. ಅಪಘಾತಗಳ ಸಂಖ್ಯೆ ಕಡಿತಕ್ಕೆ ಕ್ರಮ ತೆಗೆದುಕೊಳ್ಳುತ್ತೇನೆ. ಟ್ರಾಫಿಕ್ ವ್ಯವಸ್ಥೆ ಸುಧಾರಣೆಗೆ ಪ್ರಯತ್ನಿಸುವುದಾಗಿ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net