ಕಾಂಕ್ರಿಟ್ ವಾಲ್ ಬಿದ್ದು ಮಹಿಳೆ ಸಾವು

Death 5 May 20
Published on

ಚಿತ್ರದುರ್ಗ: ತಾಲೂಕಿನ ಮದಕರಿಪುರ ಸಮೀಪದ ರಾ.ಹೆ.ಸೇತುವೆ ನಿರ್ಮಾಣ ಕಾಮಗಾರಿ ವೇಳೆ ಮಂಗಳವಾರ ಬೆಳಗ್ಗೆ ಕಾಂಕ್ರಿಟ್‌ವಾಲ್ ಬಿದ್ದು ಮಹಿಳೆಯೊಬ್ಬರು ಅಸು ನೀಗಿದ್ದಾರೆ. ಮೃತರನ್ನು ಚಳ್ಳಕೆರೆ ತಾಲೂಕು ಎನ್.ಉಪ್ಪಾರಹಟ್ಟಿ ಚಿನ್ನಪಾಲಮ್ಮ(28)ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಇಂಜಿನಿಯರ್ ಸಿದ್ದೇಶ್ ಗಾಯಗೊಂಡಿದ್ದಾರೆ. ಕಾಮಗಾರಿ ವೇಳೆ ವೈಬ್ರೇಟರ್(ರೋಲರ್)ಕಾಂಕ್ರಿಟ್ ವಾಲ್‌ಗಳಿಗೆ ಡಿಕ್ಕಿ ಹೊಡೆದಿದ್ದು ದುರ್ಘಟನೆಗೆ ಕಾರಣ ಎಂದು ಪ್ರಕರಣ ದಾಖಲಿಸಿರುವ ಗ್ರಾಮಾಂತರ ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net