ಶ್ರೀಕೃಷ್ಣ ಫೋಟೋ ಸ್ಪರ್ಧೆ ಅವಧಿ ವಿಸ್ತರಣೆ; ಭಾವಚಿತ್ರ ಕಳುಹಿಸಲು ಆ.30 ಕೊನೇ ದಿನ

Chitradurga Vijayavani Srikrishna Janmashtami Photo Contest
Published on

ಚಿತ್ರದುರ್ಗ: ಕನ್ನಡದ ನಂ.1 ದಿನಪತ್ರಿಕೆ ವಿಜಯವಾಣಿ ಹಾಗೂ ದಿಗ್ವಿಜಯ ಸುದ್ದಿವಾಹಿನಿ ಶ್ರೀ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಏರ್ಪಡಿಸಿರುವ ಕೃಷ್ಣ ವೇಷ-ಭೂಷಣ ಫೋಟೋ ಸ್ಪಧೆಯ ಅವಧಿ ವಿಸ್ತರಿಸಲಾಗಿದೆ.

ಹತ್ತು ವರ್ಷದೊಳಗಿನ ಕೃಷ್ಣ ವೇಷಧಾರಿ ಮಕ್ಕಳ 6*9 ಅಥವಾ 6*4 ಇಂಚು ಅಳತೆಯ ಭಾವಚಿತ್ರಗಳನ್ನು ಆ.30 ರೊಳಗೆ ಕಳುಹಿಸಬಹುದು. ಮೊಬೈಲ್‌ನಲ್ಲಿ ತೆಗೆದ, ವ್ಯಾಟ್ಸ್ ಆ್ಯಪ್‌ನಲ್ಲಿ ಕಳಿಸಿದ, ಎಡಿಟಿಂಗ್ ಆದ ಅಥವಾ ಈ ಹಿಂದೆ ತೆಗೆದ ಫೋಟೋಗಳನ್ನು ಸ್ಪರ್ಧೆಗೆ ಪರಿಗಣಿಸುವುದಿಲ್ಲ. ಭಾವಚಿತ್ರದ ಹಿಂದೆ ಮಗುವಿನ ಹೆಸರು, ಜನ್ಮ ದಿನಾಂಕ, ಊರು, ವಿಳಾಸ, ಶಾಲೆ ಹೆಸರು ಹಾಗೂ ತರಗತಿಯನ್ನು ತಪ್ಪದೇ ನಮೂದಿಸಬೇಕು. ಇದರೊಂದಿಗೆ ಜನ್ಮ ದಿನಾಂಕದ ದಾಖಲೆಯ ನಕಲು ಲಗತ್ತಿಸಿರಬೇಕು.

ಬಹುಮಾನ

  • ಮೊದಲ ಬಹುಮಾನ ಒಂದು ಗ್ರಾಂ ಚಿನ್ನದ ನಾಣ್ಯ
  • ದ್ವಿತೀಯ ಬಹುಮಾನ 15 ಗ್ರಾಂ.ಬೆಳ್ಳಿ ನಾಣ್ಯ,
  • ತೃತೀಯ ಬಹುಮಾನ 10 ಗ್ರಾಂ ಬೆಳ್ಳಿಯ ನಾಣ್ಯ
  • 15 ಸಮಾಧಾನಕರ ಬಹುಮಾನ

ಸ್ಪರ್ಧೆಯ ಪ್ರಯೋಜನಕರು

ವಿಜಯವಾಣಿ ಪತ್ರಿಕೆ, ದಿಗ್ವಿಜಯ ವಾಹಿನಿ ಆಯೋಜಿಸಿರುವ ಈ ಸ್ಪರ್ಧೆಗೆ ನಗರದ ಶ್ರೀ ಅಹೋಬಲ ಟಿವಿಎಸ್‌ನ ಪ್ರಾಯೋಜಕತ್ವ ಮತ್ತು ಎಸ್‌ಇಎ ಗ್ರೂಪ್ ಆಫ್ ಇನ್ಸ್ ಟಿಟ್ಯೂಷನ್ ಸಹ ಪ್ರಾಯೋಜಕತ್ವ ಇದೆ.

ಕಳುಹಿಸಬೇಕಾದ ವಿಳಾಸ

ವಿಜಯವಾಣಿ, ವಿಆರ್‌ಎಲ್ ಮೀಡಿಯಾ ಪ್ರೈ.ಲಿಮಿಟೆಡ್, ರೆಡ್ಡಿ ಜನಸಂಘ ಬಿಲ್ಡಿಂಗ್, ಬಿಡಿ ರಸ್ತೆ, ಚಿತ್ರದುರ್ಗ. ಮಾಹಿತಿಗೆ 8884432304, 8884431945 ಗೆ ಸಂಪರ್ಕಿಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net