ವಾಸವಿ ಜಯಂತಿ ಅಂಗವಾಗಿ ದಿನಸಿ ಕಿಟ್ ವಿತರಣೆ

ctd 5 vasavi devi
Published on

ಚಿತ್ರದುರ್ಗ: ವಾಸವಿ ಜಯಂತಿ ಅಂಗವಾಗಿ ನಗರದ ವಾಸವಿ ದೇವಾಲಯದಲ್ಲಿ ಶನಿವಾರ ವಿಶೇಷ ಪೂಜೆಗಳು ನಡೆದವು.

ಲಾಕ್‌ಡೌನ್ ಹಿನ್ನೆಲೆಯಲ್ಲಿ ಐದು ಜನ ಮೀರದಂತೆ ದೇವಾಲಯ ಸಮಿತಿಯ ಪ್ರಮುಖರ ಸಮ್ಮುಖದಲ್ಲಿ ಅರ್ಚಕರು ಫಲಪಂಚಾಮೃತ ಅಭಿಷೇಕ , ವಾಸವಿ ಹೋಮ, ಪ್ರಾಕಾರೋತ್ಸವ, ಅಷ್ಟಾವಧಾನ ಸೇವೆ ಹಾಗೂ ಮಹಾಮಂಗಳಾರತಿ ನೆರವೇರಿಸಿದರು.

ಕಾರ‌್ಯಕ್ರಮ ಸರಳವಾಗಿ ನಡೆದಿದ್ದರಿಂದ, ನಗರದ ಹಲವು ಬಡವರಿಗೆ, ಅಶಕ್ತ ಕಲಾವಿದರಿಗೆ, ಕೋಟೆ ಗೈಡ್‌ಗಳಿಗೆ ಹಾಗೂ ಸಿನಿಮಾ ಮಂದಿರಗಳ ಸಿಬ್ಬಂದಿಗೆ ದಿನಸಿ ಕಿಟ್ ವಿತರಿಸಲಾಯಿತು ಹಾಗೂ ರಕ್ತದಾನ ಶಿಬಿರ ಏರ್ಪಡಿಸಲಾಗಿತ್ತು. ಶಿಬಿರದಲ್ಲಿ ನೂರು ಯೂನಿಟ್ ರಕ್ತ ಸಂಗ್ರಹವಾಯಿತೆಂದು ಆರ್ಯ ವೈಶ್ಯ ಸಮಾಜದ ಅಧ್ಯಕ್ಷ ಕಾಶಿ ವಿಶ್ವನಾಥ ಶೆಟ್ಟಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net