

ಚಿತ್ರದುರ್ಗ: ಋತುಸ್ರಾವ ಸಮಯದಲ್ಲಿ ನಿರ್ಲಕ್ಷ್ಯವಹಿಸದೆ, ನೈರ್ಮಲ್ಯವನ್ನು ಕಾಪಾಡಿಕೊಳ್ಳಲು ಹೆಚ್ಚಿನ ಆದ್ಯತೆ ನೀಡಬೇಕೆಂದು ಜಿಪಂ ಸಿಇಒ ಎಸ್.ಹೊನ್ನಾಂಬಾ, ಮಹಿಳೆಯರು ಮತ್ತು ಕಿಶೋರಿಯರಿಗೆ ಕಿವಿಮಾತು ಹೇಳಿದರು.
ತಿಪ್ಪಾರೆಡ್ಡಿ ನಗರದ ಸರ್ಕಾರಿ ಶಾಲಾ ಆವರಣದಲ್ಲಿ ಆರೋಗ್ಯಇಲಾಖೆ ಬುಧವಾರ ಹಮ್ಮಿಕೊಂಡಿದ್ದ ಋತುಚಕ್ರ ನೈರ್ಮಲ್ಯ ಸಪ್ತಾಹದಲ್ಲಿ ಮಾತನಾಡಿದರು.
ಮಹಿಳೆಯರ ಆರೋಗ್ಯ ಜಾಗೃತಿ ನಿಟ್ಟಿನಲ್ಲಿ ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಮೇ28ರಿಂದ ಜೂ.3ರ ವರೆಗೆ ರಾಜ್ಯದಾದ್ಯಂತ ಈ ಸಪ್ತಾಹವನ್ನು ಆಚರಿಸಲಾಗುತ್ತಿದೆ ಎಂದರು.
ಡಿಎಚ್‌ಒ ಡಾ.ಸಿ.ಎಲ್.ಪಾಲಾಕ್ಷ ಮಾತನಾಡಿ, 10ರಿಂದ 19 ವರ್ಷ ವಯಸ್ಸಿನ ಹದಿಹರೆಯದವರ ಸಮಸ್ಯೆಗಳಿಗೆ ಪರಿಹಾರ ಸೂಚಿಸಲು ಪ್ರತಿ ಗುರುವಾರ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ‘ಸ್ನೇಹ ಕ್ಲಿನಿಕ್’ ಹೆಸರಿನಲ್ಲಿ ಆಪ್ತ ಸಮಾಲೋಚನೆ ಮಾಡಲಾಗುತ್ತಿದೆ ಎಂದರು.
ಜಿಪಂ ಯೋಜನಾ ನಿರ್ದೇಶಕ ಮುಬಿನ್, ತಾಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ.ಗಿರೀಶ್, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ್, ಸ್ವಚ್ಛಭಾರತ್ ಅಭಿಯಾನ ಸಮಾಲೋಚಕಿ ಪ್ರಮೀಳಾ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಶಬಾನಾ, ಪೂರ್ಣಿಮಾ, ಆರೋಗ್ಯ ಇಲಾಖೆ ಸಿಬ್ಬಂದಿ ಮೂಗಪ್ಪ, ಹನುಮಂತಪ್ಪ, ಶಾಂತಮ್ಮ ಮತ್ತಿತರರು ಇದ್ದರು.