

ಚಿತ್ರದುರ್ಗ: ವಿದ್ಯಾನಗರ ಕ್ಷೇಮಾಭಿವೃದ್ಧಿ ಸಂಘದ ಮನವಿ ಮೇರೆಗೆ ವಿದ್ಯಾನಗರ ಬಡಾವಣೆ ಹಾಗೂ ಸುತ್ತಲಿನ ಕೆಲವು ಪ್ರದೇಶಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಿರುವ ಮೆದೇಹಳ್ಳಿ ಗ್ರಾಪಂ ಅಧಿಕಾರಿ, ಸಿಬ್ಬಂದಿಗೆ ಸಂಘದ ಪ್ರಮುಖರು ಕೃತಜ್ಞತೆ ಸಲ್ಲಿಸಿದ್ದಾರೆ.
ಕರೊನಾ ಸೋಂಕು ಹಿನ್ನ್ನೆಲೆಯಲ್ಲಿ ಬಡಾವಣೆಯಲ್ಲಿ ಚರಂಡಿ ಸ್ವಚ್ಛತೆ, ಕ್ರಿಮಿನಾಶಕ ಸಿಂಪಡಣೆ ಇತ್ಯಾದಿ ಕೆಲಸವನ್ನು ಸಿಬ್ಬಂದಿ ನಿರ್ವಹಿಸಿರುವುದು ಪರಿಸರದ ಸ್ವಚ್ಛತೆಗೆ ಸಹಕಾರಿಯಾಗಲಿದೆ.
ಆದ್ದರಿಂದ ಈ ಕಾರ್ಯವನ್ನು ಕನಿಷ್ಠ 15 ದಿನಗಳಿಗೆ ಒಮ್ಮೆ ನಿರಂತರ ನಡೆಸಬೇಕು ಎಂದು ಪಂಚಾಯಿತಿ ಆಡಳಿತ ವರ್ಗಕ್ಕೆ ಸಂಘದ ಗೌರವಾಧ್ಯಕ್ಷ ಜೆ.ಪರಶುರಾಮ್, ಅಧ್ಯಕ್ಷ ಎಸ್.ಮಂಜುನಾಥ, ಕಾರ್ಯದರ್ಶಿ ಜ್ಞಾನಮೂರ್ತಿ ಹಾಗೂ ನಿರ್ದೇಶಕರು ಕೋರಿದ್ದಾರೆ.