

ಚಿತ್ರದುರ್ಗ: ವಿಶ್ವಕರ್ಮ ಸಮಾಜದಿಂದ ನಗರದ ಬುರುಜನಹಟ್ಟಿ ರಸ್ತೆ ವಿಶ್ವಕರ್ಮ ಕಾಳಿಕಾಂಬ ಕಲ್ಯಾಣ ಮಂಟಪದಲ್ಲಿ ಮಾ.15ರಂದು ಸಾಮೂಹಿಕ ಉಪನಯನ, ಜಕಣಾಚಾರ್ಯ ಸಂಸ್ಮರಣಾ ದಿನಾಚರಣೆ, ಪ್ರಶಸ್ತಿ ಪ್ರದಾನ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭ ಏರ್ಪಡಿಸಿರುವುದಾಗಿ ಶಂಕರಾತ್ಮಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರಥಮ ಬಾರಿಗೆ ಈ ಕಾರ್ಯಕ್ರಮ ಚಿತ್ರದುರ್ಗದಲ್ಲಿ ನಡೆಯುತ್ತಿದೆ ಎಂದರು.
ಶಿವಸುಜ್ಞಾನ ತೀರ್ಥ ಸ್ವಾಮೀಜಿ ಮಾತನಾಡಿ, ವೈದಿಕ ಪರಂಪರೆಯಲ್ಲಿ ಸಾಮೂಹಿಕ ಉಪನಯನ ಪ್ರಾಚೀನ ಸನಾನತ ಧರ್ಮದಿಂದ ಬಂದಿದೆ. 8 ವರ್ಷದೊಳಗಿನ ಮಗುವಿಗೆ ಉಪನಯನ ಮಾಡುವುದರಿಂದ ಸಂಸ್ಕಾರವಂತರಾಗಿ ಜ್ಞಾನಶಕ್ತಿ, ಇಚ್ಚಾಶಕ್ತಿಯನ್ನು ವೃದ್ಧಿಸಿಕೊಳ್ಳಲು ಸಹಕಾರಿಯಾಗಲಿದೆ. ಸಮಾಜದ ಸಮಸ್ತರು ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.
ವಿಶ್ವಕರ್ಮ ಸಮಾಜದ ಅಧ್ಯಕ್ಷ ಎಂ.ಶಂಕರಮೂರ್ತಿ, ಮುಖಂಡರಾದ ಎ.ಶಂಕರಾಚಾರ್, ವಿ.ಗಂಗಾಧರಾಚಾರ್, ಎಸ್.ಕೃಷ್ಣಾಚಾರ್, ಕೆ.ಮೃತ್ಯುಂಜಯಾಚಾರ್, ಎಚ್.ಪಿ.ರಾಜೇಂದ್ರಾಚಾರ್, ಕಾರ್ಯಕಾರಿ ಮಂಡಳಿ ಅಧ್ಯಕ್ಷ ಎಂ.ಶಂಕರಮೂರ್ತಿ, ಎಲ್.ಶ್ರೀನಿವಾಸಾಚಾರ್, ಸಿ.ಶ್ಯಾಂಪ್ರಸಾದ್, ಎನ್.ಸತ್ಯನಾರಾಯಣಾಚಾರ್, ಕೆ.ಕೊಂಡಾಚಾರ್ ಉಪಸ್ಥಿತರಿದ್ದರು.