ತಾತ್ಕಾಲಿಕ ತರಕಾರಿ ಮಾರುಕಟ್ಟೆಗೆ ಬ್ಯಾರಿಕೇಡ್

CTD 28 BARICED (2)
Published on

ಚಿತ್ರದುರ್ಗ: ನಗರದ ಮುರುಘ ರಾಜೇಂದ್ರ ಮೈದಾನದಲ್ಲಿ ಶನಿವಾರ ಆರಂಭವಾದ ತರಕಾರಿ ಮಾರುಕಟ್ಟೆ ಗ್ರಾಹಕರ ದಟ್ಟಣೆಗೆ ಕಾರಣವಾಗಿದ್ದು, ಕರೊನಾ ಸೋಂಕು ನಿಯಂತ್ರಣ ನಿಟ್ಟಿನಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳ ಬೇಕೆಂಬ ಸೂಚನೆ ವಿಫಲವಾಯಿತು.ಶ್ರಿ

ಸಗಟು ವಹಿವಾಟಿಗೆಂದು ಗುರುತಿಸಿದ್ದ ಸ್ಥಳದಲ್ಲೇ ಚಿಲ್ಲರೆಯಾಗಿಯೂ ತರಕಾರಿ ಮಾರಾಟವಾಗಿದ್ದರಿಂದಾಗಿ ಜನ ಗುಂಪು ಹೆಚ್ಚಿತ್ತು.

ರೈತರು ತರಕಾರಿಯನ್ನು ಇಲ್ಲಿ ಸಗಟು ದರದಲ್ಲಿ ಮಾರಲು ನಗರಸಭೆ-ಜಿಲ್ಲಾಡಳಿತ ವ್ಯವಸ್ಥೆ ಕಲ್ಪಿಸಿದ್ದು, ಖರೀದಿಸಿದ ತರಕಾರಿಯನ್ನು ನಗರದ ಎಲ್ಲ ವಾರ್ಡ್‌ಗಳಲ್ಲಿ ಪ್ರತ್ಯೇಕವಾಗಿ ಮಾರಬೇಕೆಂಬ ಪ್ಲಾನ್ ಮೊದಲ ದಿನ ಸಂಪೂರ್ಣ ಸಮಂಜಸವಾಗಿ ಅನುಷ್ಠಾನ ವಾಗಲಿಲ್ಲ. ಈ ಹಿನ್ನೆಲೆಯಲ್ಲಿ ತಕ್ಷಣ ಎಚ್ಚೇತ್ತ ಆಡಳಿತ ವರ್ಗ ಬ್ಯಾರಿಕೇಡ್ ಅಳವಡಿಸಿತು.

ಕಾರ್ಮಿಕರಿಗೆ ಸಮುದಾಯ ಭವನ: ವಲಸೆ ಬಂದಂಥ ಕಾರ್ಮಿಕರಿಗೆ ಸೌಲಭ್ಯಗಳನ್ನು ಕಲ್ಪಿಸಲು ಚಿತ್ರದುರ್ಗದಲ್ಲಿ ನಾಲ್ಕು ಹಾಗೂ ತಾಲೂಕಿಗೆ ಒಂದರಂತೆ ಸಮುದಾಯ ಭವನ, ಕಲ್ಯಾಣ ಮಂಟಪವನ್ನು ಗುರುತಿಸಲಾಗಿದೆ ಎಂದು ಜಿಲ್ಲಾ ಕಾರ್ಮಿಕ ಅಧಿಕಾರಿ ವಿನುತಾ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net