8ರಂದು ಪತಂಜಲಿ ಯೋಗ ಸಮಿತಿ ವಾರ್ಷಿಕೋತ್ಸವ

SP
Published on

ಚಿತ್ರದುರ್ಗ: ನಗರದ ಪತಂಜಲಿ ಯೋಗ ಸಮಿತಿ ಕೋಟೆ ಶಾಖೆ ಪ್ರಥಮ ವಾರ್ಷಿಕೋತ್ಸವ ಕಾರ‌್ಯಕ್ರಮ‘ಯೋಗ ಸಂಗಮ’ ಮಾ.8ರ ಮುಂಜಾನೆ 5 ಗಂಟೆಗೆ ನಗರದ ಮಹಾರಾಣಿ ಕಾಲೇಜು ಆವರಣದಲ್ಲಿ ಏರ್ಪಡಿಸಲಾಗಿದೆ.

ಎಸ್ಪಿ ಜಿ.ರಾಧಿಕಾ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಪತಂಜಲಿ ಯೋಗ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ, ಕೋಟೆ ಶಾಖೆ ಅಧ್ಯಕ್ಷ ಜಿ.ಶ್ರೀನಿವಾಸ್, ಭಾರತೀಯ ಪುರಾತತ್ವ ಸರ್ವೆಕ್ಷಣಾ ಇಲಾಖೆ ನಂದನ್‌ಕುಮಾರ್ ಮೊದಲಾದ ಪ್ರಮುಖರು ಉಪಸ್ಥಿತರಿರುತ್ತಾರೆ. ನಾನಾ ಯೋಗ ಶಿಕ್ಷಕರನ್ನು ಗೌರವಿಸಲಾಗುತ್ತದೆ ಎಂದು ಸಮಿತಿ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net