ಕೃತಜ್ಞತೆ ಪೂರಕವಾಗಿ ತಿನಿಸು ವಿತರಣೆ

ctd 1 parivara seve
Published on

ಚಿತ್ರದುರ್ಗ: ಲಾಕ್‌ಡೌನ್ ವೇಳೆ ಜನರ ಸುರಕ್ಷತೆಗಾಗಿ ಶ್ರಮಿಸುತ್ತಿರುವ ಪೊಲೀಸರು, ಗೃಹರಕ್ಷಕ ದಳ ಸಿಬ್ಬಂದಿಗೆ ಹಾಗೂ ನಗರದ ಸ್ವಚ್ಛತೆಗಾಗಿ ಶ್ರಮಿಸುತ್ತಿರುವ ಪೌರ ಕಾರ್ಮಿಕರಿಗೆ ವಿಎಚ್‌ಪಿ, ಬಜರಂಗದಳ ಕಾರ್ಯಕರ್ತರು ಕೃತಜ್ಞತಾ ಪೂರಕವಾಗಿ ಏ.15ರವರೆಗೆ ನಿತ್ಯ ಬಿಸ್ಕೆಟ್ ಮತ್ತಿತರ ಲಘು ತಿನಿಸು, ನೀರಿನ ಬಾಟಲ್ ವಿತರಿಸಲಿದ್ದಾರೆ.

ನಗರದಲ್ಲಿ 400ಕ್ಕೂ ಹೆಚ್ಚು ಪೊಲೀಸ್-ಗೃಹರಕ್ಷಕ ದಳ ಸಿಬ್ಬಂದಿ ಹಾಗೂ 200 ಪೌರಕಾರ್ಮಿಕರು ಕರ್ತವ್ಯ ನಿರ್ವಹಣೆಯಲ್ಲಿ ತೊಡಗಿಸಿ ಕೊಂಡಿದ್ದಾರೆ. ಪೌರಕಾರ್ಮಿಕರಿಗೆ ಮುಂಜಾನೆ 5.30ಕ್ಕೆ ನಗರಸಭೆ ಆವರಣದಲ್ಲಿ ಹಾಗೂ ರಕ್ಷಣಾ ಸಿಬ್ಬಂದಿಗೆ ಪಾಯಿಂಟ್‌ಗಳಲ್ಲಿ ತಿನಿಸು ವಿತರಿಸಲಾಗುತ್ತಿದೆ.

ಸೋಂಕು ಭೀತಿ ಸಂದರ್ಭದಲ್ಲಿ ಎಲ್ಲರಿಗೂ ಸ್ಯಾನಿಟೈಸರ್, ಮಾಸ್ಕ್ ಹಾಗೂ ನಗರದಲ್ಲಿ ಸಂಕಷ್ಟಕ್ಕೆ ಸಿಲುಕಿರುವ 500 ಕುಟುಂಬಗಳನ್ನು ಸದ್ಯ ಗುರುತಿಸಿದ್ದು, ಈ ಕುಟುಂಬಗಳಿಗೆ ಮಾ.3ರಿಂದ ಅಗತ್ಯ ಆಹಾರಧಾನ್ಯ ಇತ್ಯಾದಿಗಳಿಗೆ ಕಿಟ್‌ಗಳನ್ನು ವಿತರಿಸಲಾಗುವುದು. ನೊಂದವರ ನೆರವಿಗಾಗಿ ಸ್ಥಾಪಿಸಿರುವ ಸಹಾಯವಾಣಿ ಕಾರ್ಯಾರಂಭ ಮಾಡಲಿದೆ ಎಂದು ಪರಿವಾರ ಪ್ರಮುಖ ಟಿ.ಬದ್ರಿನಾಥ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net