ನೀರು ಪೂರೈಕೆಯಲ್ಲಿ ವ್ಯತ್ಯಯ

HANUMANTHARAJU CTD LOUD SPREAKER
Published on

ಚಿತ್ರದುರ್ಗ: ಶಾಂತಿಸಾಗರದಿಂದ ಕುಡಿಯುವ ನೀರು ಪೂರೈಸುವ ಪಂಪ್ ದುರಸ್ತಿಯ ಹಿನ್ನೆಲೆಯಲ್ಲಿ ಚಿತ್ರದುರ್ಗಕ್ಕೆ ಏಪ್ರಿಲ್ 2ರ ವರೆಗೆ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.

ಶಾಂತಿಸಾಗರ ನೀರು ಸರಬರಾಜು ಯೋಜನೆಯ ಕೊಟ್ಟಿಗೆಹಳ್ಳಿ ಮಧ್ಯಂತರ ಘಟಕದಲ್ಲಿ ಪಂಪ್ ದುರಸ್ತಿ ನಡೆಯುತ್ತಿದೆ. ಆದ್ದರಿಂದ ನಾಗರಿಕರು ನೀರಿನ ಮಿತ ಬಳಕೆ ಮೂಲಕ ನಗರಸಭೆಯೊಂದಿಗೆ ಸಹಕರಿಸಬೇಕು ಎಂದು ಪೌರಾಯುಕ್ತ ಜೆ.ಟಿ.ಹನುಮಂತರಾಜು ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net